ಭಾರತ ಅಂದ್ರೆ ZIMಗೂ ಭಯವಿಲ್ಲ – ಸರಣಿಗೂ ಮೊದ್ಲೇ ಸಿಕಂದರ್ ವಾರ್ನಿಂಗ್
3ನೇ ಸರಣಿನಾದ್ರೂ ಗೆಲ್ತಾರಾ ಶ್ರೇಯಸ್?

ಭಾರತ ಅಂದ್ರೆ ZIMಗೂ ಭಯವಿಲ್ಲ – ಸರಣಿಗೂ ಮೊದ್ಲೇ ಸಿಕಂದರ್ ವಾರ್ನಿಂಗ್3ನೇ ಸರಣಿನಾದ್ರೂ ಗೆಲ್ತಾರಾ ಶ್ರೇಯಸ್?

ಭಾರತ ಮತ್ತು ಜಿಂಬಾಬ್ವೆ ನಡುವೆ ನಾಳೆಯಿಂದ ಮೂರು ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗಲಿದೆ. ನಾಲ್ಕು ದಿನಗಳಲ್ಲೇ ಮೂರು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ. ಇತ್ತೀಚಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ಟಿ-20ಐ ತಂಡ ಕ್ಲೀನ್ ಸ್ವೀಪ್ ಆಗಿದೆ. ಹೀಗಾಗಿ ಈ ಸರಣಿ ಗೆದ್ದು ಗೆಲುವಿನ ಟ್ರ್ಯಾಕ್​ಗೆ ಬರೋಕೆ ಕಾಯ್ತಾ ಇದ್ದಾರೆ. ಆದ್ರೆ ಟೀಂ ಇಂಡಿಯಾ ಸಿಚುಯೇಷನ್ ನೋಡಿ ಜಿಂಬಾಬ್ವೆ ನಾಯಕ ಸಿಖಂದರ್ ರಾಜಾ ಭಾರತ ತಂಡ ನಮಗೆ ಲೆಕ್ಕಕ್ಕೇ ಇಲ್ಲ ಅನ್ನೋ ಥರ ಮಾತ್ನಾಡಿದ್ದಾರೆ.

ಇದನ್ನೂ ಓದಿ  : 4-3=1.. ಗಿಲ್ ಗೆ ಸಿಗ್ತಿಲ್ಲ ಗೆಲುವು – ODIಗೂ ಕುತ್ತು ತಂದ ಗಂಭೀರ್

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ 7 ಮ್ಯಾಚ್ ಆಡಿದ್ರೂ ಒಂದೇ ಒಂದು ಪಂದ್ಯ ಗೆಲ್ಲೋಕೆ ಆಗಿಲ್ಲ. ಈಗ ನಾಳೆಯಿಂದ ಜಿಂಬಾಬ್ವೆ ವಿರುದ್ಧ ಅಖಾಡಕ್ಕಿಳೀತಾರೆ. ಜಿಂಬಾಬ್ವೆ ಮೊದ್ಲೆಲ್ಲಾ ಡಮ್ಮಿ ಟೀಂ ಅನ್ಸಿದ್ರೂ ಈಗ ತಂಡದಲ್ಲಿ ಸಾಕಷ್ಟು ಇಂಪ್ರೂವ್​ಮೆಂಟ್ಸ್ ಆಗಿದೆ. ಅದ್ರಲ್ಲೂ ಟಿ-20 ವಿಶ್ವಕಪ್​ನಲ್ಲಿ ಸೂಪರ್ ಡೂಪರ್ ಪ್ರದರ್ಶನ ನೀಡಿದ್ರು. ಬಲಿಷ್ಠ ತಂಡಗಳಿಗೂ ಮಣ್ಣು ಮುಕ್ಕಿಸಿದ್ರು. ಅದೇ ಟಿ-20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ಸ್ ಆಗಿದ್ರೂ ಈಗ ಖದರ್ ಕಳ್ಕೊಂಡು ಮಂಕಾಗಿದೆ.

ಭಾರತ ಸರಣಿ ಗೆಲ್ಲೋ ಫೇವರೆಟ್ ಟೀಂ ಅಲ್ಲ ಎಂದ ರಾಜಾ!

ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಸರಣಿಗೂ ಮುನ್ನ ಭಾರತಕ್ಕೆ ವಾರ್ನಿಂಗ್ ಕೊಡೋ ಥರ ಮಾತ್ನಾಡಿದ್ದಾರೆ. ಗೆಲುವು ಮತ್ತು ಸೋಲಿನ ವಿಷಯದಲ್ಲಿ, ಎರಡೂ ತಂಡಗಳು ಈ ಸರಣಿಯನ್ನು ಗೆಲ್ಲುವ ಸಮಾನ ಅವಕಾಶವನ್ನು ಹೊಂದಿರುತ್ತವೆ. ಭಾರತವು ಪ್ರಸ್ತುತ ಪರಿವರ್ತನೆಯ ಅವಧಿಯಲ್ಲಿ ಸಾಗುತ್ತಿದೆ, ಇದು ಈ ಸರಣಿಯನ್ನು ಇನ್ನಷ್ಟು ರೋಚಕಗೊಳಿಸುತ್ತದೆ. ಇದು ಏಕಪಕ್ಷೀಯ ಸರಣಿಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ಫೆಬ್ರವರಿಯಲ್ಲಿ ಕೊಲಂಬೊದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾವನ್ನು 23 ರನ್‌ಗಳಿಂದ ಸೋಲಿಸಿತು. ಅಲ್ಲದೇ ಈ ವರ್ಷ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧವೂ ತಂಡ ಗೆಲುವು ಸಾಧಿಸಿತ್ತು. ಸೂಪರ್ ಎಂಟರಲ್ಲಿ ಸ್ಥಾನ ಪಡೆದರು. ಆ ಗೆಲುವುಗಳು ಬಲಿಷ್ಠ ತಂಡಗಳಿಗೆ ಸವಾಲು ಹಾಕುವ ಜಿಂಬಾಬ್ವೆಯ ಸಾಮರ್ಥ್ಯವನ್ನು ತೋರಿಸಿದ್ದು ಕಾನ್ಫಿಡೆನ್ಸ್ ಜಾಸ್ತಿ ಮಾಡಿವೆ. ಹಾಗೇ ಟೀಂ ಇಂಡಿಯಾ ಸ್ಟ್ರಗಲ್ಸ್ ಕೂಡ ಸಾಕಷ್ಟು ಪ್ರಶ್ನೆಗಳನ್ನ ಮೂಡಿಸಿದೆ.

ಬ್ಯಾಕ್ ಟು ಬ್ಯಾಕ್ ಕ್ಲೀನ್ ಸ್ವೀಪ್ ಆಗಿರುವ ಭಾರತ!

2026ರ ಟಿ-20 ವಿಶ್ವಕಪ್ ಬಳಿಕ ಶ್ರೇಯಸ್ ಅಯ್ಯರ್ ಭಾರತ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಆದಾಗ್ಯೂ, ಅವರ ಕ್ಯಾಪ್ಟನ್ಸಿ ಕರಿಯರ್ ಆರಂಭ ಚೆನ್ನಾಗಿ ಆಗಿಲ್ಲ. ಭಾರತವು ಐರ್ಲೆಂಡ್ ವಿರುದ್ಧ 0-2 ಮತ್ತು ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸೋತಿದೆ. ಐರ್ಲೆಂಡ್ ದ್ವಿಪಕ್ಷೀಯ ಸರಣಿಯಲ್ಲಿ ಭಾರತವನ್ನು ಸೋಲಿಸಿದ್ದು ಇದೇ ಮೊದಲು. ಇಂಗ್ಲೆಂಡ್ ಕೂಡ ಭಾರತವನ್ನ ಸೋಲಿಸಿದ್ದು ಇದೇ ಮೊದಲು. ಈಗ ಜಿಂಜಾಬ್ವೆ ಪ್ರವಾಸದಲ್ಲಿರೋ ಭಾರತ ಶತಾಯ ಗತಾಯ ಸರಣಿ ಗೆಲ್ಲಲೇಬೇಕಿದೆ. ಮೆನ್ ಇನ್ ಬ್ಲೂ ತಂಡವು ಭಾರತ ಕೊನೆಯ ಬಾರಿಗೆ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು ಜುಲೈ 2024 ರಲ್ಲಿ. ಅದು ಐದು ಪಂದ್ಯಗಳ ಸರಣಿಯಾಗಿತ್ತು, ಮತ್ತು ಭಾರತ ಮೊದಲ ಟಿ20ಐ ಅನ್ನು ಸೋತರೂ, ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಈಗ ಮೂರು ಪಂದ್ಯಗಳ ಸರಣಿ ನಡೆಯಲಿದ್ದು ಒತ್ತಡ ಜಾಸ್ತಿನೇ ಇದೆ. ಒಂದ್ಕಡೆ ಗೆದ್ದೇ ಗೆಲ್ತೀವಿ ಅನ್ನೋ ಕಾನ್ಫಿಡೆನ್ಸ್​ನಲ್ಲಿರೋ ಜಿಂಬಾಬ್ವೆ ಮತ್ತೊಂದ್ಕಡೆ ಗೆಲ್ಲಲೇಬೇಕಾದ ಪ್ರೆಶರ್​ನಲ್ಲಿರೋ ಭಾರತ. ಈ ಬ್ಯಾಟಲ್ ಕೂಡ ಇಂಟ್ರೆಸ್ಟಿಂಗ್ ಆಗಿರಲಿದೆ.

Shantha Kumari

Leave a Reply

Your email address will not be published. Required fields are marked *