ಯೂಟ್ಯೂಬ್‌ ಬಳಕೆದಾರರಿಗೆ ಶಾಕ್!‌ – ಈ ಫೀಚರ್‌ ಇನ್ನು ಮುಂದೆ ಸಿಗಲ್ಲ

ಯೂಟ್ಯೂಬ್‌ ಬಳಕೆದಾರರಿಗೆ ಶಾಕ್!‌ – ಈ ಫೀಚರ್‌ ಇನ್ನು ಮುಂದೆ ಸಿಗಲ್ಲ

ವಿಶ್ವದಾದ್ಯಂತ ಮಿಲಿಯನ್​ಗಟ್ಟಲೇ ಬಳಕೆದಾರರನ್ನು ಹೊಂದಿರುವ ವಿಡಿಯೋ ಪ್ಲಾಟ್‌ ಫಾರ್ಮ್‌ ಯೂಟ್ಯೂಬ್‌ ತನ್ನ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. ಯೂಟ್ಯೂಬ್​ ​​ತನ್ನ ಫೀಚರ್​​ವೊಂದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

ಇದನ್ನೂ ಓದಿ: ಗೂಗಲ್‌ ನಲ್ಲಿ ಹೊಸ ಬದಲಾವಣೆ –  ನಿಮ್ಮ ಖಾತೆ ಕೂಡ ಡಿಲೀಟ್‌ ಆಗುತ್ತಾ?

ಯೂಟ್ಯೂಬ್‌ ನಲ್ಲಿರುವ  ಸ್ಟೋರಿಸ್‌ ಫೀಚರ್‌ ಗೆ ಕಂಪನಿ ವಿದಾಯ ಹೇಳುತ್ತಿದ್ದು, ಜೂನ್‌ 26 ರಿಂದ ಈ ಫೀಚರ್‌ ಬಂದ್‌ ಆಗಲಿದೆ. ಯೂಟ್ಯೂಬ್‌ ನ್ಲಲಿ ಸ್ಟೋರಿಸ್ ಫೀಚರ್​ ಎಂಬುದು ತಾತ್ಕಾಲಿಕ ಪೋಸ್ಟ್ ಫಾರ್ಮ್ಯಾಟ್ ಆಗಿದೆ.  ಬಳಕೆದಾರರು ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್ ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಈಗಾಗಲೇ ಮಾಡಿರುವ ಪೋಸ್ಟ್‌ಗಳು ಕೂಡ ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ಎಂದು ಕಂಪನಿ ಹೇಳಿದೆ.

ಯೂಟ್ಯೂಬ್‌ ಬಳಕೆದಾರರಿಗಾಗಿ ಈ ಪ್ಲಾಟ್‌ ಫಾರ್ಮ್‌ ಅನ್ನು ಪರಿಚಯಿಸಿತ್ತು. ಆದರೆ ಈ ಫೀಚರ್‌ ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್ ಗಳಂತೆ ಯಶಸ್ಸನ್ನು ಕಂಡಿಲ್ಲ. ಹೀಗಾಗಿ ಈ ಫೀಚರ್‌ ಅನ್ನು ಕಂಪನಿ ವಾಪಸ್‌ ಪಡೆಯಲು ನಿರ್ಧರಿಸಿದೆ. ​ 2021ರಲ್ಲಿ ಟ್ವಿಟ್ಟರ್ ಫ್ಲೀಟ್ಸ್ ಎಂಬ ಇದೇ ರೀತಿಯ ವೈಶಿಷ್ಟ್ಯವನ್ನು ಪ್ರಾರಂಭಿಸಿ ಅದೇ ವರ್ಷ ಮತ್ತೆ ಹಿಂತೆಗೆದುಕೊಂಡಿತ್ತು.‌

suddiyaana