ಮೂವರೊಂದಿಗೆ ಸ್ಟಾರ್ ಕ್ರಿಕೆಟರ್ ಮೀಟಿಂಗ್.. ಡೇಟಿಂಗ್.. ರೋಮ್ಯಾನ್ಸ್!
![ಮೂವರೊಂದಿಗೆ ಸ್ಟಾರ್ ಕ್ರಿಕೆಟರ್ ಮೀಟಿಂಗ್.. ಡೇಟಿಂಗ್.. ರೋಮ್ಯಾನ್ಸ್!](https://suddiyaana.com/wp-content/uploads/2025/02/7.png)
ಯುಜ್ವೇಂದ್ರ ಚಹಲ್.. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್.. ಸದ್ಯ ಎಲ್ಲೆಡೆ ಇವರದ್ದೇ ಸುದ್ದಿ.. ಚಹಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ.. ಕೆಲವೇ ದಿನಗಳಲ್ಲಿ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹಲ್ ಚಲ್ ಸೃಷ್ಟಿಸಿದೆ.. ಆದ್ರೀಗ ಚಹಲ್ ಹೆಸರಿನ ಜೊತೆ ಹೊಸ ಹೊಸ ಹೆಸರು ತಳುಕುಹಾಕಿಕೊಳ್ತಿದೆ. ಚಹಲ್ ಸುಂದರಿಯರ ಜೊತೆ ಡೇಟಿಂಗ್.. ಮೀಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ.. ಅಷ್ಟೇ ಅಲ್ಲ ಪ್ರಪೋಸ್ ಕೂಡ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.. ಅಷ್ಟಕ್ಕೂ ಚಹಲ್ ಜೊತೆ ಯಾರ್ಯಾರ ಹೆಸರು ತಳುಕು ಹಾಕಿಕೊಂಡಿದೆ.. ಯುಜ್ವೇಂದ್ರ ಯಾರಿಗೆ ಪ್ರಪೋಸ್ ಮಾಡಿದ್ರು.. ಹರಿದಾಡ್ತಿರೋ ಸುದ್ದಿ ನಿಜಾನಾ? ಆ ಸುಂದರಿಯರು ಏನ್ ಹೇಳಿದ್ರು.. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಳಿ ಹೊದಿಕೆ ಮೇಲೆ ರಕ್ತಜಲಪಾತ – ಪ್ರಕೃತಿಯ ಈ ವಿಸ್ಮಯಕ್ಕೆ ಕಾರಣವೇನು?
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಯುಜುವೇಂದ್ರ ಚಹಾಲ್ ಅವರದ್ದೇ ಸುದ್ದಿ.. ಈ ಬಾರಿ ಚಹಲ್ ಸುದ್ದಿಯಾಗಿರೋದು ಮನಮೋಹಕ ಬೌಲಿಂಗ್‌ನಿಂದ ಅಲ್ವೇ ಅಲ್ಲ. ಈ ಬಾರಿ ಅವರು ಸುದ್ದಿಯಲ್ಲಿರೋದು ತಮ್ಮ ವೈಯಕ್ತಿಕ ವಿಚಾರವಾಗಿ. ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ.. ಧನಶ್ರೀ ಹಾಗೂ ಚಹಾಲ್ ಮಧ್ಯೆ ಬಿರುಕು ಬಿದ್ದಿದೆ. ಆದಷ್ಟು ಬೇಗ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಸುಂಟರಗಾಳಿಯಂತೆ ಹಬ್ತಿದೆ.. ಈ ಬೆನ್ನಲ್ಲೇ ಡಿವೋರ್ಸ್ ಗೆ ಕಾರಣ ಏನು? ದಾಂಪತ್ಯಕ್ಕೆ ಹುಳಿಹಿಂಡಿದ್ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.. ಈ ಬೆನ್ನೆಲ್ಲೇ ಮತ್ತೊಂದು ವಿಚಾರವಾಗಿ ಸದ್ದು ಮಾಡ್ತಿದ್ದಾರೆ.. ಚಹಾಲ್ ಮತ್ತೊಬ್ಬ ಹುಡುಗಿಯ ಪ್ರೇಮ ಪಾಶಕ್ಕೆ ಬಿದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
ಹೌದು, ಟೀಮ್ ಇಂಡಿಯಾ ಆಟಗಾರ ಈಗ ಮತ್ತೊಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ.. ಇತ್ತೀಚೆಗೆ ಚಹಲ್ ಆರ್ಜೆ ಹಾಗೂ ನಟಿ ಮಹ್ವಾಶ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.. ಅಷ್ಟೇ ಅಲ್ಲ ಪ್ರಪೋಸ್ ಕೂಡ ಮಾಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡುತ್ತಿದೆ. ಅದು ಮಾತ್ರವಲ್ಲ ಮಹ್ವಾಶಗೆ ಚಹಲ್ ಮದುವೆಯಾಗು ಅಂತಾ ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಒಂದು ಕಡೆ ಧನಶ್ರೀಗೆ ಡಿವೋರ್ಸ್ ನೀಡುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದ್ರೆ.. ಮತ್ತೊಂದು ಕಡೆ ಮಹ್ವಾಶ ಜೊತೆಗೆ ಡೇಟಿಂಗ್ ಹಾಗೂ ಮದುವೆ ಪ್ರಪೋಸಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಈ ಬೆನ್ನಲ್ಲೇ ಮಹ್ವಾಶ ಈ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಚಹಾಲ್ ನನಗೆ ಪ್ರಪೋಸ್ ಮಾಡಿದ್ರೆ ನಾನೇ ಬಂದು ನಿಮಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಅಂದ್ಹಾಗೆ . ಆರ್ ಜೆ ಮಹ್ವಾಶ್, ಒಬ್ಬ ನಟಿ ಮತ್ತು ನಿರ್ಮಾಪಕಿ. ನವಾಜುದ್ದೀನ್ ಸಿದ್ದಿಕಿ ಅಭಿನಯದ ಸೆಕ್ಷನ್ 108 ಚಿತ್ರದ ನಿರ್ಮಾಪಕಿ. ಮಹ್ವಾಶ್ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು, ಅಪ್ಲಿಕೇಶನ್‌ನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಯಜುವೇಂದ್ರ ಚಹಲ್, ಮುಂಬೈನ ಹೋಟೆಲ್ ಒಂದರಲ್ಲಿ ಯುವತಿ ಜೊತೆ ಕಾಣಿಸಿಕೊಂಡಿದ್ದರು. ಪಾಪರಾಜಿಗಳನ್ನು ನೋಡ್ತಿದ್ದಂತೆ ಚಹಲ್ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ಇದ್ರ ವಿಡಿಯೋ ವೈರಲ್ ಆಗಿತ್ತು.. ಮುಂಬೈ ಹೊಟೇಲ್ ನಲ್ಲಿ ಚಹಲ್ ಜೊತೆ ಕಾಣಿಸಿಕೊಂಡಿದ್ದು ಮಹ್ವಾಶ್ ಎಂಬ ಸುದ್ದಿ ಹರಿದಾಡ್ತಿದ್ದಂತೆ ಈ ಗಾಸಿಪ್ ಹುಟ್ಟಿಕೊಂಡಿತು..
ಇನ್ನು ಚಹಲ್ ಜೊತೆ ನಟಿಯ ಹೆಸರು ತಳುಕು ಹಾಕಿಕೊಂಡಿರೋದು ಇದೇ ಮೊದಲೇನಲ್ಲ.. ಈ ಹಿಂದೆಯೂ ಇದೇ ತರ ಗಾಸಿಪ್ ಹರಿದಾಡಿತ್ತು.. ಚಹಲ್ ನಟಿ ಜಾರಾ ಯೆಸ್ಮಿನ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹಾರಿದಾಡಿತ್ತು.. ಕೋವಿಡ್ ಟೈಮ್ ನಲ್ಲಿ ಯೆಸ್ಮಿನ್ ಹಾಗೂ ಚಹಾಲ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಇದಾದ ಬಳಿಕ ಇವರಿಬ್ಬರ ಸಂಬಂಧದ ಬಗ್ಗೆ ಹೆಚ್ಚಿನ ಊಹಾಪೋಹಗಳು ಹರಿದಾಡಲು ಆರಂಭಿಸಿದವು. ಚಹಾಲ್ ಹಾಗೂ ಯೆಸ್ಮಿನ್ ಚಾಟ್, ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಆಗ ಅವರಿಬ್ಬರು ಶಾಕ್ ಆಗಿದ್ರು.. ಬಳಿಕ ಚಹಾಲ್ ತಮಗೆ ಪ್ರಪೋಸ್ ಮಾಡಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ರು..
ಇನ್ನು ಮತ್ತೊಬ್ಬ ನಟಿ ಜೊತೆಗೂ ಚಹಲ್ ಹೆಸರು ತಳುಕುಹಾಕಿಕೊಂಡಿತ್ತು.. ಈ ಹಿಂದೊಮ್ಮೆ ಐಪಿಎಲ್ ವೇಳೆ ಚಹಾಲ್ ಹಾಗೂ ಕನ್ನಡ ನಟಿ ತನಿಷ್ಕಾ ಕಪೂರ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ಚಹಲ್ ಹಾಗೂ ತನಿಷ್ಕಾ ನಿರಾಕರಿಸಿದ್ರು.. ಚಹಲ್ ಯಾರೆಂದು ಗೊತ್ತಿಲ್ಲ ಅಂತಾ ತನಿಷ್ಕಾ ಸ್ಟೇಟ್ ಮೆಂಟ್ ಕೊಟ್ಟಿದ್ರು.. ಅದಾದ ಬಳಿಕ ಅವರಿಬ್ಬರು ಒಟ್ಟಿಗೆ ಇರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಶ್ರೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಕೆಲ ಸಮಯದ ಬಳಿಕ ಈ ಸುದ್ದಿ ತಣ್ಣಗಾಯ್ತು..
ಇದೀಗ ಚಹಲ್ ಜೊತೆ ಮಹ್ವಾಶ್ ಹೆಸರು ತಳುಕು ಹಾಕಿಕೊಂಡಿದ್ದು ಭಾರಿ ಸಂಚಲನ ಮೂಡಿಸಿದೆ.. ಸೆಲೆಬ್ರಿಟಿಗಳು ಅಂದ್ಮೇಲೆ.. ಅವರ ಮೇಲೆ ಒಂದು ಕಣ್ಣು ಇದ್ದೇ ಇರುತ್ತೆ.. ಅವರು ಯಾರದ್ರೂ ಜೊತೆ ಸುತ್ತಾಡಿದ್ರೆ, ಅಥವಾ ಯಾರ ಜೊತೆ ಆದ್ರೂ ಕ್ಲೋಸ್ ಆದ್ರೆ ಈತರ ಗಾಸಿಪ್ ಹರಿದಾಡೋದು ಕಾಮನ್ ಆಗಿದೆ. ಇದೀಗ ಚಹಲ್ ಈ ಬಗ್ಗೆ ಸ್ಪಷ್ಣನೆ ನೀಡ್ತಾರಾ ಅಂತಾ ಕಾದು ನೋಡ್ಬೇಕು.