4ನೇ ಮ್ಯಾಚ್ ನೂ ಕೈಚೆಲ್ಲುತ್ತಾ IND? – ಮ್ಯಾಂಚೆಸ್ಟರ್ ನಲ್ಲಿ ಗೆದ್ದೇ ಇಲ್ಲ ಭಾರತ
35 ವರ್ಷ.. ಶತಕ ಬಂದಿಲ್ಲ.. ಈ ಸಲ?

4ನೇ ಮ್ಯಾಚ್ ನೂ ಕೈಚೆಲ್ಲುತ್ತಾ IND? – ಮ್ಯಾಂಚೆಸ್ಟರ್ ನಲ್ಲಿ ಗೆದ್ದೇ ಇಲ್ಲ ಭಾರತ35 ವರ್ಷ.. ಶತಕ ಬಂದಿಲ್ಲ.. ಈ ಸಲ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲಬಹುದಾಗಿದ್ದ ಎರಡು ಪಂದ್ಯಗಳನ್ನ ತನ್ನದೇ ತಪ್ಪಿನಿಂದ ಕಳ್ಕೊಳ್ತು. ಫಸ್ಟ್ ಮ್ಯಾಚಲ್ಲಿ 350+ ಟಾರ್ಗೆಟ್ ನೀಡಿಯೂ ಸೋಲಬೇಕಾಯ್ತು. ಮೂರನೇ ಪಂದ್ಯದಲ್ಲಿ 193 ರನ್​ಗಳ ಸಾಧಾರಣ ಮೊತ್ತವನ್ನ ಚೇಸ್ ಮಾಡೋಕಾಗದೇ ಕೈಚೆಲ್ಲಿದ್ರು. ಸೋ ಎರಡು ಪಂದ್ಯಗಳನ್ನ ಗೆದ್ದಿರೋ ಇಂಗ್ಲೆಂಡ್ ತಂಡ ಸರಣಿಯಲ್ಲಿ ಲೀಡ್ ಸಾಧಿಸಿದೆ. ಇದೀಗ ನಾಲ್ಕನೇ ಪಂದ್ಯ ಭಾರತದ ಪಾಲಿಗೆ ಡು ಆರ್ ಡೈ ಮ್ಯಾಚ್ ಆಗಿದೆ.

ಇದನ್ನೂ ಓದಿ : 4 ವರ್ಷಗಳ ಬಳಿಕ ಮೈದಾನಕ್ಕೆ ಎಬಿ ಡಿವಿಲಿಯರ್ಸ್ – ದಿಗ್ಗಜರ ಜಟಾಪಟಿಗೆ ಕೌಂಟ್ ಡೌನ್!

ಭಾರತ ಮತ್ತು ಇಂಗ್ಲೆಂಡ್ ನಡವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಿಂದ ಆರಂಭ ಆಗ್ಲಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್​ನಲ್ಲಿ ನಡೆಯಲಿರೋ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮೋಸ್ಟ್ ಇಂಪಾರ್ಟೆಂಟ್. ಈ ಮ್ಯಾಚ್​ನ ಗೆದ್ದು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳೋದು ಆಂಗ್ಲರ ಪ್ಲ್ಯಾನ್. ಆದ್ರೆ ಸರಣಿ ಸಮಬಲ ಆಗ್ಬೇಕು ಅಂದ್ರೆ ಭಾರತ ಗೆಲ್ಲಲೇಬೇಕು. ಹೀಗಾಗಿ ಶುಭ್​ಮನ್ ಗಿಲ್ ನೇತೃತ್ವದ ಭಾರತ ತಂಡ ನೆಟ್ಸ್‌ನಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸ್ತಿದೆ. ಆದ್ರೆ ಮ್ಯಾಂಚೆಸ್ಟರ್ ಮೈದಾನ ಮತ್ತೊಮ್ಮೆ ಕಬ್ಬಿಣದ ಕಡಲೆಯಾಗುತ್ತಾ ಅನ್ನೋ ಆತಂಕ ಮೂಡಿಸಿದೆ.

ಭಾರತ ಎರಡು ಪಂದ್ಯಗಳನ್ನ ಸೋತಿದ್ರೂ ಕೂಡ ಬಹುತೇಕ ಸೆಷನ್​ಗಳಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿತ್ತು. ಅದ್ರಲ್ಲೂ ಎರಡನೇ ಪಂದ್ಯವನ್ನ ಭರ್ಜರಿಯಾಗಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಎಡ್ಜ್‌ಬಾಸ್ಟನ್ ಟೆಸ್ಟ್ ಗೆಲ್ಲುವ ಮೂಲಕ ಇಂಗ್ಲಿಷ್ ಭದ್ರಕೋಟೆಯನ್ನು ಇದೇ ಮೊದಲ ಬಾರಿಗೆ ಬೇಧಿಸಿತ್ತು. ಈಗ ಮ್ಯಾಂಚೆಸ್ಟರ್​ನಲ್ಲೂ ಅಂಥದ್ದೇ ಮೈಲುಗಲ್ಲು ಸ್ಥಾಪಿಸೋ ಸುವರ್ಣಾವಕಾಶ ಇದೆ. ಯಾಕಂದ್ರೆ ಇದುವರೆಗೆ, ಟೀಮ್ ಇಂಡಿಯಾ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳು ನಡೆದಿವೆ. ಅವುಗಳಲ್ಲಿ ನಾಲ್ಕರಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ಐದು ಟೆಸ್ಟ್‌ಗಳು ಡ್ರಾದಲ್ಲಿ ಕೊನೆಗೊಂಡಿವೆ. ಕೊನೆಯ ಬಾರಿಗೆ 2014 ರಲ್ಲಿ ಈ ಮೈದಾನದಲ್ಲಿ ಉಭಯ ರಾಷ್ಟ್ರಗಳು ಕಣಕ್ಕಿಳಿದಿದ್ವು. ಈಗ, 11 ವರ್ಷಗಳ ನಂತರ, ಭಾರತ ಮತ್ತೆ ಈ ಪ್ರತಿಷ್ಠಿತ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಪಿಚ್​ನಲ್ಲಿ ಯಾರು ಸೆಂಚುರಿ ಸಿಡಿಸ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.

ಯೆಸ್. ಟೀಂ ಇಂಡಿಯಾ ಈ ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ಜಬರ್ದಸ್ತ್ ಪರ್ಫಾಮೆನ್ಸ್​ನೇ ನೀಡ್ತಿದೆ. ಮೂರೂ ಪಂದ್ಯಗಳಲ್ಲೂ ಭಾರತದ ಪರ ಶತಕಗಳು ಬಂದಿದೆ. ಬಟ್ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಯಾರು ಶತಕ ಸಿಡಿಸ್ತಾರೆ ಅನ್ನೋದೇ ಕುತೂಹಲ. ಯಾಕಂದ್ರೆ ಈ ಮೈದಾನದಲ್ಲಿ ಭಾರತೀಯ ಬ್ಯಾಟರ್ ಶತಕ ಸಿಡಿಸಿ ಬರೋಬ್ಬರಿ 35 ವರ್ಷಗಳು ಕಳೆದಿವೆ. ಅಚ್ಚರಿ ಅನ್ಸಿದ್ರೆ ಇದನ್ನ ನಂಬಲೇಬೇಕು. ಅಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ ಕೊನೇ ಬಾರಿ ಸೆಂಚುರಿ ಬಾರಿಸಿದ್ದು 1990 ರಲ್ಲಿ. ಅದು ಸಚಿನ್ ತೆಂಡೂಲ್ಕರ್. ಆಗ ಸಚಿನ್​ಗೆ ಕೇವಲ 17 ವರ್ಷ. ಇದಾದ ಬಳಿಕ ಖುದ್ದು ಸಚಿನ್ ತೆಂಡೂಲ್ಕರ್​ಗೂ ಕೂಡ ಓಲ್ಡ್​ ಟ್ರಾಫೋರ್ಡ್​ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇತ್ತ ಶತಕಗಳ ಸರದಾರ ವಿರಾಟ್ ಕೊಹ್ಲಿ ಕೊಹ್ಲಿ ಬ್ಯಾಟ್​ನಿಂದಲೂ ಮೂರಂಕಿ ಮೊತ್ತ ಗಳಿಸಿಲ್ಲ. ಹೀಗಾಗಿಯೇ ಈ ಬಾರಿ ಸೆಂಚುರಿ ಸಿಡಿಸುವ ಸರದಾರ ಯಾರೆಂಬ ಕುತೂಹಲ ಎಲ್ಲರಲ್ಲಿದೆ.

 ಮ್ಯಾಂಚೆಸ್ಟರ್ ಚಾಲೆಂಜ್!

ಓಲ್ಡ್ ಟ್ರೋಫರ್ಡ್​ ನಲ್ಲಿ ಕೇವಲ 8 ಭಾರತೀಯರಿಂದ ಶತಕ

1936 ರಲ್ಲಿ ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಮರ್ಚೆಂಟ್

ಶತಕಗಳ ನೆರವಿನೊಂದಿಗೆ ಆ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿ

1959 ರಲ್ಲಿ, ಅಬ್ಬಾಸ್ ಅಲಿ ಬೇಗ್ ಇದೇ ಮೈದಾನದಲ್ಲಿ ಸೆಂಚುರಿ

1959 ರಲ್ಲಿ ಪಾಲಿ ಉಮ್ರಿಗರ್, 1974 ರಲ್ಲಿ ಸುನಿಲ್ ಗವಾಸ್ಕರ್

1982 ರಲ್ಲಿ ಸಂದೀಪ್ ಪಾಟೀಲ್, 1990 ರಲ್ಲಿ ಅಝರುದ್ದೀನ್ ಹಾಗೂ

ಇಂಗ್ಲೆಂಡ್ ಪಿಚ್​​ಗಳು ಬೇರೆ ತಂಡಗಳಿಗೆ ಮೊದ್ಲಿಂದಲೂ ಸವಾಲೇ ಆಗಿವೆ. ಭಾರತ ತಂಡದ ಸೋಲಿಗೂ ಕೂಡ ಹಲವು ಕಾರಣಗಳಿವೆ. ಈ ಮೈದಾನದ ಪಿಚ್ ಹೆಚ್ಚಾಗಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಈ ಗ್ರೀನ್​ ವಿಕೆಟ್ ಮೇಲೆ ಪೇಸರ್ಸ್ ಡಾಮಿನೇಟ್ ಮಾಡ್ತಾರೆ. ಹೀಗಾಗೇ ಏಷ್ಯಾದ ತಂಡಗಳು ಇಲ್ಲಿ ಆಡುವುದು ತುಂಬಾ ಕಷ್ಟಕರವಾಗಿರುತ್ತದೆ. ಮ್ಯಾಂಚೆಸ್ಟರ್​ನಲ್ಲಂತೂ ಇಂಗ್ಲೆಂಡ್ ತಂಡ ಭರ್ಜರಿ ರೆಕಾರ್ಡ್ಸ್ ಹೊಂದಿದೆ. ಇದುವರೆಗೆ 84 ಟೆಸ್ಟ್‌ ಪಂದ್ಯಗಳಲ್ಲಿ, ಅತಿಥೇಯ ತಂಡವು 33 ಪಂದ್ಯಗಳನ್ನು ಗೆದ್ದಿದ್ದರೆ, 15 ಪಂದ್ಯಗಳನ್ನು ಸೋತಿದೆ. ಉಳಿದ 36 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

Shantha Kumari