ಚಹಲ್ – ಧನಶ್ರೀ ಡಿವೋರ್ಸ್? – ಇಬ್ಬರ ಮಧ್ಯೆ ಹುಳಿಹಿಂಡಿದ್ಯಾರು?
New Life Loading ಎಂದ ಕ್ರಿಕೆಟರ್
ಟೀಮ್ ಇಂಡಿಯಾದ ಆಟಗಾರ ಯುಜುವೇಂದ್ರ ಚಹಲ್ ದಾಂಪತ್ಯದಲ್ಲಿ ಬಿರುಕು ಬಿತ್ತಾ? ಇದೊಂದು ಅನುಮಾನ ಇದೀಗ ಎಲ್ಲರನ್ನ ಕಾಡೋಕೆ ಶುರುವಾಗಿದೆ. ಇದಕ್ಕೆ ಪೂರಕವೆಂಬಂತೆ ಒಂದು ದೊಡ್ಡ ಬೆಳವಣಿಗೆ ನಡೆದಿದೆ. ಡಿವೋರ್ಸ್ ಬಗ್ಗೆ ಚಹಲ್ ಹಾಗೂ ಧನಶ್ರೀ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಕ್ಲೂ ಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿದ್ದಾರೆ. ಹಾಗಾದ್ರೆ ನಿಜಕ್ಕೂ ಚಹಲ್ ದಾಂಪತ್ಯದಲ್ಲಿ ಬಿರುಕು ಬಿದ್ದಿದ್ಯಾ? ಸಂಬಂಧ ಹಳಸಲು ಏನು ಕಾರಣ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಿರಿಕ್ ಪಾರ್ಟಿ ಸ್ಯಾಮ್ ಕಾನ್ ಸ್ಟಾಸ್ – 19 ವರ್ಷಕ್ಕೇ ಪ್ರಚಾರಕ್ಕಾಗಿ ಧಿಮಾಕು
ಇತ್ತೀಚೆಗೆ ಸಿನಿಮಾ ನಟರು, ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ. ಆರಂಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಡಿಲೀಟ್ ಮಾಡಿ, ಅನ್ಫಾಲೋ ಮಾಡಿ ಡಿವೋರ್ಸ್ ಸುಳಿವು ನೀಡೋದು ಕಾಮನ್ ಆಗಿದೆ. ಪಾಂಡ್ಯ ಹಾಗೂ ನತಾಶ ಕೂಡ ಆರಂಭದಲ್ಲಿ ಹೀಗೇ ಮಾಡಿದ್ರು. ಬಳಿಕ ಸೋಶಿಯಲ್ ಮೀಡಿಯಾದಲ್ಲೇ ಡಿವೋರ್ಸ್ ಅನೌನ್ಸ್ ಮಾಡಿದ್ರು.. ಇದೀಗ ಟೀಮ್ ಇಂಡಿಯಾದ ಸ್ಪಿನ್ನರ್ ಯುಜೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎಂದು ಹೇಳಲಾಗ್ತಿದೆ. ಶೀಘ್ರದಲ್ಲೇ ಡಿವೋರ್ಸ್ ಅವರಿಬ್ಬರು ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಸೆಲೆಬ್ರಿಟಿ ಕಪಲ್ಸ್ ಯಾವುದೇ ಅಧಿಕೃತ ಪೋಸ್ಟ್ ಹಂಚಿಕೊಂಡಿಲ್ಲ. ಆದರೆ ಚಹಲ್ ಮತ್ತು ಧನಶ್ರೀ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ ಫಾಲೋ ಮಾಡಿರುವುದು ಮತ್ತು ತನ್ನ ಪತ್ನಿ ಜೊತೆಗಿನ ಫೋಟೋಗಳನ್ನು ಚಹಲ್ ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಧನಶ್ರೀ ಅವರು ಚಹಲ್ ರನ್ನು ಅನ್ಫಾಲೋ ಮಾಡಿದ್ದರೂ, ಅವರೊಂದಿಗಿನ ಯಾವುದೇ ಚಿತ್ರಗಳನ್ನು ಅಳಿಸಿಲ್ಲ. ಆದ್ರೆ ಚಹಲ್-ಧನಶ್ರೀ ವಿಚ್ಛೇದನ ಪಡೆಯೋದು ಕನ್ಫರ್ಮ್ ಅನ್ನೋದನ್ನ ಚಹಲ್ ಹಾಗೂ ಧನಶ್ರೀ ಅವರ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸೆಲೆಬ್ರಿಟಿ ದಂಪತಿ ಡಿವೋರ್ಸ್ ಪಡೆಯುವುದು ಖಚಿತ. ಆದರೆ ಇದು ಅಧಿಕೃತವಾಗಿ ಬಹಿರಂಗಪಡಿಸಲು ಇನ್ನಷ್ಟು ಕಾಲಾವಕಾಶಬೇಕು. ಆದರೆ ಈ ಜೋಡಿ ಬೇರ್ಪಡಲು ನಿಖರವಾದ ಕಾರಣ ಏನೆಂದು ಇನ್ನೂ ತಿಳಿದಿಲ್ಲ. ತಮ್ಮ ಜೀವನ ಪ್ರತ್ಯೇಕವಾಗಿ ಮುಂದುವರಿಸಲು ಇಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬುದಂತೂ ಸ್ಪಷ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ವರದಿ ಮಾಡಿದೆ.
ಅಂದ್ಹಾಗೆ ಧನಶ್ರೀ ಹಾಗೂ ಚಹಲ್ ಡಿವೋರ್ಸ್ ವದಂತಿ 2023ರಲ್ಲೇ ಸುದ್ದಿಯಾಗಿತ್ತು. ಧನಶ್ರೀ ತನ್ನ ಇನ್ ಸ್ಟಾಗ್ರಾಂನಲ್ಲಿ ತನ್ನ ಹೆಸರಿನಿಂದ ‘ಚಹಲ್’ ಉಪನಾಮ ತೆಗೆದ ನಂತರ ವಿಚ್ಛೇದನದ ವದಂತಿಗಳು ಹುಟ್ಟಿಕೊಂಡಿದ್ದವು. ಅದಾದ ಬಳಿಕ ಯುಜೇಂದ್ರ ಅವರು New Life Loading ಎಂಬ ಇನ್ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡ್ರು.. ಇದ್ರಿಂದಾಗಿ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಅಂದಿನಿಂದಲೂ ಈ ಗುಸುಗುಸು ನಡೆಯುತ್ತಲೇ ಇತ್ತು. ಇದಾದ ನಂತರ ಚಹಲ್ ಅವರು ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕುವ ಪೋಸ್ಟ್ ಮಾಡಿದ್ದರು. ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದ್ದರು. ಆದರೀಗ ಅದೆಲ್ಲವೂ ನಿಜವೆಂದು ವರದಿಯಾಗಿದೆ. ಅಷ್ಟೇ ಅಲ್ಲ ಧನಶ್ರೀ ಬೇರೆಯವರ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಚರ್ಚೆಯೂ ನಡೆತಿದೆ.
ಧನಶ್ರೀ ಮತ್ತು ಚಹಲ್ ಅವರು ಪ್ರೀತಿಸಿ ಮದುವೆಯಾದವರು. 2020ರ ಡಿಸೆಂಬರ್ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಟಿವಿ ಶೋ ಜಲಕ್ ದಿಗ್ಲಾ ಜಾ ಸೀಸನ್ 11ರಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಧನಶ್ರೀ ವರ್ಮಾ ಬಿಚ್ಚಿಟ್ಟಿದ್ದರು. ಡ್ಯಾನ್ಸ್ ಕ್ಲಾಸ್ನಿಂದ ಇಬ್ಬರ ಪ್ರೇಮ ಪಯಣ ಶುರುವಾಗಿತ್ತು ನನ್ನನ್ನು ಮದುವೆ ಆಗ್ತಿಯಾ ಎಂದು ನೇರವಾಗಿ ಚಹಲ್ ಪ್ರಪೋಸ್ ಮಾಡಿದ್ದರಂತೆ. ಅದಕ್ಕೆ ಧನಶ್ರೀ ಒಪ್ಪಿಕೊಂಡೆ ಎಂದು ಧನಶ್ರೀ ಹೇಳಿದ್ರು. ಆದ್ರೀಗ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮಂದಾದ್ದು ಫ್ಯಾನ್ಸ್ ಗೆ ಬೇಸರ ಮೂಡಿಸಿದೆ. ಈ ಸುದ್ದಿ ಸುಳ್ಳಾಗಲಿ ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ.