ಮಟನ್ ತಿಂದ ಬಳಿಕ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ! – ಒಂದು ತಪ್ಪು.. ಅನಾರೋಗ್ಯ ಫಿಕ್ಸ್!

ಚಿಕನ್‌ಗಿಂತ ಮಟನ್ ತಿನ್ನುವುದು ತುಂಬಾ ಒಳ್ಳೆಯದು ಎನ್ನುವುದನ್ನು ನೀವು ಕೇಳಿರುತ್ತೀರಿ. ಹೌದು ಮಟನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಅನೇಕರು ವಾರಕ್ಕೊಂದು ಬಾರಿ ಆದ್ರೂ ಮಟನ್ ತಿನ್ನುತ್ತಾರೆ. ಮಟನ್ ತಿಂದ ಬಳಿಕ ತಪ್ಪಿತಪ್ಪಿಯೂ ಈ ಆಹಾರ ಸೇವಿಸಲೇಬೇಡಿ. ಇದ್ರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ಕೇಸ್ ದಾಖಲು! – ಈ ಸಲ ಡಾಗ್ ಸತೀಶ್ ಎಡವಟ್ಟೇನು?
ಮಟನ್ ಜಾಸ್ತಿ ರುಚಿಕೊಟ್ಟರು ಹೊಟ್ಟೆಯಲ್ಲಿ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಯಾರೇ ಆಗಲಿ ಮಟನ್ ತಿಂದ ಮೇಲೆ ಕೆಲವೊಂದು ಆಹಾರ, ಪಾನಿಯ ತೆಗೆದುಕೊಳ್ಳಬಾರದು ಎಂದು ಆಯುರ್ವೇದ ಹೇಳುತ್ತದೆ. ಇದ್ರಿಂದಾಗಿ ನಿಮ್ಮ ಆರೋಗ್ಯ ಹಾಳಾಗುವುದು ಪಕ್ಕಾ.
ಚೆನ್ನಾಗಿದೆ ಎಂದು ಮಟನ್ ತಿಂದ ಮೇಲೆ ಜೇನುತುಪ್ಪ ಸೇವನೆ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಮಟನ್ ದೇಹ ಸೇರಿದ ಮೇಲೆ ಶಾಖ ಉಂಟು ಮಾಡುತ್ತದೆ. ಹಾಗೇ ಜೇನುತುಪ್ಪ ಕೂಡ ಉಷ್ಣದ ಗುಣಗಳನ್ನೇ ಹೊಂದಿದೆ. ಈ ಎರಡು ಹೊಟ್ಟೆಯಲ್ಲಿ ಒಂದಾದರೆ ಅತಿಯಾದ ಶಾಖ ಉಂಟಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತವೆ.
ಮಟನ್ ತಿಂದ ಮೇಲೆ ಹೊಟ್ಟೆಯಲ್ಲಿ ಜೀರ್ಣವಾಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಡೈರಿ ಉತ್ಪನ್ನಗಳು ಅಂದರೆ ಹಾಲಿನಿಂದ ಮಾಡಿದಂತ ಕೆಲವೊಂದನ್ನು ತಿನ್ನಬಾರದು. ಹಾಲು, ಮೊಸರು, ಮಜ್ಜಿಗೆ ಕುಡಿಯಲೇಬಾರದು. ಏಕೆಂದರೆ ಮಟನ್ ಹಾಗೂ ಡೈರಿ ಉತ್ಪನ್ನಗಳು ಒಂದಕ್ಕೊಂದು ವಿರೋಧವಾಗಿವೆ. ಮಟನ್ ಹಾಗೂ ಡೈರಿ ಉತ್ಪನ್ನಗಳು ಜೀರ್ಣಕ್ರಿಯೆನ ನಿಧಾನ ಮಾಡುವ ಸಾಧ್ಯತೆ ಹೆಚ್ಚು. ಚರ್ಮದ ಸಮಸ್ಯೆಗಳನ್ನು ತಂದೊಡ್ಡಬಹುದು.
ಚಹಾ ಕುಡಿಯುವುದು ಎಲ್ಲರಿಗೂ ಇರುವ ಸಾಮಾನ್ಯವಾದ ಅಭ್ಯಾಸ ಆಗಿದೆ. ಕೆಲವೊಬ್ಬರು ಊಟದ ನಂತರವೂ ಟೀ ಬೇಕು ಎನ್ನುತ್ತಾರೆ. ಅದರಂತೆ ಮಟನ್ ತಿಂದ ಮೇಲೆಯೂ ಟೀ, ಕಾಫಿ ಇಂತಹವುಗಳನ್ನು ಕುಡಿಯಲೇಬಾರದು. ಒಂದು ವೇಳೆ ಟೀ ಕುಡಿದ್ರೆ ಹೊಟ್ಟ ಉಬ್ಬರ, ಎದೆಯುರಿ ಹಾಗೂ ಅಜೀರ್ಣ ನಿಮ್ಮನ್ನು ಕಾಡುತ್ತದೆ. ಹೀಗಾಗುವುದರಿಂದ ನಿಮ್ಮ ಆರೋಗ್ಯ ಹದಗೆಡುತ್ತದೆ. ಇನ್ನು ಮಟನ್ ಊಟ ಆದ ಮೇಲೆ ದೈನಂದನದಂತೆ ಬಾಳೆಹಣ್ಣುಗಳನ್ನು ತಿನ್ನಬಾರದು. ಸುಲಭವಾಗಿ ಜೀರ್ಣವಾಗುವ ಬಾಳೆಹಣ್ಣು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಡುಮಾಡುತ್ತದೆ.

ನೋಡಿರಿ

