ಕೇರಳದ ನರ್ಸ್ ನಿಮಿಷಾ ಪ್ರಿಯಾ ನೇಣು ಕುಣಿಕೆಯಿಂದ ಸದ್ಯಕ್ಕೆ ಪಾರು- ಮರಣದಂಡನೆ ಮುಂದೂಡಿಕೆ

ಕೇರಳದ ನರ್ಸ್ ನಿಮಿಷಾ ಪ್ರಿಯಾ  ನೇಣು ಕುಣಿಕೆಯಿಂದ ಸದ್ಯಕ್ಕೆ ಪಾರು- ಮರಣದಂಡನೆ ಮುಂದೂಡಿಕೆ

ಯೆಮೆನ್‌ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ನಾಳೆ ಯೆಮೆನ್‌ನಲ್ಲಿ ನಡೆಯಲಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ  ಮುಂದೂಡಲಾಗಿದೆ.  ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಮಧ್ಯಪ್ರವೇಶದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಜಾರಿಗೊಳಿಸಲು ಬುಧವಾರಕ್ಕೆ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಅವರ ರಕ್ಷಣೆಗೆ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್‌ನ ಪ್ರಮುಖ ಸೂಫಿ ವಿದ್ವಾಂಸ ಶೇಖ್ ಹಬೀರ್ ಉಮರ್ ಬಿನ್ ಹಾಫಿಝ್ ಅವರ ಮೂಲಕ ನಡೆಸಿದ ಪ್ರಯತ್ನಸಕ್ಸಸ್ ಆಗಿದೆ.

2017ರಲ್ಲಿ ತನ್ನ ಯೆಮೆನ್‌ನ ವ್ಯವಹಾರ ಬ್ಯುಸಿನೆಸ್ ಪಾರ್ಟ್ನರ್​ ಅಬ್ದೋ ಮಹ್ದಿ ಕೊಲೆಗೆ ಗಲ್ಲು ಶಿಕ್ಷೆಗೊಳಗಾದ ನಿಮಿಷ ಪ್ರಿಯಾ ಅವರನ್ನು ರಕ್ಷಿಸಲು ಮಾತುಕತೆಗಳು ನಡೆಯುತ್ತಿದೆ. ಯೆಮೆನ್‌ನಲ್ಲಿ ಶರಿಯಾ ಕಾನೂನಿನಡಿಯಲ್ಲಿ, ಬ್ಲಡ್ ಮನಿ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ನೀಡಲಾಗುವ ಕಾನೂನುಬದ್ಧವಾದ ಆರ್ಥಿಕ ಪರಿಹಾರವಾಗಿದೆ.

ಪಾಲಕ್ಕಾಡ್ ಜಿಲ್ಲೆಯ ನಿಮಿಷಾ ಪ್ರಿಯಾ ಅವರಿಗೆ 2020 ರಲ್ಲಿ ಮರಣದಂಡನೆ ವಿಧಿಸಲಾಯಿತು ಮತ್ತು ಅವರ ಅಂತಿಮ ಮೇಲ್ಮನವಿಯನ್ನು 2023 ರಲ್ಲಿ ತಿರಸ್ಕರಿಸಲಾಯಿತು. ನಿಮಿಷಾ ಕಡೆಯವರು 8.6 ಕೋಟಿ ರೂ. ನೀಡಲು ಸಿದ್ಧರಿದ್ದರು. ಆದರೆ ಮೃತ ವ್ಯಕ್ತಿಯ ಕಡೆಯವರು ಒಪ್ಪಿಕೊಂಡಿರಲಿಲ್ಲ. ಆದ್ರೆ ಈಗ ಸದ್ಯಕ್ಕೆ ಮರಣ ದಂಡನೆಯಿಂದ ಪಾರಾಗಿದ್ದು,  ದಿನ ದಿನಕ್ಕೂ ಈ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ.

ನಿಮಿಷಾ ಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೆಚ್ಚಿನದೇನೂ ಮಾಡಲು ಸಾಧ್ಯವಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. ಕೇರಳದ ಪಾಲಕ್ಕಾಡ್‌ನ ನರ್ಸ್ ನಿಮಿಷಾ ಪ್ರಿಯಾ ಅವರಿಗೆ 2020 ರಲ್ಲಿ ಯೆಮೆನ್‌ನ ಸ್ಥಳೀಯ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಈ ನಿರ್ಧಾರವನ್ನು ಪ್ರಶ್ನಿಸಿ ಅವರ ಕುಟುಂಬದವರು ಯೆಮೆನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು 2023 ರಲ್ಲಿ ವಜಾಗೊಳಿಸಲಾಯಿತು. ಈ ವರ್ಷದ ಜನವರಿಯಲ್ಲಿ, ಬಂಡುಕೋರ ಹೌತಿಗಳ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್‌ನ ಅಧ್ಯಕ್ಷ ಮಹ್ದಿ ಅಲ್-ಮಶಾತ್ ಅವರ ಮರಣದಂಡನೆಯನ್ನು ಅನುಮೋದಿಸಿದರು.

Kishor KV