MI ಬತ್ತಳಿಕೆಯಲ್ಲಿ ಯಂಗ್ ಗನ್- ಎಂಟ್ರಿಯಲ್ಲೇ 4 ವಿಕೆಟ್ ಉಡೀಸ್
ಭುವಿ, ಬುಮ್ರಾಗಿಂತ ಅಶ್ವನಿ ಬೆಸ್ಟ್

MI ಬತ್ತಳಿಕೆಯಲ್ಲಿ ಯಂಗ್ ಗನ್-  ಎಂಟ್ರಿಯಲ್ಲೇ 4 ವಿಕೆಟ್ ಉಡೀಸ್ಭುವಿ, ಬುಮ್ರಾಗಿಂತ ಅಶ್ವನಿ ಬೆಸ್ಟ್

ಐಪಿಎಲ್‌ನಲ್ಲಿ ಸ್ಟ್ರಾಂಗ್ ಟೀಂ ಎನಿಸಿಕೊಂಡಿದ್ದ ಮುಂಬೈ ಈ ಸೀಸನ್‌ ಮೊದಲ ಎರಡು ಪಂದ್ಯವನ್ನ ಹೀನಾಯವಾಗಿ ಸೋತಿತ್ತು. 3ನೇ ಪಂದ್ಯ ಏನ್ ಆಗುತ್ತೆ ಅನ್ನೋ ಭಯ MI ಪ್ರಾಂಚೈಸಿಗೆ ಕಾಡುತಿತ್ತು. ಆದ್ರೆ ಕೆಕೆಆರ್‌ ವಿರುದ್ಧ ಜಯಬೇರಿ ಬಾರಿಸಿದೆ.. ಇದ್ದಕ್ಕೆ ಕಾರಣ ಹೊಸ ಹೀರೋ..ಅವನೇ ಅಶ್ವನಿ ಕುಮಾರ್..

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪರ ಮೊದಲ ಪಂದ್ಯವನ್ನಾಡುವ ಅವಕಾಶ ಪಡೆದ ಅಶ್ವನಿ ಕುಮಾರ್, ತಾವು ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ದಾಖಲೆ ನಿರ್ಮಿಸಿದ್ದಾರೆ ಅಶ್ವನಿ ಕುಮಾರ್ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡಿದರು. ಈ ವಿಕೆಟ್‌ನೊಂದಿಗೆ, ಅವರು ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ MIನ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು.

 ಯಾರು ಹೊಸ ಹೀರೋ ಅಶ್ವನಿ ಕುಮಾರ್?

2025 ರ ಮೆಗಾ ಹರಾಜಿನಲ್ಲಿ ಅಶ್ವನಿ ಕುಮಾರ್ ಅವರನ್ನು ಮುಂಬೈ ಇಂಡಿಯನ್ಸ್ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಿತು. ಡೆತ್ ಓವರ್‌ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಅಶ್ವನಿ, 2022 ರಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಪಾದಾರ್ಪಣೆ ಮಾಡಿದರು. ಇದುವರೆಗೆ 4 ಟಿ20 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಅಶ್ವನಿ ಪಂಜಾಬ್ ಪರ 2 ಪ್ರಥಮ ದರ್ಜೆ ಮತ್ತು 4 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.

ಅಶ್ವನಿ ಕುಮಾರ್ 29 ಆಗಸ್ಟ್ 2001 ರಂದು ಮೊಹಾಲಿಯ ಸಣ್ಣ ಹಳ್ಳಿಯಾದ ಝಂಝೇರಿಯಲ್ಲಿ ಜನಿಸಿದರು. ಇವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರಾಗಿದ್ದು, ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಆಡಲು ಆರಂಭಿಸಿದರು.  ಅಶ್ವನಿ ಕುಮಾರ್ ಪಂಜಾಬ್ ಮೂಲದವರಾಗಿದ್ದು, ಅಪಾಯಕಾರಿ ಬೌನ್ಸರ್‌ ಎಸೆತಗಳನ್ನು ಹಾಕುವುದಕ್ಕೆ ಹೆಸರುವಾಸಿಯಾಗಿದ್ದಾರೆ. ವಿಭಿನ್ನ ಎಸೆತಗಳನ್ನು ಹಾಕುವ ಅಶ್ವನಿ ನಿಖರವಾಗಿ ವೈಡ್ ಯಾರ್ಕರ್ ಅನ್ನು ಎಸೆಯಬಲ್ಲರು. 2024 ರಲ್ಲಿ ಶೇರ್ ಇ ಪಂಜಾಬ್ ಟಿ20 ಟ್ರೋಫಿಯಲ್ಲಿ ಅಶ್ವನಿ ತಮ್ಮ ಡೆತ್ ಬೌಲಿಂಗ್ ಪ್ರದರ್ಶನದ ಮೂಲಕ ಮುಂಬೈ ಇಂಡಿಯನ್ಸ್  ಸ್ಕೌಟ್ಸ್‌ ಗಳ ಗಮನ ಸೆಳೆದಿದ್ದರು. ಅಶ್ವನಿ ಕುಮಾರ್ ಅವರ ವಿಶೇಷತೆಯೆಂದರೆ ಅವರ ವಿಭಿನ್ನ ಶೈಲಿಯ ಬೌಲಿಂಗ್. ವೇಗ ಬದಲಾವಣೆಯ ಹೊರತಾಗಿ, ಈ ಆಟಗಾರ ಬೌನ್ಸರ್‌ಗಳು ಮತ್ತು ಯಾರ್ಕರ್‌ಗಳನ್ನು ಎಸೆಯುವುದರಲ್ಲಿಯೂ ಪರಿಣಿತರು. ಇದಲ್ಲದೆ, ಅವರು ಕೆಳ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಸಹ ಆಡಬಲ್ಲರು. ಈ ಆಟಗಾರ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಹೆಸರುವಾಸಿ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಈ ಆಟಗಾರನ ಖರೀದಿಸುವ ಮನಸು ಮಾಡಿತ್ತು.

Kishor KV

Leave a Reply

Your email address will not be published. Required fields are marked *