ವೆಬ್ ಸಿರೀಸ್ ನೋಡಿ ರಸ್ತೆ ಮೇಲೆ ನೋಟು ಎಸೆದ ಯುವಕರು – ಆಮೇಲೆ ನಡೆದಿದ್ದೇನು ಗೊತ್ತಾ?

ವೆಬ್ ಸಿರೀಸ್ ನೋಡಿ ರಸ್ತೆ ಮೇಲೆ ನೋಟು ಎಸೆದ ಯುವಕರು – ಆಮೇಲೆ ನಡೆದಿದ್ದೇನು ಗೊತ್ತಾ?

ಗುರುಗ್ರಾಮ್: ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಯುವಕನೊಬ್ಬ ಫ್ಲೈಓವರ್ ಮೇಲೆ ನಿಂತು ರಸ್ತೆಗೆ ನೋಟುಗಳನ್ನು ಎಸೆದ ಘಟನೆ ನಡೆದಿತ್ತು. ಈಗ ದೆಹಲಿಯಲ್ಲಿ ಯುವಕರಿಬ್ಬರು ಚಲಿಸುತ್ತಿರುವ ಕಾರಿನಿಂದ ನೋಟುಗಳನ್ನು ಎಸೆದಿದ್ದಾರೆ. ಈ ವೀಡಿಯೋ ಭಾರಿ ವೈರಲ್ ಆಗಿದೆ.

ಮಾರ್ಚ್ 2 ರಂದು ದೆಹಲಿಯ ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆ ಬಳಿ ಯುವಕರಿಬ್ಬರು ಕಾರಿನಲ್ಲಿ ಬಂದಿದ್ದಾರೆ. ಬಳಿಕ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮನಬಂದಂತೆ ನೋಟುಗಳನ್ನು ಎಸೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಇದನ್ನೂ ಓದಿ: “90 ಸೆಕೆಂಡ್” ಗಳಲ್ಲಿ ಆಪರೇಷನ್! – ತಾಯಿ ಗರ್ಭದಲ್ಲಿರುವಾಗಲೇ ಮಗುವಿಗೆ ಹೃದಯ ಚಿಕಿತ್ಸೆ!

ಬಂಧಿತ ಆರೋಪಿಗಳನ್ನು ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ಶಾಹಿದ್‌ ಕಪೂರ್‌, ಕೆಕೆ ಮೆನನ್‌ ಅಭಿನಯದ ʼಫರ್ಜಿʼ ವೆಬ್‌ ಸಿರೀಸ್‌ ನ ರೀ ಕ್ರಿಯೇಷನ್‌ ದೃಶ್ಯಕ್ಕೆ ರೀಲ್ಸ್ ಮಾಡಲು ಹಣವನ್ನು ರಸ್ತೆ ಮೇಲೆ ಎಸೆದಿದ್ದಾರೆ. ಬಳಿಕ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ವಿಡಿಯೋ ಡಿಲೀಟ್‌ ಮಾಡಿದ್ದರು. ಆದರೆ ಪೊಲೀಸರು ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು‌ ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೋರಾವರ್ ಸಿಂಗ್ ಕಲ್ಸಿ ಮತ್ತು ಲಕ್ಕಿ ಕಾಂಬೋಜ್ ನನ್ನು ಬಂಧಿಸಿದ್ದಾರೆ.

ಆರೋಪಿಗಳು ವೆಬ್‌ ಸಿರೀಸ್‌ ವೊಂದರ ದೃಶ್ಯವನ್ನು ರೀ ಕ್ರಿಯೇಟ್‌ ಮಾಡಲು ಹೋಗಿದ್ದರು. ಇದೊಂದು ನಟನೆ ಮಾತ್ರ ಅವರು ಅಲ್ಲಿ ಬಳಸಿದ ನೋಟ್‌ ಗಳು ನಕಲಿ. ಇವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

suddiyaana