ಟ್ರೈಲರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿದ ದೊಡ್ಮನೆ ಕುಡಿ – ಮಾ. 29ಕ್ಕೆ ತೆರೆ ಮೇಲೆ ಬರಲು ಯುವ ಸಿನಿಮಾ ರೆಡಿ
ದೊಡ್ಮನೆ ಹುಡುಗ ಯುವ ರಾಜ್ಕುಮಾರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಯುವ ಸಿನಿಮಾದ ಟ್ರೈಲರ್ ತುಂಬಾ ಯುವರಾಜ್ ಕುಮಾರ್ ಆರ್ಭಟ ಜೋರಾಗಿದೆ. ಸಖತ್ ಡೈಲಾಗ್ ಹೊಡೆಯುತ್ತಾ ಪುನೀತ್ ರಾಜ್ ಕುಮಾರ್ ಅವರಂತೆ ಕಾಣಿಸುವ ಯುವ, ಅಭಿಮಾನಿಗಳ ಮನಗೆದ್ದಿದ್ದಾರೆ.
ಇದನ್ನೂ ಓದಿ: ಅಂದು ಜಡ್ಡು.. ಇಂದು ರಿತು.. CSK ಕ್ಯಾಪ್ಟನ್ಸಿ ಬದಲಿಸಿದ್ದೇಕೆ? – ನಿವೃತ್ತಿಗೆ ಸಿದ್ಧರಾದ್ರಾ ಧೋನಿ?
ಅಪ್ಪ-ಮಗನ ಸೆಂಟಿಮೆಂಟ್ ಮತ್ತು ಕಾಲೇಜು ಗುದ್ದಾಟಗಳನ್ನು, ಟ್ರೈಲರ್ನಲ್ಲಿ ಕಾಣಬಹುದಾಗಿದೆ. ಈ ಸಿನಿಮಾದಲ್ಲಿ ಯುವ ಪಕ್ಕಾ ಮಾಸ್ ಅವತಾರದಲ್ಲಿ ಬಂದಿದ್ದಾರೆ. ಈ ಚಿತ್ರದಲ್ಲಿ ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ಸಿನಿಮಾ ಯಾವ ಥೀಮ್ ಹೊಂದಿದೆ ಎಂಬುದನ್ನು ಟ್ರೇಲರ್ ನೋಡಿದವರಿಗೆ ಗೊತ್ತಾಗಿದೆ. ಕಾಲೇಜು ವಿದ್ಯಾರ್ಥಿ ಆಗಿರೋ ಯುವಗೆ ಸಖತ್ ಸಿಟ್ಟು. ಕಾಲೇಜ್ನಲ್ಲಿ ನಡೆಯುವ ಫೈಟ್ಗಳಲ್ಲಿ ಕಥಾ ನಾಯಕನ ಹೆಸರೂ ಇರುತ್ತದೆ. ಆತ ಮಾಡಿಕೊಳ್ಳೋ ಕಿತ್ತಾಟಗಳಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ತಂದೆಗೆ ಸಖತ್ ನೋವುಂಟಾಗುತ್ತದೆ. ಪದವಿ ಮುಗಿದ ಬಳಿಕ ಯುವ ಸೇರೋದು ಒಂದು ಡಿಲಿವರಿ ಪಾರ್ಟ್ನರ್ ಆಗಿ. ಅಲ್ಲಿಂದ ಬದುಕು ಏನು ಎಂಬುದು ಗೊತ್ತಾಗುತ್ತದೆ. ದುಡಿಯೋಕೆ ಆರಂಭಿಸಿದ ಮೇಲೆ ತಂದೆಯ ನೋವು ಕಥಾ ನಾಯಕನಿಗೆ ತಿಳಿಯೋಕೆ ಆರಂಭ ಆಗುತ್ತದೆ ಎಂದು ಟ್ರೈಲರ್ನಲ್ಲಿ ತೋರಿಲಸಾಗಿದೆ.
ಇನ್ನು ಸಿನಿಮಾದ ಟ್ರೇಲರ್ನಲ್ಲಿ ಕೆಲವು ಡೈಲಾಗ್ಗಳು ಗಮನ ಸೆಳೆದಿವೆ. ‘ನೀನು ಲೋಕಲ್, ನಾನು ಪಕ್ಕಾ ಲೋಕಲ್’, ‘ಜೀವನದಲ್ಲಿ ಸಮಸ್ಯೆ ಇರಬೇಕು, ಸಮಸ್ಯೆನೇ ಜೀವನ ಆಗಬಾರದು’ ಎಂಬಿತ್ಯಾದಿ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ‘ಹೆಸರು ನೆನಪಿದ್ಯಲ್ಲ’ ಎನ್ನುವ ಡೈಲಾಗ್ ಕೇಳುತ್ತದೆ. ಯುವ ಸಿನಿಮಾದ ಟ್ರೈಲರ್ ನೋಡಿದವರು ಸಿನಿಮಾ ನೋಡುವ ಕ್ಯೂರಿಯಾಸಿಟಿಯಲ್ಲಿದ್ದಾರೆ.
ಈ ಚಿತ್ರದಲ್ಲಿ ಯುವ, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಕಿಶೋರ್ ಮೊದಲಾದವರು ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವ ಸಿನಿಮಾ ಮೂಡಿಬಂದಿದೆ. ಇನ್ನು ಬಿಡುಗಡೆ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 29ಕ್ಕೆ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆಗೆ ಯುವ ರೆಡಿಯಾಗಿದೆ.