ಮದುವೆ ಮಂಟಪಕ್ಕೆ ಜೆಸಿಬಿಯಲ್ಲೇ ಬಂದ ವರ – ಕಾರಣವೇನು ಗೊತ್ತಾ?

ಮದುವೆ ಮಂಟಪಕ್ಕೆ ಜೆಸಿಬಿಯಲ್ಲೇ ಬಂದ ವರ – ಕಾರಣವೇನು ಗೊತ್ತಾ?

ಮದುವೆ ಅಂದ ಕೂಡಲೇ ಅಲ್ಲಿ ಡಿಜೆ, ಡ್ಯಾನ್ಸ್, ಗುಂಡು, ತುಂಡು ಇದ್ದೇ ಇರುತ್ತದೆ. ಅಷ್ಟೇ ಅಲ್ಲದೇ ತಮ್ಮ ಪ್ರತಿಷ್ಠೆ ಮೆರೆಯಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ದುಬಾರಿ ಕಾರುಗಳಲ್ಲಿ ಮೆರವಣೆಗೆ ತೆರಳುತ್ತಾರೆ. ಆದ್ರೆ ಇಲ್ಲೊಬ್ಬ ವರ ತನ್ನ ಮದುವೆ ಮೆರವಣಿಗೆಯನ್ನು ಬಹಳ ವಿಭಿನ್ನವಾಗಿ  ಮಾಡಿದ್ದು, ಇದರ ಫೋಟೋ ವಿಡಿಯೋಗಳು ಸಾಮಾಜಿಕ ತಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಆನೆಯೊಂದಿಗೆ ಯುವತಿಯ ಚೆಲ್ಲಾಟ – ಚೆಂಡಿನಂತೆ ಎತ್ತಿ ಬಿಸಾಡಿದ ಗಜರಾಜ

ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ಗಂಗಾಧರ್ ಬೆಹೆರಾ ಎಂಬ ವರ ತನ್ನ ಮದುವೆ ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಿದ್ದಾರೆ. ಎಲ್ಲರೂ ಕಾರಿನಲ್ಲಿ ಮದುವೆ ಮಂಟಪಕ್ಕೆ ತೆರಳಿದ್ದರೆ, ವರ ಮಾತ್ರ ಜೆಸಿಬಿಯ ಮೂಲಕ ಮೆರವಣಿಗೆ ಹೋಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.

ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.

ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜಿಸಿಬಿಯಲ್ಲಿ ಮೆರವಣಿಗೆ ಹೋಗಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

suddiyaana