ಯೋಗ Vs ವಾಕಿಂಗ್.. ಉತ್ತಮ ಆರೋಗ್ಯಕ್ಕೆ ಇದೇ ಬೆಸ್ಟ್!

ಇತ್ತೀಚಿನ ದಿನಗಳಲ್ಲಿ ಜನರು ಫಿಟ್‌ನೆಸ್ ಕಾಪಾಡಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡ್ತಿದ್ದಾರೆ. ಕೆಲವರು ಜಿಮ್‌ಗೆ ಹೋದ್ರೆ, ಇನ್ನೂ ಕೆಲವರು ಮನೆಯಲ್ಲೇ ಯೋಗ, ವಾಕಿಂಗ್ ಮಾಡ್ತಿರ್ತಾರೆ. ಯೋಗ ಹಾಗೂ ವಾಕಿಂಗ್ ಎರಡರಲ್ಲಿ ಯಾವುದು ಬೆಸ್ಟ್ ಅನ್ನೋ ಗೊಂದಲ ಇದ್ದೇ ಇದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ – 4ನೇ ಪಂದ್ಯ.. 3 ಸೂತ್ರ ಸಿದ್ಧ.. ಕೈಕೊಟ್ಟವರನ್ನ ಕೈ ಬಿಟ್ಟು ಗೆಲ್ತಾರಾ?
ಹೌದು ಅನೇಕರು ತೂಕ ಇಳಿಸಿಕೊಳ್ಬೇಕು ಅಂತಾ ಕಿಲೋಮೀಟರ್‌ಗಟ್ಟಲೆ ವಾಕಿಂಗ್ ಮಾಡ್ತಾರೆ.. ಇನ್ನೂ ಕೆಲವರು ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ವೆಟ್ ಲಾಸ್ ಮಾಡಿಕೊಳ್ಳಲು ವಾಕಿಂಗ್ ಅಥವಾ ಯೋಗ ಮಾಡುವವರೂ ಇದ್ದಾರೆ. ಈ ಎರಡರಲ್ಲಿ ಯಾವುದು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಯಾವುದು ಆರೋಗ್ಯಕ್ಕೆ ಉತ್ತಮ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಯೋಗಾಸನಗಳ ಅಭ್ಯಾಸವು ನಮ್ಮ ದೇಹದ ಉಸಿರಾಟವನ್ನು ಸುಧಾರಿಸುವುದಲ್ಲದೇ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.. ಅಲ್ಲದೇ ಇದು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.
ನಾವು ದಿನನಿತ್ಯ ಒಂದಷ್ಟು ದೂರ ನಡೆದರೆ ಸಾಕು.. ಇದು ನಮ್ಮ ಹೃದಯ ಬಡಿತವನ್ನು ಹೆಚ್ಚಿಸಿ, ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡುತ್ತದೆ. ಇದರಿಂದ ತೂಕ ಕಳೆದುಕೊಳ್ಳಬಹುದಾಗಿದೆ.. ಎಲ್ಲಾ ವಯಸ್ಸಿನ ಜನರು ಇದನ್ನು ಸುಲಭವಾಗಿ ಮಾಡಬಹುದು.
ಈ ಎರಡನ್ನು ಹೋಲಿಕೆ ಮಾಡಿದಾಗ ವಾಕಿಂಗ್ ಯೋಗಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಅಲ್ಲದೇ ಯೋಗ ವ್ಯಾಯಾಮಗಳನ್ನು ಮಾಡುವಾಗ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ನಾವು ದೇಹವನ್ನು ಸುಲಭವಾಗಿ ದಂಡಿಸಬಹುದಾಗಿದೆ..
ಯೋಗ ಮತ್ತು ವಾಕಿಂಗ್ ಎರಡೂ ತೂಕ ಇಳಿಕೆಗೆ ಸಹಾಯಕವಾಗಿವೆ. ವಾಕಿಂಗ್ ನೇರ ಪ್ರಯೋಜನಗಳನ್ನು ನೀಡಿದರೇ ಯೋಗದ ಮೂಲಕ ನಾವು ಸತತ ಪ್ರಯೋಜನಗಳನ್ನು ಪಡೆಯಬಹುದು. ಯಾವುದು ಉತ್ತಮ ಎಂಬುದು ವೈಯಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ.

ನೋಡಿರಿ

