ಮುಖಕ್ಕೆ ಈ ವಸ್ತುಗಳನ್ನು ಹಚ್ಚಲೇಬೇಡಿ! – ಇವುಗಳನ್ನು ಮುಖಕ್ಕೆ ಹಚ್ಚಿದ್ರೆ ಏನೆಲ್ಲಾ ತೊಂದರೆಯಾಗುತ್ತೆ?
ಮುಖ ಅಂದವಾಗಿ ಕಾಣ್ಬೇಕು ಅಂತಾ ಎಲ್ಲರೂ ಬಯಸ್ತಾರೆ. ಅದಕ್ಕಾಗಿ ಕೆಲ ವಸ್ತುಗಳನ್ನ ಮುಖಕ್ಕೆ ಹಚ್ಚಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಪ್ರಯತ್ನಿಸ್ತಾರೆ. ನೀವು ಈ ವಸ್ತುಗಳನ್ನು ಬಳಸ್ತಿದ್ರೆ ಎಚ್ಚರ ವಹಿಸೋದು ಮುಖ್ಯ..
ಇದನ್ನೂ ಓದಿ: ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಶರ್ಮಾ ಗುಡ್ ಬೈ ಹೇಳ್ತಾರಾ? – ಕೋಚ್ ವಿರುದ್ಧ ರೊಚ್ಚಿಗೆದ್ದ ರಿತಿಕಾ!
ಪ್ರತಿಯೊಬ್ಬರು ಕೂಡ ತಮ್ಮ ಮುಖ ಕಾಂತಿಯುತವಾಗಿದ್ದು ಯಾವುದೇ ಕಲೆ ಮೊಡವೆಗಳಿಲ್ಲದೇ ಇರಲಿ ಎಂದು ಬಯಸುವುದು ಸಹಜ. ಆದರೆ ಅದು ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಮುಖದ ಸೌಂದರ್ಯವನ್ನು ಕಾಪಾಡಲು ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳಿಂದ ಹಿಡಿದು ಅಕ್ಕಪಕ್ಕದವರು ನೀಡುವ ಸಲಹೆಗಳವರೆಗೆ ಹಲವು ಸಾಮಾಗ್ರಿಗಳನ್ನು ಬಳಸಿ ಸುಂದರವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಮುಖದ ಚರ್ಮ ಸೂಕ್ಷ್ಮವಾಗಿರುವ ಕಾರಣ, ಸಿಕ್ಕ ಸಿಕ್ಕ ವಸ್ತುಗಳ ಬಳಕೆಯಿಂದ ಮುಖದ ಸೌಂದರ್ಯ ಹಾಳಾಗಬಹುದು. ಹಾಗಾದ್ರೆ ಯಾವುದನ್ನು ಹಚ್ಚಬಹುದು, ಯಾವುದನ್ನು ಹಚ್ಚಬಾರದು ಹಾಗೂ ಏನೆಲ್ಲಾ ಮುನ್ಮೆಚ್ಚರಿಕೆ ಅಗತ್ಯ ಅನ್ನೋ ವಿವರ ಇಲ್ಲಿದೆ.
ಅನೇಕರು ಮುಖಕ್ಕೂ ಬಾಡಿ ಲೋಷನ್ ಹಚ್ಚುತ್ತಾರೆ.. ಆದರೆ ಈ ಬಾಡಿ ಲೋಷನ್ ಹಚ್ಚುವುದರಿಂದ ಮುಖದ ರಂಧ್ರಗಳು ಮುಚ್ಚಿಹೋಗಿ ಮೊಡವೆ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಇಲ್ಲವಾದರೆ ಅಲರ್ಜಿಯೂ ಆಗಬಹುದು. ಇನ್ನು ಕೆಲವರು ವಿಶೇಷ ತಜ್ಞ ರಂತೆ ಮುಖದಲ್ಲಿರುವ ಮೊಡವೆ ನಿವಾರಣೆಗೆ ಟೂತ್ ಪೇಸ್ಟ್ ಬಳಸುವುದಿದೆ. ಈ ತಪ್ಪನ್ನು ಎಂದಿಗೂ ನೀವು ಮಾಡಬೇಡಿ. ಹಲ್ಲುಜ್ಜಲು ಬಳಸುವ ಈ ಟೂತ್‌ಪೇಸ್ಟ್‌ನಲ್ಲಿ ಅನೇಕ ರಾಸಾಯನಿಕಗಳಿದ್ದು, ನೇರವಾಗಿ ಚರ್ಮದ ಮೇಲೆ ಪರಿಣಾಮ ಬೀರಬಹುದು. ಮೊಡವೆಗಳ ಮೇಲೆ ಟೂತ್ ಪೇಸ್ಟ್ ಹಚ್ಚುವುದರಿಂದ ಅಲರ್ಜಿ ಆಗಿ ಮುಖ ಮತ್ತಷ್ಟು ಹಾಳಾಗಬಹುದು.
ಇನ್ನು ಮುಖವನ್ನು ಬಿಸಿನೀರಿನಿಂದ ತೊಳೆಯುವುದು ಒಳ್ಳೆಯದಲ್ಲ. ಮುಖ ತೊಳೆಯಲು ಬಿಸಿ ನೀರು ಬಳಸುವುದರಿಂದ ತ್ವಚೆಯ ತೇವಾಂಶ ಕಡಿಮೆಯಾಗಿ ಮುಖ ಒಣಗುತ್ತದೆ. ಹೀಗಾಗಿ ತಣ್ಣಗಿನ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮಾತ್ರ ಮುಖ ತೊಳೆಯುವುದು ಸೂಕ್ತ. ಇದಿಷ್ಟೇ ಅಲ್ಲದೆ ಆಲ್ಕೋಹಾಲ್ ಅಂಶವನ್ನು ಹೊಂದಿರುವ ವಸ್ತುಗಳನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಷಿದೆ. ಇದಲ್ಲದೆ ನಿಂಬೆ ರಸವನ್ನು ನೇರವಾಗಿ ಚರ್ಮದ ಮೇಲೆ ಹಚ್ಷುವುದು ಒಳ್ಳೆಯದಲ್ಲ. ಚರ್ಮ ಸೂಕ್ಷ್ಮವಾಗುವುದರಿಂದ ನಿಂಬೆ ಹಚ್ಚುವುದರಿಂದ ಚರ್ಮ ಸುಟ್ಟಂತಾಗುವ ಸಾಧ್ಯತೆಯಿರುತ್ತದೆ. ಇಲ್ಲದ್ದಿದರೆ ತುರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.