ಯೂಟ್ಯೂಬ್‌ ಸರ್ವರ್‌ ಡೌನ್ – ಬಳಕೆದಾರರು, ​​ಕಂಟೆಂಟ್​​ ಕ್ರಿಯೆಟರ್​ಗಳಿಂದ ದೂರು

ಯೂಟ್ಯೂಬ್‌ ಸರ್ವರ್‌ ಡೌನ್ – ಬಳಕೆದಾರರು, ​​ಕಂಟೆಂಟ್​​ ಕ್ರಿಯೆಟರ್​ಗಳಿಂದ ದೂರು

ನವದೆಹಲಿ: ಜಗತ್ತಿನಾದ್ಯಂತ ಲಕ್ಷಾಂತರ ಜನರು ಬಳಸುತ್ತಿರುವ ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್‌ App ಯೂಟ್ಯೂಬ್‌ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಯೂಟ್ಯೂಬ್‌ ಸರ್ವರ್‌ ಡೌನ್‌ ಆಗಿದ್ದು, ವಿಡಿಯೋ ಅಪ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಗುರುವಾರ ಯೂಟ್ಯೂಬ್​​ ಸರ್ವರ್​ ಡೌನ್​​​ ಆಗಿದ್ದು, ಬಳಕೆದಾರರು ಹಾಗೂ ಕಂಟೆಂಟ್​​ ಕ್ರಿಯೆಟರ್​ಗಳಿಗೆ​ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಬಳಕೆದಾರರು ಯೂಟ್ಯೂಬ್​ಗೆ ಪ್ರವೇಶಿಸಲು, ವಿಡಿಯೋಗಳನ್ನು ವೀಕ್ಷಿಸಲು ಮತ್ತು ವಿಷಯವನ್ನು ಅಪ್‌ಲೋಡ್ ಮಾಡುವಲ್ಲಿ ಕೆಲವು ಸಮಯ ಸಮಸ್ಯೆಯನ್ನು ಎದುರಿಸಿದ್ದಾರೆ.

ಇದನ್ನೂ ಓದಿ: ನಿವೃತ್ತಿ ವಯಸ್ಸು ದಾಟಿದರೂ ನಿರಂತರ ಕೆಲಸ..! – ಯುವಕರಿಗೆ ಸ್ಪೂರ್ತಿಯಾದ ಹಸನ್ ಅಲಿ..!

ಯೂಟ್ಯೂಬ್​ ಸರ್ವರ್​ ಡೌನ್​​​ ಆಗಿರುವ ಕುರಿತಾಗಿ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼನನ್ನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ವಿಡಿಯೋಗಳನ್ನು ವೀಕ್ಷಿಸಲು ಆಗುತ್ತಿಲ್ಲ ಎಂದು ಟ್ವೀಟ್​​ ಮಾಡಿದ್ದಾರೆ.

ಯೂಟ್ಯೂಬ್‌  ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕುರಿತು ದೂರುಗಳು ಕೇಳಿಬಂದ ಬೆನ್ನಲ್ಲೇ, ಯೂಟ್ಯೂಬ್ ಅಧಿಕೃತ ಖಾತೆ ಮೂಲಕವಾಗಿ ಕಂಪನಿ ಪ್ರತಿಕ್ರಿಯಿಸಿದೆ. “ಯೂಟ್ಯೂಬ್​ ಬಳಕೆದಾರರು ಹಾಗೂ ಕಂಟೆಂಟ್​​ ಕ್ರಿಯೆಟರ್​ಗಳು ವಿಡಿಯೋ ಅಪ್‌ಲೋಡ್ ಮಾಡಲು ಅಥವಾ ಯೂಟ್ಯೂಬ್​​ ವೀಕ್ಷಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ತಾಂತ್ರಿಕ ದೋಷ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್​​ ಅನುಸರಿಸಬಹುದು” ಎಂದು ಹೇಳಿದೆ.

suddiyaana