ಅಬ್ಬಬ್ಬಾ.. ಬೆಂಕಿ ಉಗುಳೋ ಜಲಪಾತವಿದು! – ಈ ವಿಸ್ಮಯಕಾರಿ ಜಲಪಾತ ಎಲ್ಲಿದೆ ಗೊತ್ತಾ?

ಅಬ್ಬಬ್ಬಾ.. ಬೆಂಕಿ ಉಗುಳೋ ಜಲಪಾತವಿದು! – ಈ ವಿಸ್ಮಯಕಾರಿ ಜಲಪಾತ ಎಲ್ಲಿದೆ ಗೊತ್ತಾ?

ಜಲಪಾತ ಅಂದಾಗ ಸುತ್ತಲೂ ಹಚ್ಚ ಹಸುರು.. ಸ್ವಚ್ಛಂಧ ಗಾಳಿ.. ಹಾಲಿ ನೊರೆಯಂತೆ ಉಕ್ಕಿ ಹರಿಯೋ ನೀರು ನಮ್ಮ ಕಣ್ಣ ಮುಂದೆ ಬರುತ್ತೆ.. ಆದ್ರೆ ಇಲ್ಲೊಂದು ವಿಸ್ಮಯಕಾರಿ ಜಲಪಾತವಿದೆ… ಇದು  ಬೆಂಕಿ ಉಗುಳೋ ಜಲಪಾತ ಅಂತಾನೇ ಫೇಮಸ್.. ಅಷ್ಟಕ್ಕೂ ಈ ಜಲಪಾತ ಬೆಂಕಿಯನ್ನ ಉಗುಳುತ್ತಾ? ಕೆಂಪು-ಕಿತ್ತಳೆ ಬಣ್ಣದಿಂದ ಇರೋದಿಕ್ಕೆ ಕಾರಣವೇನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು?- ಯಾರು ಔಟ್? ಯಾರು ಇನ್?

ಈ ಪ್ರಕೃತಿಯ ವಿಸ್ಮಯ ಯಾರು ಬಲ್ಲರು ಹೇಳಿ. ಅದರಲ್ಲೂ ಧುಮ್ಮಿಕ್ಕೋ ಜಲಪಾತ ನೋಡಲು ಎಷ್ಟು ಚಂದ ಅಲ್ವಾ.. ಹಾಲಿನ ನೊರೆಯಂತೆ ಧುಮ್ಮಿಕ್ಕೊ ಜಲಪಾತವನ್ನು ನೋಡ್ತಾ ಇದ್ರೆ ಸಮಯ ಹೋಗೋದು ಗೊತ್ತೇ ಆಗಲ್ಲ. ಸ್ವರ್ಗವೇ ನಮ್ಮತ್ತ ಬಂದಂತೆ ಭಾಸವಾಗುತ್ತೆ. ಆದ್ರೆ ಇಲ್ಲೊಂದು ಜಲಪಾತವಿದೆ. ಕೆಂಪು, ಕಿತ್ತಳೆ ಬಣ್ಣದಿಂದ ಕೂಡಿದೆ. ನೀರು ಧುಮ್ಮಿಕ್ಕೊದನ್ನ ನೋಡಿದಾಗ ಬೆಂಕಿ ಉಗುಳುತ್ತಿರುವಂತೆ ಭಾಸವಾಗುತ್ತೆ. ಈ ವಿಸ್ಮಯಕಾರಿ ಜಲಪಾತ ಇರೋದು, ಯುಎಸ್ ರಾಜ್ಯ ಕ್ಯಾಲಿಫೋರ್ನಿಯಾದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿ.  ಇದೊಂದು ಸೀಸನಲ್ ಜಲಪಾತ. ಇದನ್ನು ಹಾರ್ಸ್ಟೇಲ್ ಜಲಪಾತ ಎಂದು ಕರೆಯಲಾಗುತ್ತೆ. ಈ ಜಲಪಾತ ಇದರ ವಿಶಿಷ್ಟತೆಯಿಂದಾಗಿಯೇ ವಿಶ್ವಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತೆ.

ಹಾರ್ಸ್ಟೇಲ್ ಜಲಪಾತವನ್ನು ಫೈರ್ ಜಲಪಾತ ಅಂತಾನೂ ಕರೆಯಲಾಗುತ್ತೆ. ಇದೊಂದು ಸೀಸನಲ್ ಫೈರ್ ಜಲಪಾತ. ಅಂದ್ರೆ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ, ಈ ಜಲಪಾತದ ಬೀಳುವ ತೊರೆಗಳು ಕೆಂಪು-ಕಿತ್ತಳೆ ದೀಪಗಳಿಂದ ಹೊಳೆಯುತ್ತವೆ, ಅವುಗಳನ್ನ ನೋಡಿದ್ರೆ, ಬೆಂಕಿಯೇ ನೀರಿನಂತೆ ಧುಮ್ಮಿಕ್ಕುತ್ತಿರುವಂತೆ ಭಾಸವಾಗುತ್ತದೆ. ಅದಕ್ಕಾಗಿಯೇ ಇದನ್ನ ವಿಶಿಷ್ಟ ಜಲಪಾತ ಅನ್ನೋದು. ಆದ್ರೂ ಈ ಅದ್ಭುತ ದೃಶ್ಯದ ರಹಸ್ಯವು ತುಂಬಾ ಆಘಾತಕಾರಿಯಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ

ಯೊಸೆಮೈಟ್ ಫೈರ್ ಫಾಲ್ (Yosemite firefall) ನ್ಯಾಚುರಲ್ ಆಪ್ಟಿಕಲ್ ಇಲ್ಯೂಶನ್ (Natural Optical Illusion) ಆಗಿದ್ದು, ಇದು ಸೂರ್ಯಾಸ್ತಮಾನದ ಕಿರಣಗಳು ಹಾರ್ಸ್ಟೇಲ್ ಜಲಪಾತದಿಂದ ಬೀಳುವ ತೊರೆಗಳಿಗೆ ಸರಿಯಾದ ಕೋನದಲ್ಲಿ ಪ್ರತಿಫಲಿಸಿದಾಗ, ಅಂದರೆ ಸೂರ್ಯನ ಕಿರಣಗಳು ಈ ಜಲಪಾತದ ನೀರಿನ ಮೇಲೆ ಬಿದ್ದಾಗ ಇದು ಸಂಭವಿಸುತ್ತದೆ.

ಸೂರ್ಯನ ಬೆಳಕು ನಿಖರವಾಗಿ ಜಲಪಾತದ ಮೇಲೆ ಬೀಳುತ್ತದೆ. ಇದರಿಂದ ಜಲಪಾತದ ನೀರಿನಲ್ಲಿ ಕೆಂಪು-ಕಿತ್ತಳೆ ಹೊಳಪನ್ನು ಉಂಟುಮಾಡುತ್ತದೆ, ಇದು ಜಲಪಾತಕ್ಕೆ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತದೆ ಎಂದು Sfgate.com ವರದಿ ಮಾಡಿದೆ. ಈ ಅದ್ಭುತ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

ಇನ್ನು ಫೈರ್ ಜಲಪಾತ ನೋಡಲು ಉತ್ತಮ ಸಮಯವೆಂದರೆ ಫೆಬ್ರವರಿ ಮಧ್ಯದಿಂದ ಕೊನೆಯವರೆಗೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರತಿವರ್ಷ ಫೆಬ್ರವರಿ 10 ರಿಂದ 27 ರವರೆಗೆ ನೋಡಬಹುದು. ಸಂಜೆ 5:30 ರ ಸುಮಾರಿಗೆ ಸೂರ್ಯ ಮುಳುಗಿದಾಗ, ಅದರ ಬೆಳಕು ಜಲಪಾತಕ್ಕೆ ಅಪ್ಪಳಿಸುತ್ತದೆ. ಆ ಸಂದರ್ಭದಲ್ಲಿ, ಈ ಅದ್ಭುತ ನೋಟವನ್ನು ಕೇವಲ 3 ನಿಮಿಷಗಳ ಕಾಲ ನೋಡಲು ಸಿಗುತ್ತೆ, ಆದ್ದರಿಂದ ಜನರು ಅದನ್ನು ನೋಡಲು ಸಂಜೆ 4 ಗಂಟೆಯಿಂದ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸುತ್ತಾರೆ.

Shwetha M