1,300 ಉದ್ಯೋಗಿಗಳ ಬೆನ್ನಲ್ಲೇ ಅಧ್ಯಕ್ಷರಿಗೂ ಗೇಟ್ ಪಾಸ್ – ‘ಜೂಮ್’ನಲ್ಲಿ ಸಿಬ್ಬಂದಿ ವೇತನಕ್ಕೂ ಕತ್ತರಿ..!

1,300 ಉದ್ಯೋಗಿಗಳ ಬೆನ್ನಲ್ಲೇ ಅಧ್ಯಕ್ಷರಿಗೂ ಗೇಟ್ ಪಾಸ್ – ‘ಜೂಮ್’ನಲ್ಲಿ ಸಿಬ್ಬಂದಿ ವೇತನಕ್ಕೂ ಕತ್ತರಿ..!

ಸಾವಿರಾರು ಉದ್ಯೋಗಿಗಳನ್ನ ಏಕಕಾಲಕ್ಕೆ ವಜಾಗೊಳಿಸಿ ಶಾಕ್ ನೀಡಿದ್ದ ಟೆಕ್ ದೈತ್ಯ ಸಂಸ್ಥೆಗಳು ಈಗ ಅಧ್ಯಕ್ಷರಿಗೂ ಕೊಕ್ ಕೊಡ್ತಿವೆ. ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್ ಫಾರ್ಮ್ ಆಗಿರುವ ಜೂಮ್ (Zoom) ಈಗ ತನ್ನ ಅಧ್ಯಕ್ಷ ಗ್ರೆಗ್ ಟಾಂಬ್ (Greg Tomb) ಅವರಿಗೆ ಗೇಟ್ ಪಾಸ್ ನೀಡಿದೆ. ಕಳೆದ ಫೆಬ್ರವರಿಯಲ್ಲಿ 1,300 ಉದ್ಯೋಗಿಗಳನ್ನ ಕಂಪನಿ ವಜಾಗೊಳಿಸಿ ಸುದ್ದಿಯಾಗಿತ್ತು.

ಗ್ರೆಗ್ ಟಾಂಬ್ ರನ್ನ 2022ರ ಜೂನ್ ತಿಂಗಳಿನಲ್ಲಿ ಜೂಮ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದ್ರೆ 10 ತಿಂಗಳ ಹಿಂದಷ್ಟೇ ಅಧ್ಯಕ್ಷ ಸ್ಥಾನಕ್ಕೇರಿದ್ದ ಟಾಂಬ್‌ರನ್ನು ಹಠಾತ್ತನೆ ವಜಾಗೊಳಿಸಲಾಗಿದೆ. ಆದ್ರೆ ಜೂಮ್‌ನ ಮುಂದಿನ ಅಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಇದನ್ನೂ ಓದಿ : ಶೂಟಿಂಗ್ ವೇಳೆ ಬಿದ್ದು ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ – ಸ್ಕ್ಯಾನಿಂಗ್ ನಲ್ಲಿ ಆತಂಕಕಾರಿ ಮಾಹಿತಿ!

ಟಾಂಬ್ ಉದ್ಯಮಿಯಾಗಿದ್ದು ಈ ಹಿಂದೆ ಗೂಗಲ್‌ನಲ್ಲೂ ಕಾರ್ಯನಿರ್ವಹಿಸಿದ್ದರು. ಜೂಮ್ ಕಂಪನಿ ಸಿಇಒ ಆಗಿರುವ ಎರಿಕ್ ಯುವಾನ್ 2011ರಲ್ಲಿ ಕಂಪನಿಯನ್ನ ಸ್ಥಾಪಿಸಿದ್ದು, ಕೊವಿಡ್ ಕಾಲದಲ್ಲಿ ಭಾರೀ ಯಶಸ್ಸು ಕಂಡಿತ್ತು. ಲಾಕ್‌ಡೌನ್ ವೇಳೆ ಕಂಪನಿಗಳ ಮೀಟಿಂಗ್ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜೂಮ್ ಅತ್ಯಂತ ಉಪಯುಕ್ತವಾಗಿತ್ತು. ಇದೀಗ ಲಾಕ್‌ಡೌನ್ ಕಳೆದು, ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಕಂಪನಿಯನ್ನು ಆರ್ಥಿಕವಾಗಿ ನಿಭಾಯಿಸಲು ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.

ಕಳೆದ ತಿಂಗಳು ಅಂದ್ರೆ ಫೆಬ್ರವರಿಯಲ್ಲಿ ಕಂಪನಿ ತನ್ನ ಶೇ.15ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದರ ಪ್ರಕಾರ, ಕಂಪನಿಯ ಸುಮಾರು 1,300 ಉದ್ಯೋಗಿಗಳನ್ನು ಜೂಮ್ ಇತ್ತೀಚೆಗೆ ವಜಾಗೊಳಿಸಿದೆ. ಹಾಗೂ ಇರುವ ಉದ್ಯೋಗಿಗಳಿಗೆ ಯಾವುದೇ ಬೋನಸ್ ನೀಡಲಾಗ್ತಿಲ್ಲ. ಮತ್ತು ಶೇಕಡಾ 20ರಷ್ಟು ವೇತನವನ್ನ ಕಡಿತಗೊಳಿಸಲಾಗುತ್ತಿದೆ.

suddiyaana