ಮೋದಿ ನಂತ್ರ ಯಾರು ನಾಯಕ? – ದೇಶದ ಪ್ರಧಾನಿ ಆಗ್ತಾರಾ ಯೋಗಿ?
ಯತ್ನಾಳ್ ವೋಟ್ ಯಾರಿಗೆ?
ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಅಯ್ಕೆಯಾಗಿರುವ ನರೇಂದ್ರ ಮೋದಿ, ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಪಿಎಂ ಪಟ್ಟದಲ್ಲಿ ಇರ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಬಿಜೆಪಿ ನಾಯಕರೇ ಹಾಕಿಕೊಂಡ ನಿಯಮದ ಪ್ರಕಾರ 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲ. ಇದಕ್ಕೆ ಕೆಲವು ಕಡೆ ವಿನಾಯಿತಿ ನೀಡಿದರೂ, ಕೆಲವು ನಾಯಕರನ್ನು ಬಲವಂತವಾಗಿ ಅಧಿಕಾರದಿಂದ ಇಳಿಸಿದ ಉದಾಹರಣೆಗಳಿವೆ. ಹೀಗಾಗಿ, ಪ್ರಸ್ತುತ 73 ವರ್ಷದ ಮೋದಿ ಅವರು ಇನ್ನು ಎರಡು ವರ್ಷದ ಬಳಿಕ ಅಧಿಕಾರ ತ್ಯಜಿಸುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ. ಈ ನಡುವೆ ಮೋದಿ ನಂತ್ರ ಬಿಜೆಪಿಯಲ್ಲಿ ಯಾರು ಪಿಎಂ ಆಗ್ತಾರೆ ಅನ್ನೋ ಪ್ರಶ್ನೆ ಎದ್ದಿದೆ.. ಪಿಎಂ ರೇಸ್ನಲ್ಲಿ ಸಾಕಷ್ಟು ಜನರ ಹೆಸರು ಕೇಳಿ ಬರ್ತಿದೆ.. ಈ ನಡುವೆ ಯತ್ನಾಳ್ ಹೇಳಿದ ಹೆಸರು ಸಾಕಷ್ಟು ಸಂಚನ ಸೃಷ್ಟಿಸಿದೆ.
ಇದನ್ನೂ ಓದಿ:ಬೌಲಿಂಗ್ ವಿಭಾಗದಲ್ಲಿ ಒಂಟಿಯಾದ್ರಾ ಬುಮ್ರಾ?- ವಿಕೆಟ್ ಇಲ್ಲದೆ ಸಿರಾಜ್ ಶತಕ, ಬೇಡದ ದಾಖಲೆ ಬರೆದ ವೇಗದ ಬೌಲರ್
ನರೇಂದ್ರ ಮೋದಿ ಅವರು ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿ ಅಥವಾ ಮೊದಲೇ ನಿರ್ಗಮಿಸಲಿ, ಅವರ ನಂತರ ಪ್ರಧಾನಿ ಹುದ್ದೆಗೆ ಬಿಜೆಪಿಯಲ್ಲಿ ಯಾರು ಸೂಕ್ತ ವ್ಯಕ್ತಿ? ಮೋದಿ ಅವರ ಬಳಿಕ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಯಾರನ್ನು ಆಯ್ಕೆ ಮಾಡಬಹುದು? ಮೋದಿ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಯಾರು ಎಂಬ ಬಗ್ಗೆ ಪ್ರಶ್ನೆ ಎದ್ದಿದೆ. ಈ ರೇಸ್ನಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್, ರಾಜನಾಥ್ ಸಿಂಗ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಕಡೆ ಜನರ ಒಲವು ಹೆಚ್ಚಾಗಿದೆ. ಆದ್ರೆ ಇದ್ರಲ್ಲಿ ಯಾರು ಸೂಕ್ತ ವ್ಯಕ್ತಿ ಅನ್ನೋ ಪ್ರಶ್ನೆ ಎದ್ದಿದೆ. ಸಾಕಷ್ಟು ಜನ ಚರ್ಚೆ ಮಾಡ್ತಾ ಇರೋ ವಿಷ್ಯ ಅಂದ್ರ ಮೋದಿ ನಂತ್ರ ಯೋಗಿನ ಪಿಎಂ ಆಗೋಕೆ ಸೂಕ್ತ ವ್ಯಕ್ತಿ ಅನ್ನೋದು.. ಜನರ ಒಲವು ಕೂಡ ಇವರ ಮೇಲೆ ಇದೆ.. ಈಗ ಇದೇ ವಿಷ್ಯವನ್ನ ಯತ್ನಾಳ್ ಕೂಡ ಹೇಳಿದ್ದಾರೆ.
ಯೋಗಿಗೆ ವೋಟ್ ಹಾಕಿದ ಯತ್ನಾಳ್
ನಾಯಕತ್ವದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಬಿಜೆಪಿಯಲ್ಲಿ ವಾಜಪೇಯಿ ಅವರ ಬಳಿಕ ಈಗ ನರೇಂದ್ರ ಮೋದಿ ಅವರಿದ್ದಾರೆ. ಮೋದಿ ನಂತರ ಯೋಗಿ ಆದಿತ್ಯನಾಥ್ ಅವರಿದ್ದಾರೆ. ಉಳಿದ ಪಕ್ಷಗಳಲ್ಲಿ ನಾಕಯತ್ವದ ದಿವಾಳಿಯಾಗಿದೆ. ರಾಜ್ಯ ಬಿಜೆಪಿಯಲ್ಲೂ ಮುಂದೆ ಒಳ್ಳೆಯ ನಾಯಕತ್ವ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ. ನಿಶ್ಚಿತವಾಗಿ ಈ ಬಾರಿ ಉತ್ತಮ ನಾಯಕತ್ವ ಬರುತ್ತದೆ ಎನ್ನುವ ಮೂಲಕ ರಾಜ್ಯ ನಾಯಕತ್ವದ ಬದಲಾವಣೆ ಕುರಿತು ಪುನರುಚ್ಚರಿಸಿದರು. ಒಟ್ನಲ್ಲಿ ಮುಂದೆ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಯೋಗಿ ಅದಿತ್ಯನಾಥ್ ಇದ್ದು, ಸಾಕಷ್ಟು ಬೆಂಬಲ ಸಿಗುತ್ತಿದೆ.. ಯತ್ನಾಳ್ ಹೇಳಿದಂತೆ ಯೋಗಿನೇ ಮುಂದಿನ ಪಿಎಂ ಆಗ್ತಾರಾ ಅಥವಾ ಬೇರೆಯವರು ಆ ಸ್ಥಾನವನ್ನ ಕಸಿದುಕೊಳ್ತಾರಾ ಕಾದು ನೋಡಬೇಕಿದೆ.