ರೀಲ್ಸ್ಗಾಗಿ ಮೊಸಳೆ ಬಾಲ ಎಳೆದ ಯುವಕರು! – ಆಮೇಲೆ ಏನಾಯ್ತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ವೀವ್ಸ್, ಲೈಕ್ಸ್ ಹೆಚ್ಚು ಬರ್ಬೇಕು ಅಂತ ಏನು ಮಾಡೋದಿಕ್ಕೂ ರೆಡಿ ಇರ್ತಾರೆ. ಇದ್ರಿಂದ ಒಳ್ಳೆಯದ್ದಾಗುತ್ತಾ? ಕೆಟ್ಟದಾಗುತ್ತಾ ಅಂತ ಒಂಚೂರು ಯೋಚನೆ ಮಾಡಲ್ಲ. ಕೆಲವರು ಫೇಮಸ್ ಆಗಲು ಅಪಾಯಕಾರಿ ರೀಲ್ಸ್ ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲೊಂದು ಯುವಕರ ಗುಂಪು ಮೊಸಳೆಯ ಬಾಲ ಹಿಡಿಯಲು ಹೋಗಿದ್ದಾರೆ.
ಇದನ್ನೂ ಓದಿ:ಅಧಿವೇಶನ ಮುಗಿಯುತ್ತಿದ್ದಂತೆ ಡಿಕೆಶಿ ಸಿಎಂ! – ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ ಕೈ ಶಾಸಕರು!
ತಮ್ಮ ರೀಲ್ಸ್ ವೈರಲ್ ಆಗ್ಬೇಕು ಅನ್ನೋ ಕಾರಣಕ್ಕೆ ಯುವಕರು ಹೊಸ ಹೊಸ ಸಾಹಸಕ್ಕೆ ಕೈ ಮುಂದಾಗುತ್ತಾರೆ. ಯುವಕರು ಹುಚ್ಚಾಟ ಮೆರೆಯುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ರಾಜಸ್ತಾನದ ಆಳ್ವಾರ್ ಬಳಿಯ ಸಿಲಿಸೇರ್ ಸರೋವರದ ಸಮೀಪದಲ್ಲಿ ಯುವಕರು ಮೊಸಳೆ ಜೊತೆ ರೀಲ್ಸ್ ಮಾಡಲು ಹೋಗಿದ್ದಾರೆ. ಯುವಕನೊಬ್ಬ ಮೊಸಳೆಯ ಬಾಲ ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಈ ಭಯಾನಕ ವಿಡಿಐೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವಕರ ಗುಂಪೊಂದು ಆಲ್ವಾರ್ನ ಸಿಲಿಸೆರ್ ಸರೋವರದ ಬಳಿ ರೀಲ್ಸ್ ಹುಚ್ಚಿಗಾಗಿ ಮೊಸಳೆ ಜೊತೆ ಹುಚ್ಚಾಟ ಮೆರಿದಿದ್ದಾರೆ. ಸರೋವರದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆ ಸಮೀಪಕ್ಕೆ ಹೋಗಿ ಯುವಕರು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಇದಕ್ಕಿಂತಲೂ ಅಪಾಯಕಾರಿ ಎಂದರೆ ಈ ಗುಂಪಿನಲ್ಲಿದ್ದ ಒಬ್ಬ ಯುವಕ ಮೊಸಳೆಯ ಬಾಲ ಹಿಡಿಯಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಮೊಸಳೆಯು ತಕ್ಷಣವೇ ನೀರಿನೊಳಗೆ ಜಿಗಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ದೃಶ್ಯವನ್ನು ಸರೋವರದ ಬಳಿ ವ್ಲಾಗ್ ಮಾಡುತ್ತಿದ್ದ ಯುವಕರಲ್ಲಿ ಒಬ್ಬರು ಸೆರೆಹಿಡಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಸೋಶಿಯಲ್ ಮೀಡಿಯಾ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂತಹ ಅಪಾಯಕಾರಿ ವರ್ತನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಬಳಕೆದಾರರೊಬ್ಬರು ರೀಲ್ಸ್ ಗಾಗಿ ಪ್ರಾಣ ಕಳೆದುಕೊಳ್ಳಲು ಕೂಡ ಇಂದು ಜನ ಸಿದ್ದರಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ರೀಲ್ಸ್ ಚಟ ಇಂದು ಮಾರಕವಾಗಿ ಹಬ್ಬಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

