ಚಹಲ್ ಗೆ ಲೇಡಿ ಲಕ್ – ಧನ್ಯಶ್ರೀಗೆ ಮೆಡಲ್ ಅರ್ಪಣೆ!! – ಬೌಲರ್‌ಗೆ ಡ್ಯಾನ್ಸ್ ಟೀಚರ್ ಬೋಲ್ಡ್

ಚಹಲ್ ಗೆ ಲೇಡಿ ಲಕ್ – ಧನ್ಯಶ್ರೀಗೆ ಮೆಡಲ್ ಅರ್ಪಣೆ!! – ಬೌಲರ್‌ಗೆ ಡ್ಯಾನ್ಸ್ ಟೀಚರ್ ಬೋಲ್ಡ್

ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದೆ. 17 ವರ್ಷಗಳ ಟ್ರೋಫಿ ಬರ ಕೊನೆಗೂ ನೀಗಿದೆ. ಇದೀಗ ತವರಿಗೆ ಬಂದಿರುವ ಕ್ರಿಕೆಟರ್ಸ್ ಜೋರಾಗೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಭಿಮಾನಿಗಳ ಜೊತೆ, ಫ್ಯಾಮಿಲಿ ಜೊತೆ ಸೆಲಬ್ರೇಟ್ ಮಾಡ್ತಾ ಇದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಯಜ್ವೇಂದ್ರ ಚಹಲ್ ಆಟವಾಡದಿದ್ರು ತಂಡ ಭಾಗವಾಗಿದ್ರು. ಇದೀಗ ಯುಜ್ವೇಂದ್ರ ಚಹಲ್ ತಮಗೆ ಬಂದ ಮೆಡಲ್ ಅನ್ನ ತಮ್ಮ ಬದುಕಿನ ಸ್ಪೆಷಲ್ ವ್ಯಕ್ತಿಗೆ ಅರ್ಪಿಸಿದ್ದಾರೆ. ಇದನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಲೇಡಿ ಲಕ್ ಅಂತಾ ಕ್ಯಾಪ್ಷನ್ ನೀಡಿದ್ದಾರೆ.

ಇದನ್ನೂ ಓದಿ: ಮದುವೆಗೆ ಸಜ್ಜಾದ ಸ್ಮೃತಿ ಮಂದಾನ – RCB ಕ್ವೀನ್ ಮನಗೆದ್ದ ಮುಚ್ಚಲ್

ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಬ್ಬರಿಸಿದೆ.. ಟೀಮ್ ಮೆಂಬರ್ ಆಗಿದ್ರು ಯಜ್ವೇಂದ್ರ ಚಹಲ್ ಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಚಾನ್ಸ್ ಸಿಕ್ಕಿಲ್ಲ.. ಟೂರ್ನಿಯುದ್ಧಕ್ಕೂ ಬೆಂಚ್ ಕಾಯಿಸುತ್ತಾ ವಾಟರ್ ಬಾಯ್ ಮಾತ್ರ ಕೆಲಸ ಮಾಡಬೇಕಾಯ್ತು.. ಆದ್ರೂ ಕೂಡ ಚಹಲ್ ಒಂಚೂರು ಬೇಸರ ಹೊರಹಾಕದೇ ತಂಡಕ್ಕೆ ಸಪೋರ್ಟಿವ್ ಆಗಿದ್ರು.. ಇದೀಗ ವಿಶ್ವಕಪ್ನಲ್ಲಿ ಗೆದ್ದ ಮೆಡಲ್ ಅನ್ನ ಅವರ ಮುದ್ದಿನ ಮಡದಿಗೆ ಅರ್ಪಿಸಿದ್ದಾರೆ.

ಯಜ್ವೇಂದ್ರ ಚಹಲ್ ಟಿ20 ವಿಶ್ವಕಪ್ ಗೆದ್ದ ಬಳಿಕ ತವರಿಗೆ ಮರಳಿದ್ದಾರೆ. ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇದೀಗ  ಯುಜ್ವೇಂದ್ರ ಚಹಲ್ ಈಗ ತಮ್ಮ ಪತ್ನಿ ಧನಶ್ರೀ ವರ್ಮಾಗೆ  ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಹಲ್ ತಮ್ಮ ಮುದ್ದಿನ ಮಡದಿ ಜೊತೆಗೆ ತೆಗೆದುಕೊಂಡಿರುವ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಲೇಡಿ ಲಕ್ ಅಂತಾ ಕ್ಯಾಪ್ಶನ್ ನೀಡಿದ್ದಾರೆ.

ಇನ್ನು ಯುಜ್ವೇಂದ್ರ ಚಹಲ್ ಟೀಂ ಇಂಡಿಯಾದ ಭಾಗವಾಗಿರೋದಕ್ಕೆ ಅವರ ಪತ್ನಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಗೆಲುವನ್ನ ಧನಶ್ರೀ ಸಂಭ್ರಮಿಸಿದ್ದಾರೆ. ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿರುವ ಫೋಟೋವನ್ನ ಶೇರ್ ಮಾಡಿದ್ದಾರೆ.. “Hey World Champion IN” ಅಂತಾ ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಇವರಿಬ್ಬರ ಪೋಸ್ಟ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೆ ಯಜ್ವೇಂದ್ರ ಹಾಗೂ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು.  ಯುಜ್ವೇಂದ್ರ ಹಾಗೂ ಧನಶ್ರೀ ಪ್ರೀತಿ ಲಾಕ್ಡೌನ್ ಸಮಯದಲ್ಲಿ ಶುರುವಾಯ್ತು..  ವೃತ್ತಿಯಲ್ಲಿ ಡಾನ್ಸರ್ ಹಾಗೂ ಯೂಟ್ಯೂಬರ್ ಆಗಿರುವ ಧನಶ್ರೀ, ಡಾನ್ಸ್ ಟೀಚರ್ ಆಗಿ ಚಹಾಲ್ ಅವರಿಗೆ ಪರಿಚಯವಾದ್ರು. ಡ್ಯಾನ್ಸ್ ಹೇಳಿಕೊಡುತ್ತಾ ಕೊಡುತ್ತಾ ಕ್ರಿಕೆಟಿಗನ ವಿನಯ ಮತ್ತು ನಮ್ರತೆಗೆ ತಾನು ಕ್ಲೀನ್ ಬೋಲ್ಡ್ ಆಗ್ತಾರೆ.. ಬಳಿಕ ಧನಶ್ರೀ ಹಾಗೂ  ಚಹಲ್ ಪ್ರೀತಿಯಲ್ಲಿ ಬೀಳ್ತಾರೆ..  ಕೆಲವು ತಿಂಗಳ ಡೇಟಿಂಗ್ ಬಳಿಕ, ಹೆತ್ತವರ ಒಪ್ಪಿಗೆ ಪಡೆದು ಇಬ್ಬರೂ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. Instagram ಮೂಲಕ ಮದುವೆ ಫೋಟೋಗಳನ್ನು ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದರು.

ಆದ್ರೆ ಕೆಲ ತಿಂಗಳುಗಳ ಹಿಂದೆ ಧನಶ್ರೀ ಮತ್ತು ಚಹಲ್ ಮದುವೆ ಬಗ್ಗೆ ಸಾಕಷ್ಟು ಗಾಳಿಸುದ್ದಿಗಳು ಹಬ್ಬಿದ್ದವು. ತಮ್ಮ ಇನ್ಸ್ಟಾಗ್ರಾಮ್ ಬಯೋದಿಂದ ‘ಚಹಲ್’ ಎಂಬ ಉಪನಾಮವನ್ನು ತೆಗೆದ ನಂತರ ಗೊಂದಲ ಹುಟ್ಟಿತ್ತು. ನಂತರ ಅವರಿಬ್ಬರೂ ಸಾಮಾಜಿಕ ಮಾಧ್ಯಮದ ಮೂಲಕ ವದಂತಿಗಳಿಗೆ ತೆರೆ ಎಳೆದರು

ಚಹಲ್ ತುಂಬಾ ವಿನಯ, ನೇರ, ಸ್ನೇಹಪರ ವ್ಯಕ್ತಿತ್ವ ಉಳ್ಳವರು. ಕುಟುಂಬವನ್ನು ತುಂಬಾ ಗೌರವಿಸುತ್ತಾರೆ. ಅವರಂತಹ ವ್ಯಕ್ತಿಯನ್ನು ನನ್ನ ಸಂಗಾತಿಯನ್ನಾಗಿ ಪಡೆಯಲು ನಾನು ನಿಜವಾಗಿಯೂ ಬಯಸುತ್ತೇನೆ ಎಂದು ಧನಶ್ರೀ ಹೇಳಿಕೊಂಡಿದ್ದರು.

ಧನಶ್ರಿ ಸದಾ ತಮ್ಮ ಪತಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಟೀಮ್ ಇಂಡಿಯಾ ಮತ್ತು ಐಪಿಎಲ್ನಲ್ಲಿಯೂ ಪತಿಯನ್ನು ಹುರಿದುಂಬಿಸಲು ಮೈದಾನಕ್ಕೆ ಹಾಜರಾಗುತ್ತಾ ಇರುತ್ತಾರೆ.  ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ ಗಾಳಿ ಸುದ್ದಿಗಳು ಬರುತ್ತಲೇ ಇರುತ್ತವೆ. ಆದ್ರೆ ಈ ಬಗ್ಗೆ ಇವರು ಒಂಚೂರು ತಲೆ ಕೆಡಿಸಿಕೊಂಡಿಲ್ಲ. ತಮ್ಮಿಬ್ಬರ ಪ್ರೀತಿಯನ್ನ ಆಗಾಗ ವ್ಯಕ್ತಪಡಿಸಿಕೊಳ್ಳುತ್ತಲೇ ಇದ್ದಾರೆ.

Shwetha M

Leave a Reply

Your email address will not be published. Required fields are marked *