ಬದುಕಿದ್ದಾಗ ಚಿತ್ರಹಿಂಸೆ ನೀಡಿದ.. ಸತ್ತ ಮೇಲೆ ಶವಕ್ಕೆ ತಾಳಿ ಕಟ್ಟಿದ! – ಯುವಕನ ಅಟ್ಟಹಾಸಕ್ಕೆ ಯುವತಿ ಬಲಿ!

ಇಡೀ ದೇಶವೇ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ತಾನು ಮದುವೆಯಾಗಬೇಕಿದ್ದ ಯುವತಿಗೆ ಬದುಕಿದ್ದಾಗ ಚಿತ್ರ ಹಿಂಸೆ ನೀಡಿದ ಪಾಪಿ ಈಗ ಆಕೆಯ ಶವಕ್ಕೆ ತಾಳಿಕಟ್ಟಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಲಿಫ್ಟ್ನಲ್ಲಿ 9 ಮಂದಿ 1 ಗಂಟೆ ಲಾಕ್! – ಅಗ್ನಿಶಾಮಕ ಸಿಬ್ಬಂದಿ ರೋಚಕ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಈ ಬೆಚ್ಚಿಬೀಳಿಸುವ ಘಟನೆ ಜಾರ್ಖಂಡ್ನ ಗಿರಿದಿಹ್ನಲ್ಲಿ ನಡೆದಿದೆ. ಮನೀಶ್ ಮುರ್ಮು ಯುವತಿಗೆ ಕಿರುಕುಳ ನೀಡಿದ ಯುವಕ. ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಆಕೆಯ ಮೃತದೇಹಕ್ಕೆ ತಾಳಿಕಟ್ಟಿಸಲಾಗಿದೆ.
ಅಷ್ಟಕ್ಕೂ ಆಗಿದ್ದೇನು?
ಆರೋಪಿ ಯುವಕ ಮನೀಶ್ ಮುರ್ಮು ಮತ್ತು ಮೃತ ಯುವತಿಗೆ ಸುಮಾರು ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಶೀಘ್ರದಲ್ಲೇ ಮದುವೆ ಮಾಡುವುದಾಗಿ ನಂಬಿಸಿ, ಯುವತಿಯನ್ನು ಮನೀಶ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದ್ರೆ, ಮನೆಗೆ ಬಂದ ದಿನದಿಂದಲೇ ಆಕೆಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ಇತ್ತ ಯುವತಿಯ ತಂದೆ ಮದುವೆ ದಿನಾಂಕ ನಿಗದಿಪಡಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದಾಗ, ಶುಕ್ರವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಮಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿ ಸಿಕ್ಕಿದೆ. ಆತಂಕಗೊಂಡ ಪೋಷಕರು ಹುಡುಗನ ಮನೆಗೆ ಧಾವಿಸಿ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮನೀಶ್ ನೀಡಿದ ನರಕಯಾತನೆಯನ್ನು ತಡೆಯಲಾರದೆ ನನ್ನ ಮಗಳು ವಿಷ ಸೇವಿಸಿದ್ದಾಳೆ, ಇದಕ್ಕೆ ಆತನೇ ಕಾರಣ ಎಂದು ಯುವತಿಯ ತಂದೆ ಆರೋಪಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿ ಮನೀಶ್ ಮುರ್ಮುನನ್ನು ಬಂಧಿಸಿದರು. ಆದರೆ, ಮರಣೋತ್ತರ ಪರೀಕ್ಷೆಯ ನಂತರ ಘಟನೆ ತೀವ್ರ ಉದ್ವಿಗ್ನ ರೂಪ ಪಡೆಯಿತು. ಎರಡೂ ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿ, ಯಾರೂ ಕೂಡ ಯುವತಿಯ ಶವವನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಅನಿವಾರ್ಯವಾಗಿ ಶವವನ್ನು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇಟ್ಟುಕೊಳ್ಳಬೇಕಾಯಿತು.
ಕಸ್ಟಡಿಯಿಂದ ಬಂದು ಹೆಣಕ್ಕೆ ತಾಳಿ ಕಟ್ಟಿದ ವರ ಮರುದಿನ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಶವವನ್ನು ಯುವಕನ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬಸ್ಥರು ವಿಚಿತ್ರ ಹಠಕ್ಕೆ ಬಿದ್ದರು. ಮನೀಶ್ ಶವವನ್ನು ಮದುವೆಯಾಗಲೇಬೇಕು ಎಂದು ಪಟ್ಟುಹಿಡಿದರು. ಕೊನೆಗೆ ಉದ್ರಿಕ್ತ ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಕಸ್ಟಡಿಯಲ್ಲಿದ್ದ ಆರೋಪಿ ಮನೀಶ್ನನ್ನು ಸ್ಥಳಕ್ಕೆ ಕರೆತಂದರು. ನೂರಾರು ಜನರ ಸಮ್ಮುಖದಲ್ಲಿ, ಪೊಲೀಸ್ ಅಧಿಕಾರಿಗಳ ಕಣ್ಣೆದುರೇ ಆರೋಪಿ ಮನೀಶ್ ಜೀವವಿಲ್ಲದ ಆ ಮುಗ್ಧ ಯುವತಿಯ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.

ನೋಡಿರಿ

