“ಮೋದಿ ಭಾರತದಲ್ಲಿ ಪ್ರತಿದಿನ 115 ಮಂದಿ ಕಾರ್ಮಿಕರು ಆತ್ಮಹತ್ಯೆ” – ಮಲ್ಲಿಕಾರ್ಜುನ ಖರ್ಗೆ ಕಿಡಿ

“ಮೋದಿ ಭಾರತದಲ್ಲಿ ಪ್ರತಿದಿನ 115 ಮಂದಿ ಕಾರ್ಮಿಕರು ಆತ್ಮಹತ್ಯೆ” – ಮಲ್ಲಿಕಾರ್ಜುನ ಖರ್ಗೆ ಕಿಡಿ

ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರ ಭಾರತದಲ್ಲಿ ಪ್ರತಿದಿನ 115 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಗುಜರಾತ್‌ನಲ್ಲಿ ದಿನಗೂಲಿಗಳ ಆತ್ಮಹತ್ಯೆ ಪ್ರಮಾಣವು ಐದು ವರ್ಷಗಳಲ್ಲಿ ಶೇ 50. 44 ರಷ್ಟು ಹೆಚ್ಚಾಗಿದೆ. ಪ್ರತಿದಿನ ಸುಮಾರು 9 ಕೂಲಿ ಕಾರ್ಮಿಕರು ಆತ್ಮಹತ್ಯೆಯಿಂದ ಸಾಯುತ್ತಾರೆ ಎಂದು ಅಂಕಿ ಅಂಶಗಳಿಂದ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಉರಿ ದಾಳಿ, ಪುಲ್ವಾಮಾ ದಾಳಿ ಬಿಜೆಪಿ ಸರ್ಕಾರದ ಪ್ಲಾನ್ – ನ್ಯಾಷನಲ್ ಕಾನ್ಫರೆನ್ಸ್ ಶೇಖ್ ಮುಸ್ತಫಾ ಕಮಾಲ್ ಗಂಭೀರ ಆರೋಪ

ಈ ಕುರಿತು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಬಿಜೆಪಿಯ ಗುಜರಾತ್ ಮಾದರಿಯಲ್ಲಿ, ಗುಜರಾತ್ ನಲ್ಲಿ ಪ್ರತಿದಿನ 9 ಮಂದಿ ಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತಲ್ಲಿ ಪ್ರತಿದಿನ 115 ದಿನಗೂಲಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಿಮ್ಮ “ಡಬಲ್ ಇಂಜಿನ್” ಬಡವರ ಆಕಾಂಕ್ಷೆಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ” ಎಂದು ಕಿಡಿಕಾರದ್ದಾರೆ.

ಗುಜರಾತ್‌ನಲ್ಲಿ, ದಿನಗೂಲಿಗಳ ಆತ್ಮಹತ್ಯೆ ಪ್ರಮಾಣವು ಐದು ವರ್ಷಗಳಲ್ಲಿ 50. 44 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರತಿದಿನ ಸುಮಾರು 9 ಕೂಲಿ ಕಾರ್ಮಿಕರು ಆತ್ಮಹತ್ಯೆಯಿಂದ ಸಾಯುತ್ತಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಕಳೆದ 5 ವರ್ಷಗಳ ಅಂಕಿಅಂಶಗಳನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದಾರೆ.

ದಿನಗೂಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. 2017 ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ದಿನಗೂಲಿ ಕಾರ್ಮಿಕರ ಸಂಖ್ಯೆ 2,131 ರಷ್ಟಿದೆ. ಅಂದರೆ ಪ್ರತಿದಿನ 6 ಕಾರ್ಮಿಕರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. 2018 ರಲ್ಲಿ, ಇದು ಒಂದೇ ವರ್ಷದಲ್ಲಿ ಶೇ. 18.34 ರಷ್ಡು, ಅಂದರೆ 2,522 ಕ್ಕೆ ಏರಿಕೆಯಾಗಿತ್ತು. 2019 ರಲ್ಲಿ 2,649 ಪ್ರಕರಣಗಳು ವರದಿಯಾಗಿವೆ. 2020 ರಲ್ಲಿ 2,754 ಪ್ರಕರಣಗಳು ಮತ್ತು 2021 ರಲ್ಲಿ 3,206 ದಿನಗೂಲಿ ಕಾರ್ಮಿಕರ ಸಾವುಗಳು ವರದಿಯಾಗಿವೆ. ಗುಜರಾತ್‌ನಲ್ಲಿ ದಿನಗೂಲಿ ವೇತನ ತುಂಬಾ ಕಡಿಮೆ ಇದೆ. ಇದೂ ಕೂಡ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

suddiyaana