ಒಬ್ಬರಿಗೆ ₹1 ಕೋಟಿ.. ಭೂಮಿಯಿಂದ 1 ಲಕ್ಷ ಅಡಿ ಎತ್ತರದಲ್ಲಿ ಮದುವೆ – ಹೇಗಿದೆ ಗೊತ್ತಾ ಹೊಸ ಟ್ರೆಂಡ್?

ಒಬ್ಬರಿಗೆ ₹1 ಕೋಟಿ.. ಭೂಮಿಯಿಂದ 1 ಲಕ್ಷ ಅಡಿ ಎತ್ತರದಲ್ಲಿ ಮದುವೆ – ಹೇಗಿದೆ ಗೊತ್ತಾ ಹೊಸ ಟ್ರೆಂಡ್?

ಮನೆ ಮುಂದೆ ಚಪ್ಪರ. ತಳಿರು ತೋರಣ. ಎಲ್ಲೆಲ್ಲೂ ಬಂಧು ಬಾಂಧವರು. ಮದುವೆ ಅಂದರೆ ಮೊದಲೆಲ್ಲಾ ಈ ಚಿತ್ರಣವೇ ಇರುತ್ತಿತ್ತು. ವಾರಗಟ್ಟಲೆ ಸಂಪ್ರದಾಯಗಳು ನಡೆಯುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಆಚರಣೆಗಳೂ ಬದಲಾವಣೆಯಾಗಿವೆ. ಈಗಂತೂ ಹೊಸ ಟ್ರೆಂಡ್ ಶುರುವಾಗಿದೆ.

ಹೌದು. ಈಗ ಮದುವೆಗಳಿಗೂ ಸಹ ಹೊಸ ಟ್ರೆಂಡ್ ಎಂಟ್ರಿ ಕೊಟ್ಟಿದೆ. ಏನಂದ್ರೆ ಬಾಹ್ಯಾಕಾಶದಲ್ಲಿ ಮದುವೆ ಮಾಡಿಸಲು ಶುರು ಮಾಡಿದ್ದಾರಂತೆ. ಒಂದು ಕಂಪನಿಯು ಪ್ರತಿ ದಂಪತಿಗೆ ಅಂದರೆ ಪ್ರತಿ ವ್ಯಕ್ತಿಗೆ 1 ಕೋಟಿ ರೂಪಾಯಿಯಂತೆ ಚಾರ್ಜ್ ಮಾಡಿ ಬಾಹ್ಯಾಕಾಶದಲ್ಲಿ ಮದುವೆಯಾಗಲು ಅವಕಾಶ ನೀಡುತ್ತಿದೆ. ಸ್ಪೇಸ್ ಪರ್ಸ್ಪೆಕ್ಟಿವ್ ಎಂದು ಕರೆಯಲ್ಪಡುವ ಕಂಪನಿಯು ಭೂಮಿಯ ಸ್ವಲ್ಪ ಮೇಲೆ ಹೋಗಿ ನೋಡಿದರೆ ಹೇಗೆ ಕಾಣುತ್ತದೆ ಅನ್ನೋ ಒಂದು ಕುತೂಹಲ ಅಂಶವನ್ನು ಇರಿಸಿಕೊಂಡು ಹೊಸ ಯೋಜನೆ ಶುರು ಮಾಡಿದೆ. ದೊಡ್ಡ ದೊಡ್ಡ ಕಿಟಕಿಗಳನ್ನು ಹೊಂದಿರುವ ಇಂಗಾಲ-ತಟಸ್ಥ ಬಲೂನ್ ವೊಂದರಲ್ಲಿ ಕಕ್ಷೆಗೆ ಕಳುಹಿಸುವ ಮೂಲಕ ದಂಪತಿಗಳಿಗೆ ಅಲ್ಲಿಯೇ ಮದುವೆಯಾಗಲು ಅವಕಾಶವನ್ನು ನೀಡುತ್ತಿದೆ ಎಂದು ಹೇಳಿದೆ. ಆರು ಗಂಟೆಗಳ ಗಗನನೌಕೆ ನೆಪ್ಚೂನ್ ಹಾರಾಟವು ಅತ್ಯಂತ ಅದ್ಭುತವಾದದ್ದು ಎಂದು ನಿರೀಕ್ಷಿಸಲಾಗಿದೆ, ಏಕೆಂದರೆ ಇದು ಅತಿಥಿಗಳನ್ನು ಭೂಮಿಯಿಂದ 1,00,000 ಅಡಿ ಎತ್ತರಕ್ಕೆ ಕರೆದೊಯ್ಯುತ್ತದೆ. ಮದುವೆಯಾದ ನಂತರ ಕೆಳಗೆ ತಂದು ಬಿಡುತ್ತದೆ. ಸಂಸ್ಥೆಯು ಈ ಪ್ರಕ್ರಿಯೆಯನ್ನು 2024 ರಲ್ಲಿ ಪ್ರಾರಂಭಿಸಲು ಯೋಜಿಸಿದೆ ಮತ್ತು ಈಗಾಗಲೇ 1,000 ಟಿಕೆಟ್ ಗಳನ್ನು ಮಾರಾಟ ಮಾಡಿದೆ. ಕಂಪನಿಯ ಸ್ಪೇಸ್ ಬಲೂನ್ ಗಗನನೌಕೆ ನೆಪ್ಚೂನ್ ಅನ್ನು ಕಕ್ಷೆಗೆ ಉಡಾಯಿಸುತ್ತದೆ ಮತ್ತು ಇದನ್ನು ರಾಕೆಟ್ ಗಳ ಬಳಕೆಯಿಲ್ಲದೆ ಅಥವಾ ಇಂಗಾಲದ ಹೆಜ್ಜೆಗುರುತು ಇಲ್ಲದೆ ನವೀಕರಿಸಬಹುದಾದ ಹೈಡ್ರೋಜನ್ ನಿಂದ ಚಾಲನೆ ಮಾಡಲಾಗುತ್ತದೆ.

ಇದನ್ನೂ ಓದಿ : 2 ವರ್ಷಗಳ ಬಳಿಕ ಡಿಕೆಶಿಗೆ ರಾಜಯೋಗ – 8 ವರ್ಷ ಸಿಎಂ ಆಗಿರುತ್ತಾರೆಂದು ಜ್ಯೋತಿಷಿ ಭವಿಷ್ಯ!

ಜನರು ಹಾರಾಟದ ಸಮಯದಲ್ಲಿ ಫುಲ್ ಎಂಜಾಯ್ ಮಾಡಬಹುದು. ಕಾಕ್ಟೈಲ್ ಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ಸಹ ಪ್ರಯಾಣಿಕರೊಂದಿಗೆ ಚಾಟ್ ಸವಿಯಬಹುದು. ಇದರಲ್ಲಿ ಎಂಟು ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಆರಾಮಾಗಿರುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ, ಆದಾಗ್ಯೂ ಹಲವಾರು ನಿರ್ದಿಷ್ಟತೆಗಳನ್ನು ಗ್ರಾಹಕರು ಕಸ್ಟಮೈಸ್ ಮಾಡಬಹುದು, ಕ್ಯಾಪ್ಸೂಲ್ ಊಟದ ಕೋಣೆಯ ಮೇಜು ಅಥವಾ ಮದುವೆ ವೇದಿಕೆಗೆ ಸ್ಥಳಾವಕಾಶ ಕಲ್ಪಿಸಬಹುದು ಎನ್ನಲಾಗಿದೆ.

suddiyaana