ಸೆಹ್ವಾಗ್ ಮಗನಾಗಿದ್ದು ಆರ್ಯನಿಗೆ ನಷ್ಟ! ಕಂಬ್ಯಾಕ್‌ಗೆ ಸೂರ್ಯಕುಮಾರ್ ರೆಡಿ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ಬೌಲರ್‌ಗಳು ಕಮ್‌ಬ್ಯಾಕ್ ಮಾಡಿದ್ದಾರೆ. ಮೊದಲ ದಿನ ಸಂಕಷ್ಟಕ್ಕೆ ಸಿಲುಕಿದ್ದ ಕಿವೀಸ್ ತಂಡ, ಹೆನ್ರಿ ನಿಕೋಲ್ಸ್ ಹಾಗೂ ಗ್ಲೆನ್ ಫಿಲಿಪ್ಸ್ ನೆರವಿನಿಂದ 368 ರನ್ ಗಳಿಸಿ ಆಲೌಟ್ ಆಗಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಆಕಾಶ್ ದೀಪ್ 3 ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದ್ದಾರೆ. ಭಾರತ ಎರಡನೇ ದಿನ ಅಂತ್ಯದ ವೇಳೆಗೆ 159 ರನ್‌ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಮೊಹಮ್ಮದ್ ಸಿರಾಜ್ ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಭಾರತದ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ತಂಡದ ಮ್ಯಾನೇಜ್ ಮೆಂಟ್ ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಾವು ಮೊದಲ ದಿನವನ್ನು ಮಾತ್ರವಲ್ಲದೆ ಪಂದ್ಯದ ಐದೂ ದಿನಗಳನ್ನು ಗಮನದಲ್ಲಿಟ್ಟು ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದೇವೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಪ್ರದರ್ಶನದಿಂದಾಗಿ ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯು ತಮ್ಮ ಆತ್ಮವಿಶ್ವಾಸ ಹಾಗೂ ಫಾರ್ಮ್‌ಗೆ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಸೂರ್ಯ ಹೇಳಿರುವ ವರದಿಗಳೂ ಪ್ರಕಟವಾಗಿವೆ. ಇದೀಗ ಅವರ ಮುಂದಿನ ಪ್ರದರ್ಶನದ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದ್ದು, ಯಾವಾಗ ಟೀಂ ಇಂಡಿಯಾ ಕಂಬ್ಯಾಕ್ ಮಾಡ್ತಾರೆ ಅನ್ನೋ ಕುತೂಹಲ ಹೆಚ್ಚಿದೆ.
ಭಾರತದ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದ ಬಿಡುಗಡೆಯಾದ ಬೆನ್ನಲ್ಲೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಆಡಲು ಮರಳಿದ್ದಾರೆ. ಕೊನೆಯ ಮೂರು ಲೀಗ್ ಪಂದ್ಯಗಳಲ್ಲಿ ಕುಲದೀಪ್ ಉತ್ತರ ಪ್ರದೇಶ ತಂಡಕ್ಕೆ ಲಭ್ಯವಾಗಲಿದ್ದಾರೆ ದೇಶೀಯ ಟಿ20 ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಕುಲದೀಪ್ ಅವರಿಗೆ ಇದೀಗ ಅವಕಾಶ ದೊರೆತಿದೆ.
ಭಾರತದ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಟಿ20 ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹರಿಯಾಣ ಪರ ಆಡುತ್ತಿದ್ದಾಗ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 3/16 ಪ್ರದರ್ಶನ ನೀಡಿ ಈ ಮೈಲಿಗಲ್ಲು ತಲುಪಿದರು. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್ ಈಗ ಮೊದಲ ಸ್ಥಾನದಲ್ಲಿದ್ದಾರೆ. ಭುವಿ ಮತ್ತು ಬುಮ್ರಾ ನಂತರದ ಸ್ಥಾನಗಳಲ್ಲಿದ್ದಾರೆ.
ವೀರೇಂದ್ರ ಸಹ್ವಾಗ್ ಅವರಂತಹ ದಿಗ್ಗಜ ಆಟಗಾರನ ಮಗನಾಗಿರುವುದರಿಂದ ಆರ್ಯವೀರ್ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿರುತ್ತದೆ. ಆತ ಸ್ವಲ್ಪ ಎಡವಿದರೂ ತಂದೆಯ ಹೆಸರಿಗೆ ಹೋಲಿಸಿ ಟೀಕೆ ಮಾಡುವವರೇ ಹೆಚ್ಚು, ಅದರಿಂದ ಅವನಿಗೆ ನಷ್ಟ ಎಂದು ಸೆಹ್ವಾಗ್ ಹೇಳಿದ್ದಾರೆ. ಪ್ರಸಿದ್ಧ ಸರ್‌ನೇಮ್ ಇದ್ದಾಗ ಬರುವ ಟೀಕೆಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಂದೆಯ ನೆರಳಿನಿಂದ ಹೊರಬಂದು, ಮೈದಾನದಲ್ಲಿ ದೊಡ್ಡ ರನ್ ಗಳಿಸುವ ಮೂಲಕ ಆರ್ಯವೀರ್ ತನ್ನದೇ ಆದ ಸ್ವಂತ ಛಾಪು ಮತ್ತು ಗೌರವವನ್ನು ಗಳಿಸಬೇಕು ಎಂದು ಸೆಹ್ವಾಗ್ ಎಂದಿದ್ದಾರೆ.
ಇದನ್ನೂ ಓದಿ: RRಗೆ ಜೈಸ್ವಾಲ್ ಗುಡ್ ಬೈ? – ರಿಟೇನ್ ಆಗಿದ್ರೂ ಟ್ರೇಡ್ ಡೀಲ್
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ ಭಾರತ ತಂಡ ಸದ್ಯ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು, 4 ಸೋಲು ಹಾಗೂ 2 ಡ್ರಾ ಮೂಲಕ ಶೇ. 51.52ರಷ್ಟು ಅಂಕಗಳ ಸರಾಸರಿಯೊಂದಿಗೆ 4ನೇ ಸ್ಥಾನದಲ್ಲೇ ಉಳಿದಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಭಾರತ 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದರೆ, ಕಿವೀಸ್ ತಂಡವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರುವ ಅವಕಾಶ ಟೀಮ್ ಇಂಡಿಯಾಗೆ ಇದೆ.
ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಾಸ್ ಟೇಲರ್ ಐಪಿಎಲ್ ಟೂರ್ನಿಯು ನ್ಯೂಜಿಲೆಂಡ್ ಕ್ರಿಕೆಟ್‌ನ ಬೆಳವಣಿಗೆಗೆ ವೇಗ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ ಮೂಲಕ ನ್ಯೂಜಿಲೆಂಡ್ ಆಟಗಾರರಿಗೆ ಭಾರತೀಯ ಪರಿಸ್ಥಿತಿಗಳಲ್ಲಿ ಆಡುವ ಅನುಭವ, ವಿವಿಧ ಆಟಗಾರರೊಂದಿಗೆ ಬೆರೆಯುವ ಅವಕಾಶ ಹಾಗೂ ದೊಡ್ಡ ಮಟ್ಟದ ಸ್ಪರ್ಧಾತ್ಮಕ ಕ್ರಿಕೆಟ್ ಸಿಗುತ್ತಿದೆ. ಈ ಅನುಭವವು ನ್ಯೂಜಿಲೆಂಡ್ ಕ್ರಿಕೆಟ್‌ನ ಪ್ರತಿಭೆಗಳ ಬೆಳವಣಿಗೆಗೆ ನೆರವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನ ವಾಣಿಜ್ಯ ಯಶಸ್ಸಿನ ಎದುರು ನಿಲ್ಲಲಾಗದೆ ಪಾಕಿಸ್ತಾನ್ ಸೂಪರ್ ಲೀಗ್‌ನ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಮಾಲೀಕ ನದೀಮ್ ಓಮರ್ ತಮ್ಮ ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಐಪಿಎಲ್‌ಗೆ ಹೋಲಿಸಿದರೆ ಪಿಎಸ್‌ಎಲ್‌ನ ಮಾರುಕಟ್ಟೆ ಮತ್ತು ಆದಾಯ ಬಹಳ ಕಡಿಮೆ ಎಂದಿರುವ ಅವರು, ಪ್ರಾಯೋಜಕರು ಹಾಗೂ ಜೆರ್ಸಿ ಮಾರಾಟದ ಆದಾಯದ ಕೊರತೆಯಿಂದ ಏಳು ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಟೆಸ್ಟ್ ನಾಯಕ ತೆಂಬಾ ಬವುಮಾ 16 ಪಂದ್ಯಗಳಲ್ಲಿ 14 ಗೆಲುವು ದಾಖಲಿಸಿ 72 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ 16 ಪಂದ್ಯಗಳ ನಾಯಕತ್ವದ ಬಳಿಕ ಅತ್ಯಧಿಕ ಗೆಲುವು ದಾಖಲಿಸಿದ ನಾಯಕನ ದಾಖಲೆ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಲಿಂಡ್ಸೆ ಹ್ಯಾಸೆಟ್ ಹೆಸರಿನಲ್ಲಿತ್ತು. . 1952ರಿಂದ ಈ ದಾಖಲೆ 72 ವರ್ಷಗಳ ಕಾಲ ಅವರ ಹೆಸರಿನಲ್ಲಿತ್ತು. ಇದೀಗ ಬವುಮಾ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ

ನೋಡಿರಿ

