ವಾಟ್ಸ್ ಆಪ್ ನಲ್ಲಿ ಹೊಸ ಅಪ್ಡೇಟ್ಸ್! – ಫೋನ್ ಇಲ್ಲದಿದ್ರೂ ವಾಟ್ಸ್ ಆಪ್‌ನಲ್ಲಿ ಸ್ಟೇಟಸ್ ಹಾಕಬಹುದು!
ವಾಟ್ಸ್ ಆಪ್ ಬಳಕೆದಾರರಿಗೊಂದು ಗುಡ್ ನ್ಯೂಸ್ ಇದೆ. ಮೆಟಾ ಕಂಪನಿ ವಾಟ್ಸ್ ಅಪ್ ಬಳಕೆದಾರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಇನ್ನುಮುಂದೆ, ಫೋನ್ ಇಲ್ಲ ಅಂದ್ರೂ ಅಕೌಂಟ್‌ನಲ್ಲಿ ಸ್ಟೇಟಸ್ ಹಾಕಬಹುದು. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ..
ವಾಟ್ಸ್ ಅಪ್ ಕೋಟಿ ಕೋಟಿ ಜನರ ಮೆಚ್ಚಿನ ಮೆಸೆಂಜರ್ ಆಪ್ ಅನ್ನೋದು ಗೊತ್ತೇ ಇದೆ. ಲಕ್ಷಾಂತರ ಜನರ ಮುಂಜಾನೆ ಶುರುವಾಗೋದು, ರಾತ್ರಿ ಕೊನೆಯಾಗೋದು ವಾಟ್ಸ್ ಅಪ್ ನಿಂದಲೇ. ಬೆಳಗ್ಗಿನ ದಿನಚರಿ ಆರಂಭವಾಗೋ ಮೊದ್ಲು, ಇವತ್ತು ಯಾರ ಬರ್ತಡೇ ಇದೆ.. ಯಾರು ಏನ್ ಸ್ಟೇಟಸ್ ಹಾಕಿದಾರೆ ಅಂತಾ ನೋಡಿ, ಬಳಿಕ ದಿನಚರಿ ಆರಂಭಿಸುವವರು ಅದೆಷ್ಟೋ ಜನರಿದ್ದಾರೆ. ಇದೀಗ ವಾಟ್ಸ್ಆಪ್ ಬಳಕೆದಾರರಿಗೆ ಮೆಟಾ ಕಂಪನಿ ಗುಡ್‌ನ್ಯೂಸ್ ಒಂದನ್ನ ಕೊಟ್ಟಿದೆ. ಈಗ ಹೊಸದೊಂದು ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಿದೆ. ಇಷ್ಟು ದಿನ ವಾಟ್ಸ್ ಅಪ್‌ನಲ್ಲಿ ಯಾವುದಾದರೊಂದು ಸ್ಟೇಟಸ್ ಹಾಕಬೇಕಂದ್ರೆ ಕೈಯಲ್ಲಿ ಫೋನ್ ಇರ್ಲೇಬೇಕಿತ್ತು. ಕಂಪ್ಯೂಟರ್ ಲಾಗಿನ್ ಆದ್ರೆ ಅಲ್ಲಿ ಸ್ಟೇಟಸ್ ಹಾಕುವ option ಇರ್ಲಿಲ್ಲ. ಆದ್ರೆ ಇನ್ನುಮುಂದೆ ವಾಟ್ಸ್ ಆಪ್ ವೆಬ್‌ನಲ್ಲೂ ಈ option ಸಿಗುತ್ತೆ. ಇದ್ರ ಮೂಲಕವೇ ಬಳಕೆದಾರರು ಫೋಟೋ, ವಿಡಿಯೋ, ಮತ್ತು ಟೆಕ್ಸ್ಟ್ ಅನ್ನುವ ನೇರವಾಗಿ ಸ್ಟೇಟಸ್ ನಲ್ಲಿ ಅಪ್ ಡೇಟ್ ಮಾಡಬಹುದು.
ಇದನ್ನೂ ಓದಿ:ವಾಟ್ಸಾಪ್ ನಿಂದ ಮತ್ತೊಂದು ಫೀಚರ್ – ಬಳಕೆದಾರರಿಗೆ ಪರಿಚಯಿಸುತ್ತಿದೆ ವಾಯ್ಸ್ ನೋಟ್!
ವರದಿಯ ಪ್ರಕಾರ, ವೆಬ್ ಕ್ಲೈಂಟ್ಗಾಗಿ ಈ ಹಿಂದೆ ಅಧಿಕೃತ ಬೀಟಾ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಂಡಿದ್ದ ಆಯ್ದ ಬಳಕೆದಾರರ ಗುಂಪಿಗೆ ಇದು ಈಗಾಗಲೇ ಲಭ್ಯವಿದೆ. ಆದರೆ, ಇನ್ನು ಮುಂದೆ ಹೊಸ updates ಎಲ್ಲಾ ಬಳಕೆದಾರರಿಗೆ ಸಿಗಲಿದೆ. ಫೋಟೋ, ವಿಡಿಯೋ ಮತ್ತು ಟೆಕ್ಸ್ಟ್ ಅನ್ನು ನೇರವಾಗಿ ವೆಬ್ ಕ್ಲೈಂಟ್ನಿಂದ ಹಂಚಿಕೊಳ್ಳಲು ಅನುಮತಿಸುವ ಫೀಚರ್ ಅನ್ನ ಮೆಟಾ ಪರಿಚಯಿಸುತ್ತದೆ. WhatsApp ವೆಬ್ ನಲ್ಲಿ ಸ್ಟೇಟಸ್ ಅಪ್ಡೇಟ್ಸ್ ಬಂದ್ರೆ ಸ್ಟೇಟಸ್ ಹಂಚಿಕೊಳ್ಳುವಾಗ ಬಳಕೆದಾರರು ತಮ್ಮ ಮೊಬೈಲ್ ಸಾಧನ ಮತ್ತು ಕಂಪ್ಯೂಟರ್ಗಳ ನಡುವೆ ಟಾಗಲ್ ಮಾಡುವ ಅಗತ್ಯವನ್ನು ನಿವಾರಿಸುತ್ತದೆ. ಸ್ಟೇಟಸ್ ನವೀಕರಣಗಳ ವಿಷಯದಲ್ಲಿ ಮೊಬೈಲ್ ಮತ್ತು ವೆಬ್ ಆವೃತ್ತಿಗಳ ನಡುವಿನ ಈ ಸಿಂಕ್ರೊನೈಸೇಶನ್ ಬಳಕೆದಾರರಿಗೆ ಇದ್ದ ಕಿರಿಕಿರಿಯನ್ನು ದೂರ ಮಾಡಲಿದೆ.