Yorker KING ಬುಮ್ರಾಗಿಲ್ವಾ ಹೈಪ್? – ಕೊಹ್ಲಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಸಂಜನಾ?
ಬ್ಯಾಟರ್ಸ್ ಮುಂದೆ ಬೌಲರ್ಸ್ ಡಲ್?

ಕ್ರಿಕೆಟ್ ಒಂದು ಜಸ್ಟ್ ಗೇಮ್ ಆಗಿದ್ರೂ ಕೂಡ ಪ್ರತಿಯೊಬ್ಬ ಅಭಿಮಾನಿಯೂ ಅದನ್ನ ಎಮೋಷನಲ್ ಆಗಿ ತೆಗೆದುಕೊಳ್ತಾರೆ. ತಮ್ಮ ನೆಚ್ಚಿನ ತಂಡ ಮ್ಯಾಚ್ ವಿನ್ ಆದ್ರೆ ಖುಷಿಯಲ್ಲಿ ನಿದ್ದೆಯನ್ನೇ ಮಾಡಲ್ಲ. ಸೋತ್ರಂತೂ ಇಡೀ ರಾತ್ರಿ ಅಪ್ಸೆಟ್ ಆಗಿ ಕೂರ್ತಾರೆ. ಯಾಕಂದ್ರೆ ಕ್ರಿಕೆಟ್ ಮೇಲೆ ಇಟ್ಟಿರೋ ಅಭಿಮಾನವೇ ಅಂಥಾದ್ದು. ಇನ್ನು ಕ್ರಿಕೆಟರ್ಸ್ ವಿಷ್ಯಕ್ಕೆ ಬಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರೀಸ್ನಲ್ಲಿ ಇದ್ರೆ ಭಾರತ ತಂಡ ಗೆದ್ದೇ ಗೆಲ್ಲುತ್ತೆ ಅನ್ನೋ ಕಾನ್ಫಿಡೆನ್ಸ್ನಲ್ಲಿರ್ತಾರೆ. ಅವ್ರ ಬ್ಯಾಟಿಂಗ್ ಅಬ್ಬರವನ್ನ ಸೆಲೆಬ್ರೇಟ್ ಮಾಡ್ತಾರೆ. ಬಟ್ ಬ್ಯಾಟರ್ಸ್ಗೆ ಸಿಗೋ ಇದೇ ಕ್ರೆಡಿಟ್ ಎಷ್ಟೋ ಸಲ ಬೌಲರ್ಸ್ಗೆ ಸಿಗೋದೇ ಇಲ್ಲ. ಅದ್ರಲ್ಲಿ ನಮ್ಮ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಕೂಡ ಒಬ್ಬರು. ನಮ್ಮ ಭಾರತ ತಂಡ ಟಿ-20 ವಿಶ್ವಚಾಂಪಿಯನ್ ಆಗಿದೆ ಅಂದ್ರೆ ಅದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಜಸ್ಪ್ರೀತ್ ಬುಮ್ರಾ. ಸ್ಟಾರ್ ಬ್ಯಾಟರ್ಗಳೇ ಕೈಕೊಟ್ಟಾಗ ತಮ್ಮ ಬೌಲಿಂಗ್ ಅಸ್ತ್ರದ ಮೂಲಕ ಎದುರಾಳಿ ಆಟಗಾರರನ್ನ ಬೇಟೆಯಾಡಿದ್ರು. ಫೈನಲ್ ಪಂದ್ಯದಲ್ಲೂ ಕೂಡ ಕೈಚೆಲ್ಲಿ ಹೋಗ್ತಿದ್ದ ಗೆಲುವನ್ನ ತಮ್ಮ ಕಡೆ ವಾಲಿಸಿದ್ದೇ ಈ ಬುಮ್ರಾ ಅನ್ನೋ ಮಾಂತ್ರಿಕ. ಆದ್ರೆ ಬುಮ್ರಾ ಮಾತ್ರ ಎಲ್ಲೂ ಹೈಲೆಟ್ ಆಗೋದೇ ಇಲ್ಲ. ಇದೇ ಕಾರಣಕ್ಕೆ ಈಗ ಬುಮ್ರಾ ಪ್ರತ್ನಿ ಸಂಜನಾ ಗಣೇಶನ್ ವಿರಾಟ್ ಕೊಹ್ಲಿಗೆ ಥ್ಯಾಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಲಂಡನ್ ನಲ್ಲೇ ಸೆಟಲ್ ಆಗ್ತಾರಾ ಕೊಹ್ಲಿ? – ವಿರಾಟ್ ಶಾಕಿಂಗ್ ನಿರ್ಧಾರ ಯಾಕೆ?
ಕೊಹ್ಲಿಗೆ ಸಂಜನಾ ಥ್ಯಾಂಕ್ಸ್!
ಟಿ-20 ವಿಶ್ವಕಪ್ ಟೂರ್ನಿಯುದ್ದಕ್ಕೂ ಜಸ್ಪ್ರೀತ್ ಬುಮ್ರಾ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ರು. ಅದ್ರಲ್ಲೂ ಕೊನೇ ಪಂದ್ಯದಲ್ಲಿ ಕಡೆಯ ಮೂರು ಓವರ್ಗಳಲ್ಲಿ ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡವನ್ನ ಗೆಲ್ಲಿಸಿದ್ರು. ಬುಮ್ರಾ ಸಾಧನೆ ಬಗ್ಗೆ ಕಿಂಗ್ ವಿರಾಟ್ ಕೊಹ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೊಂಡಾಡಿದ್ರು. ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಯಾರ್ಕರ್ ಸ್ಪೆಷಲಿಸ್ಟ್ ಹಾಗೂ ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹಾಡಿ ಹೊಗಳಿದ್ದಾರೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಸ್ಟಾರ್ ವೇಗಿ ನೀಡಿದ ಪ್ರದರ್ಶನವನ್ನು ಕಿಂಗ್ ಕೊಹ್ಲಿ ಶ್ಲಾಘಿಸಿದ್ದಾರೆ. ಒತ್ತಡ ಮತ್ತು ಸಂಕಷ್ಟವನ್ನು ಭೇದಿಸಿ ದಕ್ಷಿಣ ಆಫ್ರಿಕಾ ಕೈಯಲ್ಲಿದ್ದ ಗೆಲುವನ್ನು ಭಾರತಕ್ಕೆ ತಂದುಕೊಟ್ಟ ಬುಮ್ರಾರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ರು. ಟೀಮ್ ಇಂಡಿಯಾ ಯಾವಾಗ ಸಂಕಷ್ಟಕ್ಕೆ ಸಿಲುಕಿದ್ರೂ ಈತ ಇದ್ದೇ ಇರುತ್ತಾನೆ. ಪ್ರತಿ ಬಾರಿ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮನ್ನು ಪದೇ ಪದೇ ಗೆಲ್ಲಿಸೋ ಭರವಸೆ ಮೂಡಿಸಿದ್ದು ಬೂಮ್ರಾ. ಟಿ20 ವಿಶ್ವಕಪ್ ಗೆಲುವಿನತ್ತ ಕರೆತಂದ ವ್ಯಕ್ತಿ ಆತ. ಬುಮ್ರಾ ಎಂಟನೇ ಅದ್ಭುತ. ಅವರು ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ. ಫೈನಲ್ ಪಂದ್ಯದ ಕೊನೆ 5 ಓವರ್ಗಳಲ್ಲಿ ಬುಮ್ರಾ ಬೌಲಿಂಗ್ ಮಾತ್ರ ಬಹಳ ವಿಶೇಷ. 2-3 ಬೌಲ್ ಮಾಡಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ರು. ನಾವು ಎಲ್ಲರೂ ಬುಮ್ರಾ ಅವರನ್ನು ಅಭಿನಂದಿಸೋಣ. ಭಾರತದ ವಿಶ್ವಕಪ್ ಗೆಲುವಿಗೆ ಅವರೇ ಕಾರಣ ಎಂದಿದ್ದರು ಕೊಹ್ಲಿ. ಹಾಗೇ ಬುಮ್ರಾಗಾಗಿ ಚಪ್ಪಾಳೆ ತಟ್ಟುವಂತೆ ಹೇಳಿದ್ದರು. ಇದೇ ಕಾರಣಕ್ಕೆ ಸ್ಟಾರ್ ವೇಗಿ ಬುಮ್ರಾ ಅವ್ರ ಪತ್ನಿ ಸಂಜನಾ ಗಣೇಶನ್ ವಿರಾಟ್ ಕೊಹ್ಲಿ ಅವರಿಗೆ ಥ್ಯಾಂಕ್ಸ್ ತಿಳಿಸಿದ್ದಾರೆ. ಡಿಯರ್ ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತಿನ ಮುಂದೆ ಬುಮ್ರಾ ಅವರನ್ನು ಹೈಪ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹೀಗೆ ಬುಮ್ರಾ ಅವ್ರ ಬಗ್ಗೆ ಇಷ್ಟೊಂದು ಕೊಂಡಾಡೋಕೂ ಕೂಡ ಕಾರಣ ಇದೆ. ಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 30 ರನ್ ಬೇಕಿತ್ತು. ಈ ಟೈಮಲ್ಲಿ ಆಟಗಾರರೆಲ್ಲಾ ಸಪ್ಪೆ ಮೋರೆ ಹಾಕಿಕೊಂಡು ಡಲ್ ಆಗಿದ್ರು. ಆದ್ರೆ ಕೊನೆಯ ಐದು ಓವರ್ಗಳಲ್ಲಿ ನಡೆದದ್ದು ನಿಜಕ್ಕೂ ಅದ್ಭುತ. ಕೊನೆಯ 5 ಓವರ್ಗಳ ಪೈಕಿ ಎರಡು ಓವರ್ ಬೌಲ್ ಮಾಡಿದ ಬುಮ್ರಾ ಪಂದ್ಯದ ದಿಕ್ಕನ್ನೇ ಬದಲಿಸಿದ್ದರು. ಸೌತ್ ಆಫ್ರಿಕಾ ಕಡೆ ವಾಲಿದ್ದ ವಿಕ್ಟರಿಯನ್ನ ಇಂಡಿಯಾ ಕಡೆ ತಿರುಗಿಸಿದ್ದರು. 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಸದ್ಯ ಟಿ-20 ವಿಶ್ವಕಪ್ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಬುಮ್ರಾ 8 ಪಂದ್ಯಗಳಲ್ಲಿ 8.26 ಸರಾಸರಿಯಲ್ಲಿ 15 ವಿಕೆಟ್ಗಳನ್ನ ಮತ್ತು ಬೌಲಿಂಗ್ನಲ್ಲಿ 4.47ರ ಎಕಾನಮಿ ಹೊಂದಿದ್ದಾರೆ. ಟೂರ್ನಿಯಲ್ಲಿ ಮೂರನೇ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇದೇ ಕಾರಣಕ್ಕೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿದ್ರು. ಸದ್ಯ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮೂವರು ಸ್ಟಾರ್ ಕ್ರಿಕೆಟಿಗರನ್ನು ಈ ತಿಂಗಳ ಆಟಗಾರ ಪ್ರಶಸ್ತಿಗೆ ಐಸಿಸಿ ನಾಮನಿರ್ದೇಶನ ಮಾಡಿದೆ. ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ, ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಅಫ್ಘಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಗಿರೋ ರಹಮಾನುಲ್ಲಾ ಗುರ್ಬಾಜ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಇಂಡಿಯನ್ಸ್ ಮಾತ್ರವಲ್ಲದೇ ವಿದೇಶಿ ಪ್ಲೇಯರ್ಸ್ ಕೂಡ ಬುಮ್ರಾ ಬೌಲಿಂಗ್ ಬಗ್ಗೆ ಗುಣಗಾನ ಮಾಡ್ತಿದ್ದಾರೆ. ಕೊಹಿನೂರು ವಜ್ರ, ಬೌಲಿಂಗ್ ಬ್ರಹ್ಮಾಸ್ತ್ರ ಅಂತೆಲ್ಲಾ ಕರೆಸಿಕೊಳ್ಳೋ ಬುಮ್ರಾಗೆ ಅಷ್ಟೊಂದು ಹೈಪ್ ಸಿಕ್ಕಿಲ್ಲ. ಹೀಗಾಗಿ ಕೊಹ್ಲಿ ಬುಮ್ರಾ ಪ್ರದರ್ಶನದ ಬಗ್ಗೆ ಮಾತನಾಡಿದ್ದಕ್ಕೆ ಸಂಜನಾ ಧನ್ಯವಾದ ತಿಳಿಸಿದ್ರು. ಅದೇನೇ ಇದ್ರೂ ಬುಮ್ರಾ ನಮ್ಮ ಟೀಂ ಇಂಡಿಯಾ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ಬೌಲರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಭಾರತ ಇನ್ನೇನು ಸೋಲುತ್ತೆ ಅನ್ನೋ ಎಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲ್ಲಿಸಿರೋ ಬುಮ್ರಾಗೂ ಕೂಡ ಸ್ಪೆಷಲ್ ಕ್ರೆಡಿಟ್ ಸಲ್ಲಲೇಬೇಕು. ಹ್ಯಾಟ್ಸ್ ಆಫ್ ಟು ಯು ಜಸ್ಪ್ರೀತ್ ಬುಮ್ರಾ.