ಮುಂದೆ ಬರೋದು “ಕಾಂತಾರ-2” ಅಲ್ಲ! – ಗುಟ್ಟು ರಟ್ಟು ಮಾಡಿದ ರಿಷಭ್

ಮುಂದೆ ಬರೋದು “ಕಾಂತಾರ-2” ಅಲ್ಲ! – ಗುಟ್ಟು ರಟ್ಟು ಮಾಡಿದ ರಿಷಭ್

ಕಳೆದ ವರ್ಷ ತೆರೆಕಂಡ ಚಿತ್ರ ‘ಕಾಂತಾರ’ ಕರ್ನಾಟಕ, ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭಾರಿ ಜನಪ್ರಿಯತೆ ಪಡೆದಿದೆ. ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ “ಕಾಂತಾರ -2” ಯಾವಾಗ ಬರಲಿದೆ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಈ ಬಗ್ಗೆ ನಟ ರಿಷಭ್ ಶೆಟ್ಟಿ ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಪಠಾಣ್ ಇಷ್ಟ ಆಗಿಲ್ಲ ಎಂದ ಮಗು – ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೇಳಿದ್ದೇನು?

ಹೌದು, ನೂರು ದಿನಕ್ಕೂ ಹೆಚ್ಚು ದಿನಗಳ ಕಾಲ ಚಿತ್ರ ಪ್ರದರ್ಶನ ಕಂಡಿದೆ. ‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದಂತೆ ‘ಕಾಂತಾರ -2’ ಯಾವಾಗ ಅಂತಾ ಪ್ರೇಕ್ಷಕರು ಕೇಳುತ್ತಿದ್ದರು. ಇತ್ತೀಚೆಗೆ ಚಿತ್ರದ ಶತದಿನೋತ್ಸವ ಸಮಾರಂಭದ ವೇಳೆ ನಟ ರಿಶಭ್ ಶೆಟ್ಟಿ ಈ ಬಗ್ಗೆ ಮೌನ ಮುರಿದಿದ್ದಾರೆ. “ಕಾಂತಾರ ಭಾಗ 2″ ಯಾವಾಗ ಬರುತ್ತೆ ಅಂತಾ ಪ್ರೇಕ್ಷಕರು ಕೇಳುತ್ತಿದ್ದಾರೆ. ‘ಕಾಂತಾರ’ದಲ್ಲಿ ನೀವು ನೋಡಿರುವುದು ಎರಡನೇ ಪಾರ್ಟ್​. ಮುಂದೆ ಬರೋದು ಈ ಚಿತ್ರದ ಮೊದಲ ಭಾಗ’ ಎಂದು ಹೇಳಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

‘ಕಾಂತಾರ’ದ ಗೆಲುವು ಖುಷಿ ಕೊಟ್ಟಿದೆ. ಈ ಕಥೆಯನ್ನು ಮೊದಲು ಕಾರ್ತಿಕ್ ಗೌಡ ಬಳಿ, ನಂತರ ವಿಜಯ್ ಬಳಿ ಹೇಳಿದೆ. ತಕ್ಷಣ ಒಪ್ಪಿಗೆ ನೀಡಿ ನಿರ್ಮಾಣಕ್ಕೆ ಮುಂದಾದರು. ಚಿತ್ರವನ್ನು ನಾನು ಅಂದುಕೊಂಡಂತೆ ತರಲು ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಾನು ಆಭಾರಿ. ಯಶಸ್ಸಿಗೆ ಕಾರಣರಾದ ನನ್ನ ಚಿತ್ರತಂಡ, ಮಾಧ್ಯಮದ ಮಿತ್ರರಿಗೆ ಹಾಗೂ ಸಮಸ್ತ ಜನತೆಗೆ ನನ್ನ ಧನ್ಯವಾದ. ನನ್ನ ಮಡದಿ ಪ್ರಗತಿ ಅವರಿಗೆ ವಿಶೇಷ ಧನ್ಯವಾದ. ‘ ಎಂದು ರಿಷಭ್ ಹೇಳಿದ್ದಾರೆ.

suddiyaana