ವಿದೇಶದಲ್ಲಿ ಇಲಿಯಾದ ಅಭಿಷೇಕ್! – ಟೆಸ್ಟ್‌ಗೆ ಚಹಲ್ ನಿವೃತ್ತಿ ಘೋಷಣೆ

ವಿದೇಶದಲ್ಲಿ ಇಲಿಯಾದ ಅಭಿಷೇಕ್! –  ಟೆಸ್ಟ್‌ಗೆ ಚಹಲ್ ನಿವೃತ್ತಿ ಘೋಷಣೆ
Mumbai, Feb 02 (ANI): India's Abhishek Sharma celebrates his century during the 5th T20I match against England, at Wankhede Stadium, in Mumbai on Sunday. (ANI Photo)

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ನಾಯಕ ಶುಭಮನ್‌ ಗಿಲ್‌ ಅವರಿಗೆ ಅಂತಿಮ ಪಂದ್ಯದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಅವರಿಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಅವರ ಸ್ಥಾನದಲ್ಲಿ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರು ರೋಹಿತ್‌ ಜತೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಇದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಆತಂಕ ಎದುರಾಗಿದೆ. ವೇಗಿ ಪ್ರಸಿದ್ಧ್ ಕೃಷ್ಣ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಅಂಶುಲ್ ಕಾಂಬೋಜ್ ತಂಡಕ್ಕೆ ಸೇರಿದ್ದಾರೆ. ಇದೇ ವೇಳೆ ವಾಷಿಂಗ್ಟನ್ ಸುಂದರ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಬಿಡುಗಡೆ ಮಾಡಲಾಗಿದೆ. ಅವರ ಬದಲಿಗೆ ನಾಮನ್ ಧೀರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಲಿವೆ. ಅಕ್ಟೋಬರ್ 7ರಂದು ಭಾರತ–ಆಸ್ಟ್ರೇಲಿಯಾ ಪಂದ್ಯದೊಂದಿಗೆ ಮುಖ್ಯ ಹಂತ ಆರಂಭವಾಗಲಿದೆ. ಅಕ್ಟೋಬರ್ 10ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಫೈನಲ್ ನವೆಂಬರ್ 21ರಂದು ನಡೆಯಲಿದೆ.

ಏಷ್ಯನ್‌ ಗೇಮ್ಸ್‌ನಲ್ಲೂ ಅಭಿಷೇಕ್ ಶರ್ಮಾ ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಅನ್ನೋದು ಮತ್ತೆ ಸಾಬೀತು ಮಾಡಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಒಮ್ಮೆಯೂ ಎರಡಂಕಿಯನ್ನು ತಲುಪದಿರುವುದು ಅವರು ವಿದೇಶಿ ನೆಲದಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವುದನ್ನು ಸಾಭೀತುಪಡಿಸುತ್ತದೆ. ಈ ಆರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಕ್ರಮವಾಗಿ 3, 1, 8, 2, 0 ಮತ್ತು 7 ರನ್ ಗಳಿಸಿದ್ದಾರೆ. ಹೀಗಾಗಿ ಅವರ ಪ್ರದರ್ಶನವು ಭಾರತೀಯ ತಂಡದ ನಿರ್ವಹಣೆ ಮತ್ತು ಆಯ್ಕೆದಾರರಿಗೆ ಆತಂಕ ಹೆಚ್ಚುವಂತೆ ಮಾಡಿದೆ.

ಶ್ರೀನಗರದಲ್ಲಿ ಆರಂಭವಾಗಿರುವ ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಕರ್ನಾಟಕದ ಯುವ ಬ್ಯಾಟರ್ ರವಿಚಂದ್ರನ್ ಸ್ಮರಣ್ ಗಮನ ಸೆಳೆದಿದ್ದಾರೆ. ತಂಡ 155ಕ್ಕೆ 7 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗೆ ಬಂದ ಸ್ಮರಣ್ 83 ಎಸೆತಗಳಲ್ಲಿ 68 ರನ್ ಸಿಡಿಸಿ ತಂಡವನ್ನು 237 ರನ್‌ಗಳವರೆಗೆ ಕೊಂಡೊಯ್ದರು. ಜಮ್ಮು-ಕಾಶ್ಮೀರದ ವೇಗದ ಬೌಲಿಂಗ್ ದಾಳಿಗೆ ಅವರು ತಾಳ್ಮೆಯ ಉತ್ತರ ನೀಡಿದರು.

ಅಕ್ಟೋಬರ್ 11ರಿಂದ ವಿಜಯವಾಡದಲ್ಲಿ ನಡೆಯಲಿರುವ ಆಂಧ್ರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಸೀಸನ್‌ ನ ಮೊದಲ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡವನ್ನು  ಪ್ರಕಟಿಸಲಾಗಿದೆ. ಭಾರತ ತಂಡದ ಹಿರಿಯ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ 15 ಸದಸ್ಯರ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇವದತ್ ಪಡಿಕ್ಕಲ್ ಅವರ ಅಲಭ್ಯತೆಯಲ್ಲಿ ಉಧಯೋನ್ಮುಖ ಬ್ಯಾಟರ್ ರವಿಚಂದ್ರನ್ ಸ್ಮರಣ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲಾಗಿದೆ.

ಇದನ್ನೂ ಓದಿ: IND Vs PAK ಫೈನಲ್ ಫೈಟ್ – ಶೇಕ್ ಹ್ಯಾಂಡ್ ಮಾಡಲ್ಲ ಇಂಡಿಯಾ

ಇರಾನಿ ಕಪ್‌ನಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮುನ್ನಡೆಸುತ್ತಿರುವ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ಜಮ್ಮು-ಕಾಶ್ಮೀರ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ ಕೇವಲ 10 ರನ್ ಗಳಿಸಿ ಔಟಾದರು. 36 ಎಸೆತಗಳನ್ನು ಎದುರಿಸಿದ ಅವರು ಕೇವಲ ಒಂದು ಬೌಂಡರಿ ಬಾರಿಸಿದರು. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮಿಂಚಬೇಕಿದ್ದ ಪಂತ್‌ಗೆ ಈ ಇನ್ನಿಂಗ್ಸ್ ಮತ್ತೊಂದು ಹಿನ್ನಡೆಯಾಗಿದೆ.

ತಮ್ಮ ಹೆಸರಿಗೆ ಮತ್ತೊಂದು ಐತಿಹಾಸಿಕ ದಾಖಲೆ ಸೇರಿಸಿದ್ದಾರೆ. ಭವಿಷ್ಯವನ್ನು ಬದಲಾಯಿಸುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಉದಯೋನ್ಮುಖ ತಾರೆಗಳನ್ನು ಗುರುತಿಸುವ ಪ್ರತಿಷ್ಠಿತ ‘ಟೈಮ್’  ನಿಯತಕಾಲಿಕೆಯ ‘TIME 100 Next 2026’ ಪಟ್ಟಿಯಲ್ಲಿ ವೈಭವ್ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ, ಈ ಇಡೀ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ ವೈಭವ್. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಈ ವರ್ಷ ಸ್ಥಾನ ಪಡೆದ ಏಕೈಕ ಭಾರತೀಯ ಮತ್ತು ಏಕೈಕ ಕ್ರಿಕೆಟಿಗ ಇವರೇ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಬೆರಳಿನ ಗಾಯದಿಂದ ಜೋಶ್ ಇಂಗ್ಲಿಸ್ ಮೊದಲ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಸ್ಯಾಮ್ ಹಾರ್ಪರ್ ಮತ್ತು ನಿಕ್ ಮ್ಯಾಡಿನ್ಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತ A ವಿರುದ್ಧದ ಪಂದ್ಯದಲ್ಲಿ ಹಾರ್ಪರ್ 128 ರನ್ ಗಳಿಸಿದ್ದರು. ಅಕ್ಟೋಬರ್ 9ರಿಂದ ಡರ್ಬನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.

ಪಾಕಿಸ್ತಾನದ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಇಂದು NCCIA ಮುಂದೆ ಹಾಜರಾಗಲಿದ್ದಾರೆ. ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ಮತ್ತು ಡ್ರೆಸ್ಸಿಂಗ್ ರೂಂ ಮಾಹಿತಿಗೆ ಸಂಬಂಧಿಸಿದ ತನಿಖೆಯ ಹಿನ್ನೆಲೆಯಲ್ಲಿ ಅವರ ಮೊಬೈಲ್ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ. ಆದರೆ ಹೊಸ ನೋಟಿಸ್‌ನಲ್ಲಿ ತನಿಖೆಯ ಕಾರಣದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಿಜ್ವಾನ್ ಪ್ರಶ್ನಿಸಿದ್ದಾರೆ. ತಮ್ಮ ವಕೀಲರೊಂದಿಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

ಟೀಂ ಇಂಡಿಯಾದ ಅನುಭವಿ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಭಾರತದ ಟೆಸ್ಟ್ ಕ್ಯಾಪ್ ಪಡೆಯುವ ಕನಸು ನನಗಿತ್ತು, ಆದರೆ ಅದು ಇನ್ನು ಮುಂದೆ ಸಾಧ್ಯವಿಲ್ಲ. ಆದಾಗ್ಯೂ ನಾನು ಭಾರತದ ಏಕದಿನ ಮತ್ತು ಟಿ20 ತಂಡಗಳಿಗೆ ಮರಳುವ ಆಶಯ ಹೊಂದಿರುವುದಾಗಿ ಚಾಹಲ್ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ

Kishor KV

Leave a Reply

Your email address will not be published. Required fields are marked *