ವೈರಲ್ ವಿಡಿಯೋ… ಸಿನಿಮಾ ಶೈಲಿಯಲ್ಲಿ ಬಂದು ಚಲಿಸುತ್ತಿದ್ದ ಬಸ್ಸಿನ ಗಾಜು ಪುಡಿ ಮಾಡಿದ ಯುವಕ

ವೈರಲ್ ವಿಡಿಯೋ… ಸಿನಿಮಾ ಶೈಲಿಯಲ್ಲಿ ಬಂದು ಚಲಿಸುತ್ತಿದ್ದ ಬಸ್ಸಿನ ಗಾಜು ಪುಡಿ ಮಾಡಿದ ಯುವಕ

ಕೇರಳ: ಚಲಿಸುತ್ತಿದ್ದ ಬಸ್ಸಿಗೆ ಸಿನಿಮೀಯ ರೀತಿಯಲ್ಲಿ ಯುವಕನೊಬ್ಬ ಡಿಕ್ಕಿ ಹೊಡೆದು ಗಾಜನ್ನು ಪುಡಿ ಮಾಡಿದ ವಿಚಿತ್ರ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂತಲಮನ್ನಾದಲ್ಲಿ ನಡೆದಿದೆ.

ಇದನ್ನೂ ಓದಿ:  ವರನ ಕಡೆಯವರು ಕೊಡಿಸಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆ ರದ್ದು!

ಈ ಘಟನೆ ಬುಧವಾರ ಸಂಜೆ ಜುಬಿಲಿ ಜಂಕ್ಷನ್ ಬಳಿ ನಡೆದಿದೆ. ಈ ವೇಳೆ ಬಸ್ ಮಂಕಡಾ ಕಡೆಗೆ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಯುವಕನೊಬ್ಬ ಓಡಿಬಂದು  ಮೇಲಕ್ಕೆ ಜಿಗಿದು ತಲೆಯಿಂದ ಬಸ್ ಗೆ ಡಿಕ್ಕಿ ಹೊಡೆದಿದ್ದು, ವಿಂಡ್ ಶೀಲ್ಡ್ ಗಾಜು ಪುಡಿಯಾಗಿದೆ. ಅಲ್ಲದೇ ಯುವಕ ಡಿಕ್ಕಿ ಹೊಡೆದ ರಭಸಕ್ಕೆ ದೂರಕ್ಕೆ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡುಗಳ ಬಳಿಕ ಎದ್ದು ಬಸ್ ಏರಿದ್ದಾನೆ. ಅಲ್ಲದೇ ಡ್ರೈವರ್ ಸೀಟ್ ನಲ್ಲಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈ ಹಿಂದೆಯೂ ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಆತನ್ನು ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

suddiyaana