ಯೋಧ ಸಿನಿಮಾದ ಟ್ರೇಲರ್ ಔಟ್‌ – ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್!

ಯೋಧ ಸಿನಿಮಾದ ಟ್ರೇಲರ್ ಔಟ್‌ – ಹೈಜಾಕ್ ಕಥೆ ಹೇಳಲು ಬಂದ ಸಿದ್ದಾರ್ಥ್!

ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ‘ಯೋಧ’ ಚಿತ್ರಕ್ಕಾಗಿ ಸೈನಿಕನ ಗೆಟಪ್ ತಾಳಿದ್ದಾರೆ. ಯೋಧ ಸಿನಿಮಾದ ಟ್ರೇಲರ್ ಕೂಡಾ ಸ್ಪೆಷಲ್ಲಾಗಿಯೇ ರಿಲೀಸ್ ಮಾಡಲಾಗಿದೆ. ಹಾರಾಡುತ್ತಿರುವ ವಿಮಾನದಲ್ಲಿ ಯೋಧ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಬಿಲಿಯನೇರ್‌ಗಳು ತಮಗೆ ಬೇಕಾಗಿ ಬಂಕರ್‌ಗಳನ್ನು ನಿರ್ಮಿಸ್ತಾ ಇರೋದ್ಯಾಕೆ? – ಅನಾಹುತದ ಮುನ್ಸೂಚನೆ ಸಿಕ್ಕಿದೆಯಾ?

ಈ ಸಿನಿಮಾದಲ್ಲಿ ನಾಯಕ ಅರುಣ್ ತಂದೆಯಂತೆ ಸೈನಿಕನಗಾಬೇಕು ಎಂದು ಕನಸು ಕಾಣುತ್ತಾನೆ. ಆಗುತ್ತಾನೆ ಕೂಡ. ಆದರೆ ಅವನ ಮೇಲೆ ದೇಶದ್ರೋಹದ ಆರೋಪ ಬರುತ್ತದೆ. ಹೀಗಾಗಿ ಆತನನ್ನು ಸಸ್ಪೆಂಡ್ ಮಾಡಲಾಗುತ್ತದೆ. ಒಂದು ದಿನ ವಿಮಾನ ಹೈಜಾಕ್ ಆಗುತ್ತದೆ. ಇದರಲ್ಲಿ ಅರುಣ್ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತದೆ. ಅಸಲಿಗೆ ವಿಮಾನದಲ್ಲಿ ಏನಾಗುತ್ತದೆ? ಅರುಣ್ ಎಲ್ಲರನ್ನೂ ರಕ್ಷಿಸುತ್ತಾನಾ ಅಥವಾ ಅವನೇ ಹೈಜಾಕರ್ ಹೌದಾ ಅನ್ನೋದು ಸಿನಿಮಾದ ಕಥೆ.

ಈ ಚಿತ್ರಕ್ಕೆ ರಾಶಿ ಖನ್ನಾ ನಾಯಕಿ. ದಿಶಾ ಪಟಾಣಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಮಾರ್ಚ್ 15ರಂದು ‘ಯೋಧ’ ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚೆಗೆ ದೇಶಪ್ರೇಮದ ಸಿನಿಮಾಗಳು ಗಮನ ಸೆಳೆಯುತ್ತಿವೆ. ‘ಜವಾನ್’, ‘ಫೈಟರ್’ ಮೊದಲಾದ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿವೆ. ಅದೇ ರೀತಿ ‘ಯೋಧ’ ಸಿನಿಮಾ ಕೂಡ ಗಮನ ಸೆಳೆಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

Shwetha M