ದೆಹಲಿಯಲ್ಲಿ ಯತ್ನಾಳ್ ಸೀಕ್ರೆಟ್ ಮೀಟಿಂಗ್.. ಪತ್ರದಿಂದ ಹೊರ ಬಿತ್ತಾ ಬಿವೈವಿ ಬಂಡವಾಳ? – ಯತ್ನಾಳ್ ಉಚ್ಚಾಟನೆಗೆ ಮುಹೂರ್ತ ಫಿಕ್ಸ್?

ದೆಹಲಿಯಲ್ಲಿ ಯತ್ನಾಳ್ ಸೀಕ್ರೆಟ್ ಮೀಟಿಂಗ್.. ಪತ್ರದಿಂದ ಹೊರ ಬಿತ್ತಾ ಬಿವೈವಿ ಬಂಡವಾಳ? – ಯತ್ನಾಳ್ ಉಚ್ಚಾಟನೆಗೆ ಮುಹೂರ್ತ ಫಿಕ್ಸ್?

ರಾಜ್ಯ ಬಿಜೆಪಿಯ ಬಣ ಬಡಿದಾಟ ಕ್ಲೈಮಾಕ್ಸ್ ಹಂತಕ್ಕೆ ಬಂದು ತಲುಪಿದಂತಿದೆ . ಯತ್ನಾಳ್ ಅಂಡ್ ಟೀಂ ದೆಹಲಿಯಲ್ಲಿ ಸೇರಿದ್ರೆ, ವಿಜಯೇಂದ್ರ ಟೀಂ ಕರ್ನಾಟಕಕ್ಕೆ ಬಂದ   ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ಗೆ ಯತ್ನಾಳ್ ಬಗ್ಗೆ ದೂರುಗಳನ್ನ ಹೇಳಿದ್ದಾರೆ. ಇಬ್ಬರ ಜಗಳದಲ್ಲಿ ಕಾಂಗ್ರೆಸ್ಗೆ ಪ್ಲೆಸ್ ಆಗುತ್ತಿದ್ದು, ಬಿಜೆಪಿ ಕಾರ್ಯಕರ್ತರ ಆತಂಕಕ್ಕೆ ಕಾರವಾಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಎಂಟ್ರಿಕೊಟ್ಟಿದ್ದು, ಕೊನೆ ಹಂತದಲ್ಲಿ ಸರ್ಕಸ್ ನಡೆಯುತ್ತಿದೆ. ಹಾಗಿದ್ರೆ ಯತ್ನಾಳ್ ಮತ್ತು ವಿಜಯೇಂದ್ರ ಒಂದಾಗ್ತಾರಾ?ಅಥವಾ ಯತ್ನಾಳ್ಗೆ ಪಕ್ಷದಿಂದ ಗೇಟ್ಪಾಸ್ ಸಿಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿಕ್ಯಾಪ್ಟನ್ ಗಳ ಕ್ಯಾಪ್ಟನ್ ಪಾಂಡ್ಯ.. MIನಲ್ಲಿ ಹಾರ್ದಿಕ್ ಹೇಳಿದ್ದೇ ಶಾಸನ – ರೋಹಿತ್, ಸೂರ್ಯ, ಬುಮ್ರಾ ಒಪ್ಪಿದ್ದೇಗೆ?

ಒಂದ್ಕಡೆ ಯತ್ನಾಳ್ ಬಣ, ಮತ್ತೊಂದ್ಕಡೆ ವಿಜಯೇಂದ್ರ ಬಣ.. ಇರಡು ಬಣದ ನಡುವೆ ಸಿಲುಕಿ ಕಮಲ ಕಾರ್ಯಕರ್ತ ನಲುಗಿ ಹೋಗುತ್ತಿದ್ದಾರೆ.. ಆದಷ್ಟು ಬೇಗ ಕರ್ನಾಟಕದ ಬಣ ರಾಜಕೀಯಕ್ಕೆ ಎಳ್ಳುನೀರು ಬಿಡಬೇಕು ಅಂತಾ ಹೈಕಮಾಂಡ್ ಸಕರ್ಸ್ ಮಾಡುತ್ತಿದೆ. ಈನಡುವೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಟೀಮ್ ಈಗಾಗಲೇ ದೆಹಲಿಯಲ್ಲಿ ಒಂದುಗೂಡಿದ್ದಾರೆ. ಬಿಜೆಪಿಯ ರಮೇಶ್ ಜಾರಕಿಹೊಳಿ, ಕುಮಾರ ಬಗಾರಪ್ಪ ಸೇರಿ ಹಲವರು ಸಭೆಯನ್ನು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಹಾಗೂ ರಾಜ್ಯ ರಾಜಕೀಯದ ಬಗ್ಗೆ ವಿವರಣೆ ನೀಡಲಿದೆ. ರಹಸ್ಯ ಸಭೆ ಮಾಡಿದ ಯತ್ನಾಳ್ ಎಂಡ್ ಟೀಮ್ ಹೈಕಮಾಂಡ್ ಮುಂದೆ ಯಾವೆಲ್ಲಾ ಅಂಶಗಳನ್ನು ಉಲ್ಲೇಖ ಮಾಡಬೇಕು. ಉಪ ಚುನಾವಣೆ ಸೋಲು ಹೇಗಾಯಿತು? ರಾಜ್ಯಾಧ್ಯಕ್ಷರ ಮತ್ತು ಇತರ ನಾಯಕರ ಒಡನಾಟ ಹೇಗಿದೆ ಎಂಬುವುದರ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಯತ್ನಾಳ್ ಬಗ್ಗೆ ಮಾಹಿತಿ ಪಡೆದ್ರಾ ತರುಣ್ ಚುಗ್?

ಬಿಜೆಪಿಯಲ್ಲಿಬಣ ಫೈಟ್ ತಾರಕಕ್ಕೇರಿರುವ ಹೊತ್ತಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್  ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ವಿಜಯೇಂದ್ರ ಬಣ ಅವರವನ್ನಆತ್ಮಿಯಾವಾಗಿ ಬರಮಾಡಿಕೊಂಡ್ರು. ಆದ್ರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬೆಂಗಳೂರಿಗೆ ಬಂದಿರುವುದು ಪಕ್ಷದ ಆಂತರಿಕ ಸಂಘರ್ಷದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಅಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಆದ್ರೆ ಸಭೆಯಲ್ಲಿ ಇದ್ದ ಶಾಸಕರು, ಮಾಜಿಗಳು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರುಗಳಿಂದ ಯತ್ನಾಳ್ ವಿರುದ್ಧ ಒಕ್ಕೊರಲ ಒತ್ತಾಯ ಮಾಡಿದ್ದಾರೆ. ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗ್ತಿದೆ. ಹೀಗಾಗಿ ಉತ್ನಾಳ್ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.ಬಣ ಬಡಿದಾಟದ ಬಗ್ಗೆ ಡಿಸೆಂಬರ್ 7 ರಂದು ಈ ಬಗ್ಗೆ ಸಮಗ್ರ ಚರ್ಚೆ ನಡೆಸಲು ತರುಣ್ ಸೂಚನೆ ನೀಡಿದ್ದಾರೆ.

ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟು

ರಾಜ್ಯ ಬಿಜೆಪಿ ಭಿನ್ನಮತ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಬಿಜೆಪಿ 39 ಸಂಘಟನಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸಡೆದಿದ್ದಾರೆ. ಯತ್ನಾಳ್ ವಿರುದ್ಧ ಕ್ರಮ ಆಗಬೇಕು ಅಂತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಗೆ ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕಾರ್ಯಕರ್ತರ ಪತ್ರ ವೈರಲ್

ಜೆಪಿಯ ಕೆಳ ಹಂತದ ಕಾರ್ಯಕರ್ತರು ಬರೆದಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಬರೆದಿದ್ದು ಎನ್ನಲಾದ ಪತ್ರದಲ್ಲಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಿಎಂ, ಡಿಸಿಎಂ ಜೊತೆ ಒಪ್ಪಂದದ ರಾಜಕೀಯ ಮಾಡಿಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸೋಲಲು ಕಾರಣವಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ವಿಜಯೇಂದ್ರ ವ್ಯಾಪಾರ ಹಿತಾಸಕ್ತಿ ಹೊಂದಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕರಾಗಿ ಆರ್ ಅಶೋಕ್ ವಿಫಲರಾಗಿದ್ದಾರೆ. ಕೂಡಲೇ ರಾಜ್ಯ ಬಿಜೆಪಿ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ರಾಜ್ಯ ಬಿಜೆಪಿಯ ಗಾಜಿನ ಮನೆಯಲ್ಲಿ ಆದ ಬಿರಕನ್ನ ಬಿಜೆಪಿ ಹೈ ಕಮಾಂಡ್ ಯಾವ ಗಮ್ ಹಾಕಿ ಅಂಟಿಸುತ್ತೆ ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *