ಯತ್ನಾಳ್ ಮತ್ತೆ ಬಿಜೆಪಿಗೆ? – ಹೇಗಿದೆ ಹಿಂದೂ ಹುಲಿ ಗೇಮ್?
ವಿಜಯೇಂದ್ರ ಸುಮ್ಮನಿರುತ್ತಾರಾ??

ಯತ್ನಾಳ್  ಮತ್ತೆ ಬಿಜೆಪಿಗೆ? – ಹೇಗಿದೆ ಹಿಂದೂ ಹುಲಿ ಗೇಮ್?ವಿಜಯೇಂದ್ರ ಸುಮ್ಮನಿರುತ್ತಾರಾ??

ಕರ್ನಾಟಕ ವಿಧಾನಸಭಾ ಎಲೆಕ್ಷನ್ ಆದ್ರೂ ಮೇಲೆ  ಕರ್ನಾಟಕ ಬಿಜೆಪಿಯ ಬಣ ರಾಜಕೀಯ ಹೆಚ್ಚುತ್ತಲೇ ಇದೆ. ಸಿದ್ದರಾಮಯ್ಯ ಸರ್ಕಾರದ ವಿರುದ್ದ ಧ್ವನಿ ಎತ್ತೋಕೆ  ಗೋಲ್ಡನ್ ಚಾನ್ಸ್ ಇದ್ರೂ ತಮ್ಮ ಪಕ್ಷದಲ್ಲಿರೋ ಒಡಕಿನಿಂದ ಸೈಲೆಂಟ್ ಆಗಿದ್ದಾರೆ. ಯತ್ನಾಳ್ ನಡೆ ಕೂಡ ರಾಜ್ಯ ಬಿಜೆಪಿಯನ್ನ ಮಂಕು ಮಾಡಿದೆ ಅನ್ನೋದ್ದನ್ನ ಹೇಳಬುಹುದು. ಬಿಜೆಪಿಯಿಂದ ಉಚ್ಟಾಟನೆ ಆಗಿರೋ ಯತ್ನಾಳ್‌ ಹೊಸ ಪಕ್ಷ ಕೊಟ್ಟಿ, ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸ್ತಿನಿ ಅಂತ ಹೇಳ್ತಾ ಇದ್ದಾರೆ.  ಹೊಸ ಪಕ್ಷ ಕಟ್ಟುವ ಮಾತು ಕೇವಲ ಬಿಜೆಪಿ ನಾಯಕರನ್ನ ಹಾಗೂ ಹೈಕಮಾಂಡ್‌ನ ಹೆದರಿಸುವುದ್ದಕ್ಕೆ ಮಾಡ್ತಾ ಇರೋ ಪ್ಲ್ಯಾನ್ ಅಷ್ಟೇ ಅನ್ನೋದು  ಯತ್ನಾಳ್ ನಡೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಗೊತ್ತಾಗುತ್ತೆ.

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ  ಬೇರೆ ಯಾರೋ ಅಂದ್ರೆ ಪಕ್ಷದಲ್ಲೇ ಯಾರೋ ಮೋಸ ಮಾಡಿದ್ರು ಅನ್ನೋದ್ದಕ್ಕಿಂತ. ಇವರಿಗೆ ಇವರೇ ಮೋಸ ಮಾಡಿಕೊಂಡ್ರು ಅಂತನೇ ಹೇಳಬಹುದು.. ಯತ್ನಾಳ್‌ಗೆ ದೊಡ್ಡ ಶತ್ರು ಯಾರಾದ್ರೂ ಇದ್ದಾರೆ ಅಂದ್ರೆ ಅದು ಅವರ ಬಾಯಿ ಮತ್ತು ನಾಲಿಗೆ.. ಒಂದು ವೇಳೆ ಯತ್ನಾಳ್ ತಮ್ಮ ನಾಲಿಗೆಯನ್ನ ಹಿಡಿತದಲ್ಲಿ ಇಟ್ಕೊಂಡು ಮಾತಾಡಿದ್ರೆ. ಅಂದ್ರೆ ಬಾಯಿಗೆ ಬಂದಂತೆ ಮಾತಾನಾಡುವುದ್ದನ್ನ ಬಿಟ್ಟು ಏನ್ ಬೇಕೋ ಅದ್ದನ್ನ ಮಾತ್ರ ಮಾತನಾಡಿದ್ರೆ. ಯತ್ನಾಳ್ ಬಿಜೆಪಿಯ ನಂ1 ಲೀಡರ್ ಆಗಿ ಇರುತ್ತಿದ್ದರು.  ಇವತ್ತು ವಿರೋಧ ಪಕ್ಷದ ನಾಯಕನೋ .. ಅಥವಾ ರಾಜ್ಯಾಧ್ಯಕ್ಷರೇ ಆಗಿ ಇರುತ್ತಿದ್ದರೋ ಏನೋ.. ಆದ್ರೆ ಹಿಂದೂ ಹುಲಿ ಎಂದು ಗುರುತಿಸಿಕೊಂಡಿರೋ ಯತ್ನಾಳ್‌ಗೆ ತಾವು ಆಡುವ ಮಾತೇ ಮುಳ್ಳಾಗಿ ಹೋಗಿದೆ ಅಂದ್ರೆ ತಪ್ಪಿಲ್ಲ. ಈಗ ಕೂಡ ಯತ್ನಾಳ್ ಯಾವ ದಾರಿ ಹಿಡಿತಾರೆ ಅನ್ನೋ ಗೊಂದಲ ಬಿಜೆಪಿ ಜೊತೆ ರಾಜ್ಯದ ಜನರಿಗೆ ಕೂಡ ಆಗಿದೆ.

ಇದನ್ನೂ ಓದಿ: ನ್ಯಾನೋ ಬನಾನಾ ಟ್ರೆಂಡ್ ಡೇಂಜರ್.. ಬಯೋಡೇಟಾ ಲೀಕ್.. ಅಕೌಂಟ್‌ ಖಾಲಿ! – ಯುವತಿ ಮಚ್ಚೆ ಗುಟ್ಟು ರಟ್ಟಾಗಿದ್ದು ಹೇಗೆ?

2028ರ ಸಿಎಂ ನಾನೇ ಅನ್ನೋದ್ದನ್ನ ಹೇಳಿದ್ದಾರೆ. ಅದು ಬಿಜೆಪಿಯಿಂದಲೇ ಅನ್ನೋದ್ದನ್ನ ಕೂಡ.. ನೋಡಿ ನಾವು ಮಾತನ್ನ ಅರ್ಥ ಮಾಡಿಕೊಂಡ್ರೆ ಯತ್ನಾಳ್ ಯಾವ ಪಕ್ಷವನ್ನ ಕೂಡ ಕಟ್ಟಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ.. ಯಾಕಂದ್ರೆ ಯತ್ನಾಳ್‌ಗೂ ಕೂಡ ಗೊತ್ತಿದೆ. ತನಗೆ ಬಿಜೆಪಿ ಬಿಟ್ಟು ಬೇರೆ ದಾರಿ ಇಲ್ಲ ಅನ್ನೋದು. ಯಾಕಂದ್ರೆ ಹೊಸ ಪಕ್ಷ ಕಟ್ಟಿ ಸಕ್ಸಸ್ ಆಗೋದು ಅಷ್ಟು ಸುಲಭ ಅಲ್ಲ ಅನ್ನೋದು ಕೂಡ ಯತ್ನಾಳ್‌ ಗೊತ್ತಿದೆ. ಗ್ರೌಂಡ್ ರಿಯಾಲಿಟಿ ಏನು ಅನ್ನೋದು ಚೆನ್ನಾಗಿ ಗೊತ್ತು.  ಬಾಯಿ ಮಾತಿಗೆ ನಾನು ಹೊಸ ಪಕ್ಷ ಕಟ್ಟುತ್ತೇನೆ.. ನಾನು ಹಿಂದೂ ಪಕ್ಷ ಕಟ್ಟತ್ತಿನಿ ಅಂತ ಹೇಳೋಕ ಬಹುದು ಅಷ್ಟೇ.. ಇದು ಬಾಯಲ್ಲಿ ಹೇಳಿದಷ್ಟು ಸುಲಭ ಕೂಡ ಅಲ್ಲ.. ಯಾಕಂದ್ರೆ ಈ ಹಿಂದೆ ಯಾರೆಲ್ಲಾ ಹೊಸ ಪಕ್ಷ ಕಟ್ಟಿ ಏನೆಲ್ಲಾ ಆದ್ರೂ ಅನ್ನೋದು ಕೂಡ ಗೊತ್ತಿದೆ. ಬಿಎಸ್‌ವೈ, ಶ್ರೀರಾಮಲು ಕೂಡ ಹೊಸ ಪಕ್ಷ ಕಟ್ಟಿ ಒಂದು ಎಲೆಕ್ಷನ್ ಮಾತ್ರ ಸ್ಪರ್ಧೆ ಮಾಡಿ ಆಮೇಲೆ ಬಿಜೆಪಿಗೆ ಹೋದ್ರು. ಹೀಗಾಗಿ ಹೊಸ ಪಕ್ಷ ಅಷ್ಟು ಸುಲಭ ಅಲ್ಲ. ಬಟ್ ತಾನು ಹೊಸ ಪಕ್ಷ ಕಟ್ಟುತ್ತೇನೆ ಅಂದಾಗ ಹೇಗೆ ರಿಯಾಕ್ಷನ್ ಬರ್ತಿದೆ, ತಮ್ಮ ಬೆಂಬಲಿಗರು ಹಾಗೂ ತಮಗೆ ಪರೋಕ್ಷವಾಗಿ ಸಪೋರ್ಟ್ ಮಾಡ್ತಾ ಇರೋರು ಹಾಗೇ ತಮ್ಮ ವಿರೋಧಿಗಳು ಹೇಗೆ ಇದ್ದನ್ನ ತೆಗೆದುಕೊಳ್ಳುತ್ತಿದ್ದಾರೆ ಅನ್ನೋದ್ದನ್ನ ಯತ್ನಾಳ್ ಗಮನಿಸುತ್ತಿದ್ದಾರೆ. ಇನ್ನೊಂದು ವಿಷ್ಯ ಏನಪ್ಪ ಅಂದ್ರೆ     ಯತ್ನಾಳ್ ಬೆಂಬಲಕ್ಕೆ ಬಿಜೆಪಿಯಲ್ಲಿ ಒಂದು ಬಣ ಇದೆ. ಈ ಬಣದಲ್ಲಿ ರಮೇಶ್ ಜಾರಕಿಹೊಳಿ, ಬಿ ಪಿ ಹರೀಶ್, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿದಂತೆ ಕೆಲವು ನಾಯಕರು ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಮತ್ತೆ ಕೆಲವರು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.

ಇದನ್ನೂ ಓದಿ: ಬಿ.ಸರೋಜಾದೇವಿ ಹೆಸರಿನಲ್ಲಿ ಅಭಿನಯ ಸರಸ್ವತಿ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ!  

ಅಷ್ಟೇ ಅಲ್ಲದೆ ಹೈಕಮಾಂಡ್ ನಾಯಕರಲ್ಲೂ ಒಂದು ಬಣ ಯತ್ನಾಳ್ ಗೆ ಪರೋಕ್ಷ ಬೆಂಬಲ ನೀಡುತ್ತಿದೆ ಅನ್ನೋ ಮಾತು ಕೇಳಿ ಬರ್ತಾ ಇತ್ತು.  ಬಟ್ ಯತ್ನಾಳ್ ಹೊಸ ಪಕ್ಷ ಕಟ್ಟುತ್ತೇನೆ ಅಂತ ಹೊರಟ್ರೆ  ಇವರೆಲ್ಲಾ ಬೆಂಬಲ ಕೊಡ್ತಾರೆ ಅಂತ ಹೇಳುವುದ್ದಕ್ಕೆ ಆಗಲ್ಲ. ರಮೇಶ್ ಜಾರಕಿಹೊಳಿ ಬೆಳಗಾವಿಯ ಪವರ್ ಫುಲ್ ಲೀಡರ್ ಆದ್ರೂ ತಾನು ಯತ್ನಾಳ್ ಜೊತೆ ಹೋಗ್ತಿನಿ ಅಂತ ಎಲ್ಲೋ ಹೇಳಿಲ್ಲ.. ಹಾಗೇ ವಿಜಯಪುರನಗರ ಕ್ಷೇತ್ರದಲ್ಲೂ ಕೂಡ ಯತ್ನಾಳ್ ಹೊಸ ಪಕ್ಷ ಕಟ್ಟಿ ಗೆಲ್ಲುವುದು ಸುಲಭ ಅಲ್ಲ. ಯಾಕಂದ್ರೆ 2023 ರಿಸಲ್ಟ್ ನೋಡಿದ್ರೆ ಗೊತ್ತಾಗುತ್ತೆ. ವಿಜಯಪುರನಗರ ಕ್ಷೇತ್ರದ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ಯತ್ನಾಳ್ ಗೆದ್ದಿದ್ದು ಕೇವಲ 8,237 ವೋಟ್‌ಗಳಿಂದ. ಕಾಂಗ್ರೆಸ್ ಅಭ್ಯರ್ಥಿಗೆ 85978 ವೋಟ್ ಬಿದ್ರೆ, ಯತ್ನಾಳ್‌ಗೆ 94211 ಮತಗಳು ಬಿದ್ದಿವೆ. ಅಂದ್ರೆ ಇಲ್ಲಿ ಹೆಚ್ಚು ಮತಗಳಿಂದ ಯತ್ನಾಳ್ ಗೆದ್ದಿಲ್ಲ. 2018 ರಲ್ಲೂ ಕೂಡ ಬಸವನಗೌಡ ಪಾಟೀಲ್ ಯತ್ನಾಳ್ ಗೆದ್ದಿದ್ದು 6413 ಮತಗಳಿಂದ. ಅಂದ್ರೆ ಹೆಚ್ಚು ಅಂತರ ಇಲ್ಲಿ ಇಲ್ಲ. ಹೀಗಾಗಿ ಹೊಸ ಪಕ್ಷ ಕಟ್ಟಿದ್ರೆ ಬಿಜೆಪಿ ತನ್ನ ಅಭ್ಯರ್ಥಿ ಹೊಸಯನ್ನ ಕಣಕ್ಕೆ ಇಳಿಸುತ್ತೆ. ಬಿಜೆಪಿ ಮತ ಅಂದ್ರೆ ಇಷ್ಟು ಟೈಂ ಯತ್ನಾಳ್‌ಗೆ ಬೀಳುತ್ತಿದ್ದ ವೋಟ್ ಬಿಜೆಪಿಗೆ ಹೋದ್ರೆ .. 10 ಸಾವಿರ ವೋಟ್ ಬಿಜೆಪಿಗೆ ಹೋದ್ರೆ ಯತ್ನಾಳ್‌ ಜೊತೆಬಿಜೆಪಿಗೆ ಸೋಲು ಆಗುತ್ತೆ.. ಕಾಂಗ್ರೆಸ್ ಗೆ ಪ್ಲೇಸ್ ಆಗುತ್ತೆ. ಇದು ಯತ್ನಾಳ್‌ಗೆ ಗೊತ್ತಿರೋ ಸತ್ಯ. ಹೀಗಾಗಿ ಯತ್ನಾಳ್ ಹೊಸ ಪಕ್ಷ ಕೊಟ್ಟೋ ಚಾನ್ಸ್ 100ಕ್ಕೆ 99 ಪರ್ಸೆಂಟ್ ಇಲ್ಲ. ಬಟ್ ಯಾಕೆ ಹೊಸ ಪಕ್ಷ ಹಿಂದೂ ಪಕ್ಷ ಅಂತ ಹೇಳಿಕೆ ನೀಡುತ್ತಿದ್ದಾರೆ ಅಂದ್ರೆ, ಇವತ್ತಲ್ಲ ನಾಳೆ ಮತ್ತೆ ಬಿಜೆಪಿ ತನ್ನನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಹುದು ಅಂತ. ಯಾಕಂದ್ರೆ ಯತ್ನಾಳ್ ಹಿಂದೂ ನಾಯಕ ಅಂತ ಗುರುತಿಸಿಕೊಂಡವರು, ಹಿಂದುತ್ವದ ಪ್ರಬಲ ಪ್ರತಿಪಾದಿಸುವ ನಾಯಕ.. ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ   ಪಂಚಮ ಸಾಲಿ ಲಿಂಗಾಯತರ ಪ್ರಭಾವಿ ನಾಯಕ. ಪಂಚಮ ಸಾಲಿ ಮತಗಳು 2028 ರಲ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲ್ಲಬೇಕು ಅಂದ್ರೆ ಬಹಳ ಮುಖ್ಯ.

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಿಜೆಪಿ ಯತ್ನಾಳ್‌ರನ್ನ  ಬಿಟ್ಟು ಕೊಡಲ್ಲ. ಹೀಗಾಗಿ ಯತ್ನಾಳ್‌ರನ್ನ ಎಲೆಕ್ಷನ್ ಹತ್ತಿರ ಬಂದಾಗ ಬಿಜೆಪಿಗೆ ಕರೆಸಿಕೊಳ್ಳಬಹುದು. ಈಗ ಉಚ್ಛಾಟನೆ ಮಾಡಿದ್ರೂ ಕೂಡ ಮುಂದೆ ಕರೆಸಿಕೊಳ್ಳಬಹುದು. ಹಾಗಂತ ಯತ್ನಾಳ್ ಅವರ ಕಂಡಿಷನ್‌ಗೆ ಬಿಜೆಪಿ ಒಪ್ಪಿಕೊಳ್ಳುವುದು ಕಷ್ಟಯ ವಿಜಯೇಂದ್ರ ನಾಯಕತ್ವದಲ್ಲಿ ನಾನು ಪಕ್ಷಕ್ಕೆ ಬರಲ್ಲ ಅನ್ನೋ ಕಂಡಿಷನ್ ಮುಂದೆ ಬದಲಾಗಬಹುದು. ಹೈಕಮಾಂಡ್ ಮಾತನಾಡಿದಾಗ ಎಲ್ಲದ್ದಕ್ಕೂ ಒಪ್ಪಿಕೊಂಡು ಯತ್ನಾಳ್ ಬಿಜೆಪಿಗೆ ಹೋಗುತ್ತಾರೆ. ಆಗ ಯತ್ನಾಳ್ ನಾನು ಮೋದಿ ನಾಯಕತ್ವಕ್ಕಾಗಿ, ಅಮಿತ್ ಶಾ ನಾಯಕತ್ವಕ್ಕೆ ಎಲ್ಲವನ್ನೂ ಸಹಿಸಿಕೊಂಡು ಪಕ್ಷಕ್ಕಾಗಿ ದುಡಿಯುತ್ತೇನೆ ಅಂತ ಯತ್ನಾಳ್ ಹೇಳಬಹುದು. ಹಾಗಂತ ಯತ್ನಾಳ್ ಬಿಜೆಪಿಗೆ ವಾಪಸ್ ಹೋದ್ರೆ ಯಡಿಯೂರಪ್ಪ ಟೀಂಗೆ ಖುಷಿ ಕೊಡಲ್ಲ. ಯಾಕಂದ್ರೆ ಯತ್ನಾಳ್ ಬಾಯಿ ಮೊದ್ಲೇ ಸರಿ ಇಲ್ಲ. ಇವತ್ತಲ್ಲ ನಾಳೆ ಬಿಎಸ್‌ವೈ ಟೀಂ ವಿರುದ್ಧ ಯತ್ನಾಳ್ ಮಾತು ಆಡೇ ಆಡ್ತಾರೆ. ಇದು ಹೈ ಕಮಾಂಡ್ ದೊಡ್ಡ ತಲೆ ನೋವು ಆಗಬಹುದು. ಆದ್ರೂ ಸಹ 2028 ರ ಎಲೆಕ್ಷನ್ ಗೆಲ್ಲಬೇಕು, ಬಿಜೆಪಿ ಸರ್ಕಾರ ರಚಿಸಬೇಕಾದ್ರೆ ಯತ್ನಾಳ್‌ರಂತಹ ಸಿದ್ಧ ನಾಯಕ ಬೇಕು. ಸಾಬೀತು ಪಡಿಸಿರೋ ನಾಯಕ, ಪಕ್ಷಕ್ಕಾಗಿ ದುಡಿದ ನಾಯಕ ಬಿಜೆಪಿಗೆ ಮುಖ್ಯ. ಹೀಗಾಗಿ ಯತ್ನಾಳ್ ಬಿಜೆಪಿಗೆ ಯಾವಾಗ ರಿಟರ್ನ್ ಬರ್ತಾರೆ? ಯಾವಾಗ ಉಚ್ಚಾಟನೆ ವಾಪಸ್ ಪಡೆಯುತ್ತಾರೆ? ಯಾವಾಗ ಹೈ ಕಮಾಂಟ್ ಮಧ್ಯ ಪ್ರವೇಶ ಮಾಡುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

Kishor KV