2011ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಕೊಟ್ಟ ಟಿಪ್ಸ್ ಮತ್ತೆ ನೆನಪಿಸಿದ ಯುವಿ – ಟೀಮ್ ಇಂಡಿಯಾ ಆಟಗಾರರಿಗೆ ಯುವಿ ಕಿವಿಮಾತು

2011ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಕೊಟ್ಟ ಟಿಪ್ಸ್ ಮತ್ತೆ ನೆನಪಿಸಿದ ಯುವಿ – ಟೀಮ್ ಇಂಡಿಯಾ ಆಟಗಾರರಿಗೆ ಯುವಿ ಕಿವಿಮಾತು

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಈ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ.  ಟೀಮ್ ಇಂಡಿಯಾ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾ ಏಷ್ಯಾ ಕಪ್ ಗೆದ್ದ ಖುಷಿಯಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಜಯಿಸಿ ಗೆಲುವಿನ ಲಯದಲ್ಲಿದೆ. ಆದರೂ ತವರಿನಲ್ಲಿ ವಿಶ್ವಕಪ್ ಆಡುತ್ತಿರುವಾಗ ಒತ್ತಡ ತಪ್ಪಿದ್ದಲ್ಲ. ಇದಕ್ಕಾಗಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಟೀಮ್ ಇಂಡಿಯಾ ಆಟಗಾರರಿಗೆ ಒಂದು ಸಲಹೆ ನೀಡಿದ್ದಾರೆ. 2011ರ ವರ್ಲ್ಡ್​​ಕಪ್ ಹೀರೊ ಯುವರಾಜ್​ ಸಿಂಗ್ ಅಂದು ಸಚಿನ್​ ತೆಂಡೂಲ್ಕರ್​ ನೀಡಿದ್ದ ಸಲಹೆಯನ್ನ ಈಗಿನ ಟೀಂ ಇಂಡಿಯಾ ಆಟಗಾರರಿಗೆ ನೀಡಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಪದಕ ಬೇಟೆ – 4ನೇ ಚಿನ್ನ ಸಮೇತ 8 ಪದಕ ದೋಚಿದ ಭಾರತೀಯ ಅಥ್ಲೀಟ್‌ಗಳು

2011ರ ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿತ್ತು. ಆದರೆ ಗುಂಪು ಹಂತದ ಪಂದ್ಯಗಳಲ್ಲಿ ಆಡುವಾಗ ದಕ್ಷಿಣ ಆಫ್ರಿಕಾ ವಿರುದ್ಧ ಸೋತಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಆಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಲ್ಲಾ ಪ್ಲೇಯರ್ಸ್​ಗಳಿಗೂ ಒಂದು ಟಿಪ್ಸ್ ಕೊಟ್ಟಿದ್ದರು. ಅಂದು ಭಾರತ ತಂಡದ ಭಾಗವಾಗಿದ್ದ ಯುವರಾಜ್, ಸಚಿನ್ ತೆಂಡೂಲ್ಕರ್ ಹೇಳಿದ್ದ ಕಿವಿಮಾತನ್ನು ನೆನಪು ಮಾಡಿಕೊಂಡಿದ್ದರು. ಈಗ ಅದನ್ನೇ ವಿಶ್ವಕಪ್​ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಆ ಟಿಪ್ಸ್ ಅನ್ನು ಯುವಿ ಮತ್ತೆ ನೆನಪಿಸಿದ್ದಾರೆ.

ಆಟಗಾರರು ಯಾವುದೇ ಕಾರಣಕ್ಕೂ ನ್ಯೂಸ್​ ಚಾನೆಲ್​ಗಳಲ್ಲಿ, ದಿನಪತ್ರಿಕೆಗಳಲ್ಲಿ ತಂಡದ ಬಗ್ಗೆ ಏನು ವರದಿಯಾಗುತ್ತಿದೆ ಅನ್ನೋದನ್ನ ಗಮನಿಸಲು ಹೋಗಬೇಡಿ. ಮಾಧ್ಯಮಗಳ ಸುದ್ದಿಗೆ ಕಿವಿ ಕೊಡಬೇಡಿ. ಏರ್​ಪೋರ್ಟ್​​ನಲ್ಲಿ ಜನರು ಪಾಸ್​ ಆಗುವಾಗ ಕಿವಿಗೆ ಹೆಡ್​​ಫೋನ್ ಹಾಕಿಕೊಂಡು ಹಾಡು ಕೇಳಿ. ಜನರ ಮಾತನ್ನ ಆಲಿಸೋಕೆ ಹೋಗಬೇಡಿ. ಕೇವಲ ಗೇಮ್ ಮೇಲೆ ಮಾತ್ರ ಫೋಕಸ್ ಮಾಡಿ. ವರ್ಲ್ಡ್​​ಕಪ್​ ಮೇಲೆ ಮಾತ್ರ ಕಾನ್ಸಂಟ್ರೇಟ್ ಮಾಡಿ ಅಂತಾ ಅಂದು ಸಚಿನ್ ಸಲಹೆ ನೀಡಿದ್ರು. ಎಲ್ಲಾ ಆಟಗಾರರು ಸಚಿನ್ ಸಲಹೆಯನ್ನ ಒಪ್ಪಿಕೊಂಡು ಟೂರ್ನಿ ಮುಗಿಯೋವರೆಗೂ ಯಾರು ಟಿವಿ ನೋಡಿಲ್ಲ.. ನ್ಯೂಸ್​ಪೇಪರ್ ಓದಿಲ್ಲ. ಏರ್​​ಪೋರ್ಟ್​ನಲ್ಲಿ ಹೋಗುವಾಗ ಕಿವಿಯಿಂದ ಹೆಡ್​​ಫೋನ್ ರಿಮೂವ್ ಮಾಡಲೇ ಇಲ್ಲ. ಇದೀಗ ಯುವರಾಜ್​​ ಸಿಂಗ್ ಇದೇ ಟಿಪ್ಸ್​ನ್ನ ಈಗಿನ ಟೀಂ ಇಂಡಿಯಾ ಆಟಗಾರರಿಗೂ ನೀಡಿದ್ದಾರೆ. ಇದು ಅತಿದೊಡ್ಡ ವಿಶ್ವಕಪ್ ಟೂರ್ನಿ. ಇಲ್ಲಿ ಸಾಕಷ್ಟು ಅತ್ಯುತ್ತಮ ತಂಡಗಳು ಆಡುತ್ತವೆ. ನಮ್ಮ ಕೈಯಲ್ಲಿರುವ ವಿಚಾರಗಳ ಬಗ್ಗೆ ಮಾತ್ರವೇ ಗಮನಹರಿಸಬೇಕು. ಆ ಮೂಲಕ ಒತ್ತಡ ಮುಕ್ತವಾಗಿ ಆಟ ಆಡಲು ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

 

Sulekha