ಕುದುರೆ ಏರಿ ಹೊರಟ ಝೊಮ್ಯಾಟೊ ಡೆಲಿವರಿ ಬಾಯ್! – ಕುದುರೆ ಮೇಲೆಯೇ ಸವಾರಿ ಮಾಡಲು ಕಾರಣವೇನು ಗೊತ್ತಾ?

ಸಾಮಾನ್ಯವಾಗಿ ಫುಡ್ ಡೆಲಿವರಿ ಬಾಯ್ ಬೈಕ್, ಸ್ಕೂಟರ್ಗಳಲ್ಲಿ ಆಹಾರವನ್ನು ಸಾಗಿಸುತ್ತಾರೆ. ಫುಡ್ ಆರ್ಡರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಆಹಾರವನ್ನು ಗ್ರಾಹರಿಗೆ ತಲುಪಿಸುತ್ತಾರೆ. ಆದ್ರೆ ಇಲ್ಲೊಬ್ಬ ಝೊಮ್ಯಾಟೊ ಡೆಲಿವರಿ ಬಾಯ್ ಕುದುರೆ ಏರಿ ಫುಡ್ ಡೆಲಿವರಿ ಮಾಡಲು ಹೊರಟಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಹೈದರಾಬಾದ್ನಲ್ಲಿ ಈ ಘಟನೆ ಆಗಿದೆ. ಈ ಡೆಲಿವರಿ ಬಾಯ್ ಹೈದರಾಬಾದ್ನ ಜನನಿಬಿಡ ರಸ್ತೆಯಲ್ಲಿ ವಾಹನಗಳ ನಡುವೆ ಕುದುರೆ ಮೇಲೆ ಪಾರ್ಸೆಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾನು ಕುದುರೆ ಏರಿ ಆಹಾರ ತಲುಪಿಸಲು ಕಾರಣ ಅನ್ನೋದನ್ನು ಹೇಳಿದ್ದಾನೆ.
ಇದನ್ನೂ ಓದಿ: ರೈಲಿನ ಬೋಗಿಯಲ್ಲಿ ನೇತಾಡಿದ್ರೆ ಹುಷಾರ್! – ಒಳಗೆ ಹೋಗಿ ಅಂತಾ ಪ್ರಯಾಣಿಕರಿಗೆ ನಿಯಮ ಹೇಳಿಕೊಡುತ್ತೆ ಈ ಶ್ವಾನ!
ಹಿಟ್ ಆ್ಯಂಡ್ ರನ್ ಕಾನೂನು ಹಿಂಪಡೆಯುವ ಕುರಿತು ಟ್ರಕ್, ಬಸ್ ಚಾಲಕರು ದೇಶದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.ರಸ್ತೆಗಳಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಮೂರು ಗಂಟೆಗಳ ಕಾಲ ಪೆಟ್ರೋಲ್ ಬಂಕ್ನಲ್ಲಿ ನಿಂತಿದ್ದೆ. ಆದರೂ ಪೆಟ್ರೋಲ್ ಸಿಕ್ಕಿಲ್ಲ. ಹೀಗಾಗಿ ತನ್ನ ಬೈಕ್ ಅನ್ನು ಪೆಟ್ರೋಲ್ ಬಂಕ್ ಬಳಿಯೇ ಬಿಟ್ಟು ಕುದುರೆ ಬಾಡಿಗೆಗೆ ತೆಗೆದುಕೊಂಡು ಸವಾರಿ ಮುಂದುವರೆಸಿದೆ ಎಂದು ಹೇಳಿದ್ದಾನೆ.
ಡೆಲಿವರಿ ಬಾಯ್ ಕುದುರೆಯ ಮೇಲೆ ಆಹಾರವನ್ನು ತಲುಪಿಸಲು ಇಂಪೀರಿಯಲ್ ಹೋಟೆಲ್ ಬಳಿಯ ಚಂಚಲಗುಡಕ್ಕೆ ಬಂದಿದ್ದಾರೆ. ಟ್ರಕ್ ಡ್ರೈವರ್ಗಳ ಮುಷ್ಕರದಿಂದಾಗಿ ಪೆಟ್ರೋಲ್ ಕೊರತೆ ಉಂಟಾಗಿದ್ದು, ಯುವಕನಿಗೆ ಕುದುರೆಯ ಮೇಲೆ ಆಹಾರವನ್ನು ತಲುಪಿಸುವುದು ಅನಿವಾರ್ಯವಾಗಿತ್ತು ಅಂತಾ ಯುವಕ ಹೇಳಿದ್ದಾನೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಹಿಟ್ ಆ್ಯಂಡ್ ರನ್ ಕೇಸ್ನಲ್ಲಿ ಹೊಸ ನಿಬಂಧನೆಗಳನ್ನು ಜಾರಿಗೆ ತಂದಿದೆ.ದರ ಅಡಿಯಲ್ಲಿ 7 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಕಾನೂನು ವಿರೋಧಿಸಿ ಟ್ರಕ್, ಬಸ್, ಅನೇಕ ಸಂಘಟನೆಗಳು ಮುಷ್ಕರ ನಡೆಸಿದ್ದವು. ಆದರೆ, ಈ ಹೊಸ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರುವುದಿಲ್ಲ ಎಂದು ಸರ್ಕಾರ ಈಗಷ್ಟೇ ಘೋಷಿಸಿದೆ.