ರೀಲ್ಸ್ ಹುಚ್ಚಿಗೆ ಹಸುವಿಗೆ ಚಿಕನ್‌ ತಿನ್ನಿಸಿದ ಪಾಪಿ – ಹಿಂದೂ ಸಂಘಟನೆ ರೀವೆಂಜ್ ಹೇಗಿತ್ತು ಗೊತ್ತಾ?

ರೀಲ್ಸ್ ಹುಚ್ಚಿಗೆ ಹಸುವಿಗೆ ಚಿಕನ್‌  ತಿನ್ನಿಸಿದ ಪಾಪಿ – ಹಿಂದೂ ಸಂಘಟನೆ ರೀವೆಂಜ್ ಹೇಗಿತ್ತು ಗೊತ್ತಾ?

ಈಗ ಕೆಲವರಿಗೆ ತಾನು ತಿಂದಿದ್ದು, ಬೇರೆಯವರು ತಿಂದಿದ್ದು ಎಲ್ಲಾವನ್ನೂ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಹಾಕುವ ಹುಚ್ಚು ಹೆಚ್ಚಾಗಿದೆ. ರೀಲ್ಸ್‌ ಗಳ ವೀವ್ಸ್‌ ಗಾಗಿ ಕೆಲವರು ಯಾವ ಹಂತಕ್ಕೂ ಬೇಕಾದ್ರೂ ಹೋಗ್ತಾರೆ. ವೀವ್ಸ್‌ ಗಾಗಿ ಏನೆನೋ ಕಂಟೆಂಟ್  ಮಾಡ್ತಾರೆ.  ಅದರಂತೆ ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋಕೆ ಮಣ್ಣು ತಿನ್ನೋ ಕೆಲಸ ಮಾಡಿದ್ದಾನೆ.  ಹಸುವಿಗೆ ಚಿಕನ್ ಮೋಮೋಸ್ ತಿನ್ನಿಸಿ ವಿಡಿಯೊ ಶೇರ್ ಮಾಡಿಕೊಂಡಿದ್ದಾನೆ.

ಸದ್ಯ ಯುವಕನ ಈ ಕೃತ್ಯ ಹಿಂದೂಗಳಲ್ಲಿ ಆಕ್ರೋಶ ಮೂಡಿಸಿದೆ. ಹಿಂದೂಪರ ಸಂಘಟನೆಗಳ ಸದಸ್ಯರು ಆತನನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಡಿಸೆಂಬರ್ 2ರಂದು ಹರಿಯಾಣದ ಗುರುಗ್ರಾಮ್‌ನಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ.

ಇದನ್ನೂ ಓದಿ: ಭಾರತದ ದೀಪಾವಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ – UNESCO ಪಟ್ಟಿಗೆ ಸೇರಿದ ಬೆಳಕಿನ ಹಬ್ಬ

ನ್ಯೂ ಕಾಲೋನಿಯ 28 ವರ್ಷದ ಹೃತಿಕ್ ಈ ನೀಚ ಕೃತ್ಯ ಎಸಗಿದ್ದಾರೆ.  ಇವ್ನು ಬೀದಿ ವ್ಯಾಪಾರಿಯ ಅಂಗಡಿಯೊಂದರಿಂದ ಚಿಕನ್‌ ಮೋಮೋಸ್‌ ಖರೀದಿಸಿ ಹಸುವಿಗೆ ತಿನ್ನಿಸಿದ್ದಾನೆ. ವೈರಲ್ ಆದ ದೃಶ್ಯದಲ್ಲಿ ಹೃತಿಕ್ ತಾನು ತಿನ್ನುತ್ತಿದ್ದ ಚಿಕನ್ ಮೋಮೋಸ್‌ ಅನ್ನು ಹತ್ತಿರ ನಿಂತಿದ್ದ ಹಸುವಿಗೂ ತಿನ್ನಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯ ವನ್ನು ಆತನೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

 ಹಿಂದೂ ಪರ ಸಂಘಟನೆಗಳ ಆಕ್ರೋಶ

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ನಂತ್ರ ಆರೋಪಿ ಹೃತಿಕ್‌ನನ್ನು ಪತ್ತೆ ಹಚ್ಚಿ ದೂರು ದಾಖಲಿಸಿದ್ದಾರೆ. ಸದ್ಯ ಹೃತಿಕ್‌ ಕ್ಷಮೆಯಾಚಿಸಿ ವಿಡಿಯೊ ಹರಿಯಬಿಟ್ಟಿದ್ದಾನೆ. ಹಣದ ಆಮಿಷಕ್ಕೆ ತಾನು ಹಸುವಿಗೆ ಚಿಕನ್ ಮೋಮೋಸ್‌ಗಳನ್ನು ತಿನ್ನಿಸಿದ್ದಾಗಿ ಹೇಳಿಕೊಂಡಿದ್ದಾನೆ. ಸದ್ಯ ವಿಚಾರಣೆಯ ನಂತರ ಹೃತಿಕ್‌ಗೆ ಜಾಮೀನು ನೀಡಲಾಗಿದೆ. ಈ ಘಟನೆಯು ಪ್ರಾಣಿಗಳನ್ನು ಹಿಂಸಿಸುವುದು ಮಾತ್ರವಲ್ಲದೆ ಜನಪ್ರಿಯತೆ ಮತ್ತು ಆರ್ಥಿಕ ಲಾಭಕ್ಕಾಗಿ ಮುಗ್ಧ ಜೀವಿಗಳನ್ನು ಗುರಿಯಾಗಿಸುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿರುವುದನ್ನು ಸೂಚಿಸಿದ್ದು ಸಾರ್ವಜನಿಕರು ಕಳವಳ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಘಟನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

 

Kishor KV