ಯತ್ನಾಳ್ ಹಿಂದೂ ಬಲ Vs ಬಿ.ವೈ.ವಿಜಯೇಂದ್ರ – ಹಿಂದೂ ಪಕ್ಷ.. Only ಹಿಂದೂ ವೋಟ್

ಯತ್ನಾಳ್ ಹಿಂದೂ ಬಲ Vs ಬಿ.ವೈ.ವಿಜಯೇಂದ್ರ – ಹಿಂದೂ ಪಕ್ಷ.. Only ಹಿಂದೂ ವೋಟ್

ಹಿಂದೂ ಧ್ವನಿ ಎಂದೇ ಖ್ಯಾತರಾಗಿದ್ದ ಬಸನಗೌಡ ಪಾಟೀಲ ಯತ್ನಾಳ್‌, ತಮ್ಮ ನೇರ ನುಡಿ ಮತ್ತು ಸ್ವಪಕ್ಷೀಯರ ವಿರುದ್ಧವೇ ತಿರುಗಿ ನಿಂತಿದ್ದು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆಗಿತ್ತು.  6 ವರ್ಷ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಅಮಾನತುಗೊಂಡಿರುವ ಯತ್ನಾಳ್ ಮುಂದೆ ಏನ್ ಮಾಡ್ತಾರೆ? ಯಾವ ಪಕ್ಷಕ್ಕೆ ಹೋಗ್ತಾರೆ? ಬೇರೆ ಪಕ್ಷ ಕಟ್ಟುತ್ತಾರಾ ಅನ್ನೋ ಪ್ರಶ್ನೆಗಳು ಸಾಕಷ್ಟು ಜನಕ್ಕೆ ಕಾಡಿತ್ತು. ಆದ್ರೆ ಉಚ್ಛಾಟನೆ ನಂತ್ರ ಸ್ವಲ್ಪ  ದಿನ ಯಾವ ವಿಚಾರದ ಬಗ್ಗೆ ಕೂಡ ಮಾತನಾಡದೆ ಸೈಲೆಂಟ್ ಆಗಿದ್ದ ಯತ್ನಾಳ್ ಈಗ ಹೆಡೆ ಬಿಚ್ಚಿದ್ದಾರೆ. ಹೆಡೆ ಬಿಚ್ಚಿರೋ ಯತ್ನಾಳ್ ಬಿಜೆಪಿ ನಾಯಕರನ್ನ ಕಚ್ಚುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಇದನ್ನೂ ಓದಿ: ಹೂವಿನ ಬಾಣದ ಗಾಯಕಿ ಸೆಲೆಬ್ರಿಟಿ.. ವೈರಲ್‌ ಹುಡ್ಗಿ ಸಾಂಗ್‌ಗೆ ಸ್ಟಾರ್ಸ್‌ ರೀಲ್ಸ್‌ – ಎಲ್ಲೆಲ್ಲೂ ಮಂಡ್ಯ ಹುಡುಗಿ ಹವಾ!

ಕರ್ನಾಟಕದ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವ ಹೆಸರು ಬಸವನಗೌಡ ಪಾಟೀಲ ಯತ್ನಾಳ್. ಹಿಂದೂ ಫೈರ್ ಬ್ರ್ಯಾಂಡ್ , ಬಿಜೆಪಿ ಉಚ್ಛಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಹಿಂದಿನಿಂದಲೂ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ದ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪವನ್ನ ಮಾಡಿದ್ದರು. ಈ ಹಿಂದೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ದ ವಿರೋಧಿ ಬಣವನ್ನ ಕಟ್ಟಿಕೊಂಡಿದ್ದ ಯತ್ನಾಳ್‌ ವಿಜಯೇಂದ್ರ ಅವರ ವಿರುದ್ದ ಅಸಮಾಧಾನ ಹೊರ ಹಾಕಿದ್ರು. ಸ್ವಪಕ್ಷದವರ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಯತ್ನಾಳ್‌ ಅವರನ್ನ ಉಚ್ಚಾಟಿಸಿದೆ. ಇದೀಗ ಉಚ್ಚಾಟನೆ ಬಳಿಕ ಸೈಲೆಂಟ್‌ ಆಗಿದ್ದ ಯತ್ನಾಳ್‌ ಅವರು ತಮ್ಮ ಪಕ್ಷವನ್ನ ಘೋಷಣೆಯ ಜೊತೆಗೆ ನೇರವಾಗಿ ಬಿಜೆಪಿ ಹೈಕಮಾಂಡ್‌ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.  ಜನರ ಧ್ವನಿಯನ್ನು ನಿರ್ಲಕ್ಷಿಸಿದರೆ, ನಮ್ಮ ಕಾರ್ಯಕರ್ತರ ಹಿತಾಸಕ್ತಿಯನ್ನು ಕಡೆಗಣಿಸಿದರೆ, ನಾವು ಬಲವಾದ ಪರ್ಯಾಯವನ್ನು ನಿರ್ಮಿಸುತ್ತೇವೆ ಎಂದು ಅವರು ಸ್ಪಷ್ಟವಾಗಿ ಘೋಷಿಸಿದ್ದಾರೆ. ಇದರಿಂದ ಬಿಜೆಪಿ ನಾಯಕತ್ವಕ್ಕೆ ಒಂದು ರೀತಿಯಲ್ಲಿ ಯತ್ನಾಳ್‌  ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಯತ್ನಳ್ ಹೊಸ ಪಕ್ಷ ಕಟ್ಟುತ್ತಾರೆ. ಅದು ಸಂಪೂರ್ಣ ಹಿಂದೂ ಪಕ್ಷ ಆಗಿರುತ್ತೆ ಅನ್ನೋ ಪೋಸ್ಟ್‌ಗಳು ವೈರಲ್ ಆಗ್ತಿದೆ.

ಒಂದು ರೀತಿಯಲ್ಲಿ ಯತ್ನಾಳ್ ಅವರ ಹೊಸ ಪಕ್ಷದ ಚರ್ಚೆ ರಾಜ್ಯ ಬಿಜೆಪಿಯಲ್ಲಿ ನಿಜಕ್ಕೂ ಹೊಸ ಬಿರುರಾಳಿ ಎಬ್ಬಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯತ್ನಾಳ್ ಅವರಿಗಿದೆ ತುಂಬಾ ಜನಪ್ರಿಯತೆ ಇದೆ, ಹಿಂದೂ ಫೈರ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದ್ದಾರೆ. ಕೇವಲ ಇವರ ಶಕ್ತಿ ಉತ್ತರ ಕರ್ನಾಟಕಕ್ಕೆ ಮಾತ್ರ ಸುಮೀತವಾಗಿಲ್ಲ. ಕರ್ನಾಟಕದ ಎಲ್ಲಾ ಕಡೆ ಈಗ ಯತ್ನಾಳ್ ಕೂಗ ಕೇಳಿ ಬರ್ತಿದೆ. ಕಲ್ಲು ತೂರಾಟದ ಪ್ರಕರಣದ ನಂತ್ರ ಯತ್ನಾಳ್ ಮದ್ದೂರಿಗೆ ಹೋಗಿದ್ರು. ಬಿಜೆಪಿ ಟೀಂ ಹೋಗಿ ಬಂದ್ರ ನಂತ್ರಅಲ್ಲಿಗೆ ಹೋದ ಯತ್ನಾಳ್‌ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿದೆ. ಇದನ್ನ ನೋಡಿ ಕಾಂಗ್ರೆಸ್ ಜೆಡಿಎಸ್‌ಗಿಂತ ಬಿಜೆಪಿ ಹೆಚ್ಚು ಶಾಕ್ ಆಗುವಂತೆ ಮಾಡಿದೆ. Vis Flow..

ಹಾಗೇ ಮದ್ದೂರಿನಲ್ಲಿ ಯತ್ನಾಳ್ ಹೋಗುವ ಮೊದಲ ದಿನ ಸಿಟಿ ರವಿ ಮಾತನಾಡುತ್ತಾ ಯತ್ನಾಳ್ ಯತ್ನಾಳ್ ಅಂತ ಹಿಂದೂ ಕಾರ್ಯಕರ್ತರು ಕೂಗುತ್ತಿದ್ದರು. ಹೀಗೆ ಯತ್ನಾಳ್‌ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ. ಹೊಸ ಪಕ್ಷ ಕಟ್ಟಿ ನಾವು ಬೆಂಬಲ ಕೊಡ್ತಿವಿ ಅಂತ ಹಿಂದೂ ಕಾರ್ಯಕರ್ತರು ಹೇಳುತ್ತಿದ್ದಾರೆ. ಒಂದು ಯತ್ನಾಳ್ ಹೊಸ ಪಕ್ಷ ಕಟ್ಟಿದ್ರೆ 2028 ರ ಎಲೆಕ್ಷನ್‌ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಹೊಸ ಪಕ್ಷದ ಘೋಷಣೆಯನ್ನ ಯತ್ನಾಳ್ ಮಾಡಿಲ್ಲ. ಆದ್ರೆ ಬಿಜೆಪಿ ಹೀಗೆ ಕಡೆಕಣಿಸಿದ್ರೆ ಹೊಸ ಪಕ್ಷದ ಹಿಂಟ್ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ನಾವೆಲ್ಲಾ ಹಿಂದೂಗಳ ಪರ ಮಾತಾಡುತ್ತೇವೆ. ನಾವು ಪ್ರತಾಪ್ ಸಿಂಹ ಒಂದಾಗಿ ಹೊಸ ಸರ್ಕಾರ ತರುತ್ತೇವೆ. ಬಿಜೆಪಿಯವರು ನನ್ನ ಗೌರವಯುತವಾಗಿ ತೆಗೆದುಕೊಳ್ಳದಿದ್ರೆ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.  ಈ ಮೂಲಕ   ಮೂಲಕ ರಾಜಕೀಯ ವಲಯದಲ್ಲಿ ಯತ್ನಾಳ್ Vs BJP ಎಂಬ ಹೊಸ ಅಖಾಡ ಆರಂಭವಾಗಿದೆ. ಇಬ್ಬರ ಮಧ್ಯೆ ನಡೆಯಲಿರುವ ರಾಜಕೀಯ ಹೋರಾಟ ರಾಜ್ಯದ ಜನತೆಗೆ ಹೊಸ ಕುತೂಹಲ ತಂದುಕೊಟ್ಟಿದೆ.

ಹಿಂದೂ ಪಾರ್ಟಿ,   ಹಿಂದೂ ವೋಟ್  

ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಹಿಂದೂ ಕಾರ್ಯಕರ್ತರು ಕೂಡ ಧ್ವನಿಗೂಡಿಸಿದ್ದಾರೆ. ಹೌದು ಸರ್, ಹಿಂದೂ ಹುಲಿ ಎನ್ನುವ ಹಿನ್ನಲೆಯನ್ನು ನೀಡಿದ್ದಾರೆ. ಜನರ ಪ್ರತಿಕ್ರಿಯೆಯಿಂದ ಖುಷಿಗೊಂಡ ಯತ್ನಾಳ್, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಅಲ್ಲದೇ ಬಿಜೆಪಿಗೆ ಒಂದು ಖಡಕ್ ಸಂದೇಶವನ್ನ ನೀಡುತ್ತಿದ್ದಾರೆ. ಬಿ ಹಿಂದೂಗಳಿಗೆ ಧ್ವನಿಯಾಗಿ ಪ್ರತ್ಯೇಕ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಅದರ ಚಿಹ್ನೆ ಜೆಸಿಬಿ/ಬುಲ್ಡೋಜರ್ ಇರಲಿದೆ ಎಂದು ಹೇಳಿದ್ದಾರೆ. ಆ ಮೂಲಕ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಆಡಳಿತ ಶೈಲಿಯನ್ನು ಅನುಕರಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ JCB ಪಕ್ಷ ಅನ್ನೋ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಇನ್ನೊಂದು ವಿಷ್ಯ ಅಂದ್ರ ಯತ್ನಾಳ್ ಪಕ್ಷ ಸಂಪೂರ್ಣ ಹಿಂದೂ ಪಕ್ಷ ಆಗಿರಲಿದೆಯ ಯಾಕಂದ್ರೆ ಯತ್ನಾಳ್ ಸಾಕಷ್ಟು ಸಲ ನೇರವಾಗಿ ಹೇಳಿರೋ ಮಾತೇನು ಅಂದ್ರೆ ನನಗೆ ಮುಸ್ಮಿಂ ವೋಟ್‌ಗಳೇ ಬೇಡ ಹಿಂದೂಗಳ ವೋಟ್ ಸಾಕು ಅನ್ನೋದು ಹೀಗಾಗಿ ಯತ್ನಾಳ್‌ಗೆ ಹಿಂದೂ ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡಿದ್ರೆ, ಕೆಲ ಜಿಲ್ಲೆಗಳ ಬಿಜೆಪಿ ನಾಯಕರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದ್ದನ್ನ ನೋಡಿ ಬಿಜೆಪಿ ಪಾಳಯದಲ್ಲಿ ನಡುಕ ಶುರುವಾಗಿದ್ದು, ಅಪ್ಪಿತಪ್ಪಿ ಯತ್ನಾಳ್ ಹೊಸ ಪಕ್ಷ ಕಟ್ಟಿದ್ರೆ ವೋಟ್‌ಗಳು ಚಿದ್ರವಾಗಿ ವಾಗಿ ಮತ್ತೆ ಕಾಂಗ್ರೆಸ್‌ಗೆ ಅವಕಾಶ ಸಿಗೋ ಚಾನ್ಸ್ ತುಂಬಾ ಇದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಯತ್ನಾಳ್ ವಿಷ್ಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ಕುತೂಹಲ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ.

 

Kishor KV