ಮತ್ತೆ ಬಾಲ ಬಿಚ್ಚಿದ ಪಾಪಿ ಪಾಕ್ – ಭಾರತ ನೀರು ನೀಡದಿದ್ದರೆ ಉಸಿರು ನಿಲ್ಲಿಸುತ್ತೇವೆಂದು ಗೊಡ್ಡು ಬೆದರಿಕೆ

ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ನಡುವಲ್ಲೇ ಮತ್ತೆ ಪಾಕಿಸ್ತಾನ ತನ್ನ ಬಾಲ ಬಿಚ್ಚಿದ್ದು, ನೀರು ಹರಿಸದಿದ್ದರೆ, ಉಸಿರು ನಿಲ್ಲಿಸುತ್ತೇವೆಂದು ಭಾರತಕ್ಕೆ ಬೆದರಿಕೆ ಹಾಕಿದೆ. ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದುಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಭಾರತ ನೀರು ನೀಡದಿದ್ದರೆ ನಾವು ಅವರ ಉಸಿರು ನಿಲ್ಲಿಸುತ್ತೇವೆ ಎಂಬ ಗೊಡ್ಡು ಬೆದರಿಕೆ ಹಾಕಿ, ನಾಲಿಗೆ ಹರಿಬಿಟ್ಟಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದುಗೊಳಿಸಿದೆ. ಪಾಕಿಸ್ತಾನ ಹಲವು ಬಾರಿ ಈ ಕುರಿತು ಮಾತನಾಡುವಂತೆ ಭಾರತಕ್ಕೆ ಮನವಿ ಮಾಡಿದೆ. ಆದರೆ, ಭಾರತ ನದಿ ನೀರು ಹಂಚಿಕೆಗೆ ನಿರಾಕರಿಸಿದೆ. ಈ ನಡುವಲ್ಲೇ ಪಾಕ್ ಸೇನಾ ವಕ್ತಾರ ಭಾರತ ನೀರು ನೀಡದಿದ್ದರೆ ಅವರ ಉಸಿರು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನ ಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ ಸಿಂಧೂ ನದಿ ಇಸ್ಲಾಮಾಬಾದ್‌ಗೆ ಸೇರಿದೆ ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದ್ದರು. ಭಾರತವು ತನ್ನ ದೌರ್ಬಲ್ಯಗಳನ್ನು ಮರೆಮಾಚಲು ಮತ್ತು ಜನರನ್ನು ಮೂರ್ಖರನ್ನಾಗಿಸಲು ಇಸ್ಲಾಮಾಬಾದ್ ಅನ್ನು ದೂಷಿಸುತ್ತಿದೆ. ಪ್ರಧಾನಿ ಮೋದಿ ಸುಳ್ಳು ಆರೋಪಗಳನ್ನು ಮಾಡಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಾರೆಂದು ಆರೋಪಿಸಿದ್ದರು.