ವಿದೇಶಿ ಯೂಟ್ಯೂಬರ್ ಮೇಲೆ ಬೆಂಗಳೂರಿನಲ್ಲಿ ಹಲ್ಲೆ – ದರ್ಪ ತೋರಿದ ವ್ಯಾಪಾರಿಯ ಬಂಧನ 

ವಿದೇಶಿ ಯೂಟ್ಯೂಬರ್ ಮೇಲೆ ಬೆಂಗಳೂರಿನಲ್ಲಿ ಹಲ್ಲೆ – ದರ್ಪ ತೋರಿದ ವ್ಯಾಪಾರಿಯ ಬಂಧನ 

ಟಿವಿ ಚಾನಲ್ ಗಳಿಗಿಂತ ಈಗ ಸೋಶಿಯಲ್ ಮೀಡಿಯಾಗಳೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅದರಲ್ಲೂ ಯೂಟ್ಯೂಬರ್ ಗಳು ಸಾಕಷ್ಟು ಜನಮನ್ನಣೆ ಪಡೆಯುತ್ತಿದ್ದಾರೆ. ಅದರಲ್ಲೂ ಊರೂರು ಸುತ್ತುತ್ತಾ ದೇಶ ವಿದೇಶಕ್ಕೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಪರಿಚಯ ಮಾಡಿಕೊಡುತ್ತಾರೆ. ಅದರಂತೆಯೇ ನೆದರ್ ಲ್ಯಾಂಡ್ ಮೂಲದ ಯೂಟ್ಯೂಬರ್ ವೊಬ್ಬರು ಬೆಂಗಳೂರಿನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ವ್ಯಾಪಾರಿಯೊಬ್ಬ ದರ್ಪ ತೋರಿಸಿ ಜೈಲು ಸೇರಿದ್ದಾನೆ.

ಇದನ್ನೂ ಓದಿ : ರೈಲು ಹಳಿ ಮೇಲೆ ಬಿದ್ದ ಬೃಹದಾಕಾರದ ಬಂಡೆ – 2 ಗಂಟೆ ನಿಂತಲ್ಲೇ ನಿಂತ ಪ್ಯಾಸೆಂಜರ್‌ ಟ್ರೈನ್‌

ನೆದರ್‌ಲ್ಯಾಂಡ್‌ನಿಂದ (Netherland) ಬಂದಿದ್ದ ಯೂಟ್ಯೂಬರ್ (Youtuber) ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru Crime) ಚಿಕ್ಕಪೇಟೆಯಲ್ಲಿ (Chickpet) ನಡೆದಿದೆ. ಚಿಕ್ಕಪೇಟೆಯ ಜನನಿಬಿಡ ರಸ್ತೆಗಳಲ್ಲಿ ಯೂಟ್ಯೂಬರ್ ಪೆಡ್ರೊ ಮೋಟಾ ಎಂಬಾತ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಈತನ ಕೈಹಿಡಿದು ಅನುಚಿತವಾಗಿ ವರ್ತಿಸಿರುವ ಸ್ಥಳೀಯ ವ್ಯಾಪಾರಿ ಹಲ್ಲೆ ನಡೆಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಸ್ಪಾಲ್ ಸಿಂಗ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬರ್ ಜೂನ್ 11 ರಂದು ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಅನ್ವೇಷಣೆ ಮಾಡುವ ಈ ವಿಡಿಯೋ ತಪ್ಪಾದ ಮಾರ್ಗದಲ್ಲಿ ಆರಂಭವಾಯ್ತು. ಯಾಕೆಂದರೆ ಕೋಪಗೊಂಡ ವ್ಯಕ್ತಿ ನನ್ನ ಕೈ ಮತ್ತು ತೋಳನ್ನು ಹಿಡಿದು ತಿರುಚುವ ಮೂಲಕ ನನ್ನ ಮೇಲೆ ದಾಳಿ ಮಾಡಿದರು. ನಾನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ನನ್ನ ಹಿಂದೆ ನುಗ್ಗಿ ಬಂದ ಎಂದು ವಿವರಿಸಿದ್ದಾರೆ.

ಯೂಟ್ಯೂಬರ್ ಪೆಡ್ರೊ ಮೋಟಾ ತನ್ನ ಕ್ಯಾಮೆರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ವ್ಯಾಪಾರಿ ಆತನನ್ನು ತಡೆದಿದ್ದಾನೆ. ಆಗ ಪೆಡ್ರೊ ನಮಸ್ತೆ ಸರ್ ಎನ್ನುತ್ತಿದ್ದಂತೆ ಯೇ ಕ್ಯಾ ಹೈ ಎಂದು ಕೇಳುವ ಮೂಲಕ ಆತನ ಕೈಯನ್ನು ಹಿಡಿದುಕೊಂಡಿದ್ದಾನೆ. ಆಗ ಯೂಟ್ಯೂಬರ್ ದಯವಿಟ್ಟು ನನ್ನನ್ನು ಹೋಗೋಕೆ ಬಿಡಿ ಸರ್ ಎಂದು ಕೇಳಿಕೊಳ್ಳುತ್ತಿದ್ದಂತೆ ಆ ವ್ಯಾಪಾರಿ ಕ್ಯಾಮರಾವನ್ನು ಕಸಿಯಲು ಯತ್ನಿಸುತ್ತಿರುವುದು ದೃಶ್ಯದಲ್ಲಿ ಕಾಣಬಹುದು. ಬಳಿಕ ಆತನಿಂದ ತಪ್ಪಿಸಿಕೊಂಡು ಮುಂದೆ ಬಂದಿದ್ದು, ವ್ಯಕ್ತಿ ತನ್ನ ಬೆರಳನ್ನು ಮುರಿಯಲು ಪ್ರಯತ್ನಿಸಿದನು ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆರೋಪಿ ವಿರುದ್ಧ ಕಠಿಣಮ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಮನವಿ ಮಾಡಲಾಗಿತ್ತು.

ಕಾಟನ್ ಪೇಟೆ ಠಾಣಾ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನವಾಬ್​ ಹಯಾತ್​ ಶರೀಫ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.​

suddiyaana