ಎಣ್ಣೆ (ಮದ್ಯ) ಲೋಕಕ್ಕೆ ಕಾಲಿಟ್ಟ ಯುವರಾಜ್ ಸಿಂಗ್ – ಯುವಿ ಟಕಿಲಾ ಬ್ರ್ಯಾಂಡ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ

ಎಣ್ಣೆ (ಮದ್ಯ) ಲೋಕಕ್ಕೆ ಕಾಲಿಟ್ಟ ಯುವರಾಜ್ ಸಿಂಗ್ – ಯುವಿ ಟಕಿಲಾ ಬ್ರ್ಯಾಂಡ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ

ಭಾರತ ತಂಡದ ಮಾಜಿ ಆಲ್‌ರೌಂಡರ್‌  ಯುವರಾಜ್ ಸಿಂಗ್  ಎಣ್ಣೆ ಲೋಕಕ್ಕೆ ( ಮದ್ಯ) ಕಾಲಿಟ್ಟಿದ್ದಾರೆ. ಯುವಿ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಮದ್ಯ ಲೋಕದ ಬ್ಯುಸಿನೆಸ್‌ಗೆ ಕಾಲಿಟ್ಟಿದ್ದಾರೆ. “ಫಿನೋ” ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್​ವೊಂದನ್ನು ಯುವಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. ಫಿನೋ  ಅನ್ನು ಭಾರತದಲ್ಲಿ ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಆಯ್ದ ಸುಂಕ ರಹಿತ ಅಂಗಡಿಗಳಲ್ಲಿ ಮಾರಾಟ ಮಾಡಲಿದ್ದಾರೆ. ಈ ಮದ್ಯದ ಆರಂಭಿಕ ಬೆಲೆ ಸುಮಾರು 14,000 ರೂ. “ವೈಫಲ್ಯವು ಒಂದು ಆಯ್ಕೆಯಲ್ಲ” ಟ್ಯಾಗ್ ಲೈನ್ ಹೊಂದಿರುವ ಈ ಆಲ್ಕೋಹಾಲ್ ಉತ್ಪನ್ನವು ಈಗಾಗಲೇ ಮುಂಬೈನಲ್ಲಿ ಖರೀದಿಗೆ ಲಭ್ಯವಿದಿದೆ.

ಇದನ್ನೂ ಓದಿ:ಬೆಳಗಾವಿ ಅಧಿವೇಶನದಲ್ಲಿ ಟಿಪ್ಪು ಜಯಂತಿ ಕಿಚ್ಚು – ವಿಪಕ್ಷಗಳಿಗೆ ಸಿಗ್ತಾ ಹೊಸ ಅಸ್ತ್ರ?

ಯುವರಾಜ್ ಸಿಂಗ್ ಗಿಂತ ಮೊದಲು, ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ದಂತಕಥೆಯ ಆಲ್‌ರೌಂಡರ್ ಇಯಾನ್ ಬೋಥಮ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್‌ನ ಮಾಜಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಕೆವಿನ್ ಪೀಟರ್ಸನ್ ಕೂಡ ಮದ್ಯ ವ್ಯವಹಾರಕ್ಕೆ ಪ್ರವೇಶಿಸಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ‘ಪಾಂಟಿಂಗ್ ವೈನ್ಸ್’ ಎಂಬ ವೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರ ಕಂಪನಿಯ ವೈನ್‌ಗಳು ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್​ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಲಭ್ಯವಿದೆ. ಇಂಗ್ಲೆಂಡ್‌ನ ಇಯಾನ್ ಬೋಥಮ್ ಕೂಡ ಪ್ರಮುಖ ವೈನ್ ಕಂಪನಿಯನ್ನು ನಡೆಸುತ್ತಿದ್ದಾರೆ. 2018 ರಲ್ಲಿ ಸ್ಥಾಪಿಸಲಾದ ಈ ವೈನ್ ಕಂಪೆನಿಯು ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಮಾರಾಟವನ್ನು ವಿಸ್ತರಿಸಿಕೊಂಡಿದೆ.

ಗುರುಗ್ರಾಮದ ಕೋಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುರೇಶ್ ರೈನಾ, ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಕೈಫ್ ಅವರಂತಹ ಅನುಭವಿ ಆಟಗಾರರು ಭಾಗವಹಿಸಿದ್ದರು. ಅವರೆಲ್ಲರೂ ಯುವರಾಜ್ ಅವರ ಹೊಸ  ವ್ಯಾವಹಾರಕ್ಕೆ  ಶುಭ ಹಾರೈಸಿದರು.

Kishor KV