ಇದು ವಾಷಿಂಗ್ ಮೆಷಿನ್ ಅಲ್ಲ.. ಕೋಳಿ ಗೂಡು..! – ಡೋರ್‌ ಓಪನ್‌ ಮಾಡಿದ್ರೆ ಬರುತ್ತೆ ಕೋಳಿಗಳು!

ಇದು ವಾಷಿಂಗ್ ಮೆಷಿನ್ ಅಲ್ಲ.. ಕೋಳಿ ಗೂಡು..! – ಡೋರ್‌ ಓಪನ್‌ ಮಾಡಿದ್ರೆ ಬರುತ್ತೆ ಕೋಳಿಗಳು!

ಹೊಸ ಹೊಸ ತಂತ್ರಜ್ಞಾನ ಬಂದಂತೆಲ್ಲಾ ಜನ ಅದಕ್ಕೆ ಸಮನಾಗಿ ಹೊಂದಿಕೊಂಡು ಹೋಗುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ವಾಹನಗಳಿಗೆ ಹೊಸ ಲುಕ್ ಬರುವಂತೆ ಏನೇನೋ ಮಾರ್ಪಾಡುಗಳನ್ನು ಮಾಡುತ್ತಿದ್ದಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಯಶ್ ಅಭಿಮಾನಿಗಳ ದುರ್ಮರಣ – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಮನೆಯಲ್ಲಿ ಯಾವುದಾದರೂ ವಸ್ತುಗಳು ಕೆಟ್ಟು  ಹೋದರೆ ಆ ವಸ್ತುವನ್ನು ಉಪಯೋಗಿಸಿಕೊಂಡು,  ಇನ್ನೇನಾದರೂ ತಯಾರಿಸಲು ಬಳಸುತ್ತಾರೆ. ಹೌದು ಹಲವರು  ಕೆಲವೊಂದು ದಿನನಿತ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಐಡಿಯಾಗಳನ್ನು ಉಪಯೋಗಿಸಿಕೊಂಡು ಕಡಿಮೆ ಖರ್ಚಿನಲ್ಲಿ ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂತಹ ಜುಗಾಡ್ ಐಡಿಯಾಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ಕೆಟ್ಟು ಹೋದ ವಾಷಿಂಗ್ ಮೆಷಿನ್ ಡೋರ್ ಬಳಸಿಕೊಂಡು ಮನೆಯ ಕೋಳಿ ಗೂಡಿಗೆ ಭದ್ರವಾದ ಬಾಗಿಲನ್ನು ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

@troll_lankasura2024 ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಷಿಂಗ್ ಮೆಷಿನ್ ಡೋರ್ ಓಪನ್ ಮಾಡಲು ಬರುತ್ತಾನೆ, ಎಲ್ರೂ ಬಹುಶಃ ಈತ ಬಟ್ಟೆ ಒಗೆಯುವ ಸಲುವಾಗಿ ವಾಷಿಂಗ್ ಮೆಷಿನ್ ಡೋರ್ ಓಪನ್ ಮಾಡುತ್ತಿರಬಹುದು ಎಂದು ಭಾವಿಸುತ್ತಾರೆ. ಆದ್ರೆ ಟ್ವಿಸ್ಟ್ ಏನಪ್ಪಾ ಅಂದ್ರೆ ಡೋರ್ ಓಪನ್ ಮಾಡುತ್ತಿದ್ದಂತೆ, ಕೋಳಿಗಳೆಲ್ಲವೂ ಹೊರಗೆ ಬರುವುದನ್ನು ಕಾಣಬಹುದು. ಈ ಹೊಸ ಬಗೆಯ ಕೋಳಿ ಗೂಡಿನ ಭದ್ರವಾದ ಬಾಗಿಲನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ. ಏನೇನ್ ತಲೆ ಓಡಿಸ್ತಿರೋ ಯಪ್ಪಾ ಅಂತ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಹಳೆಯ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಡೋರ್ ಬಳಸಿಕೊಂಡು ಯಾವ ರೀತಿ ಕೋಳಿ ಗೂಡಿಗೆ ಬಾಗಿಲು ತಯಾರಿಸಿದ್ದಾರೆ ಎಂಬುದನ್ನು ನೋಡಬಹುದು.

Shwetha M