ಟಾಕ್ಸಿಕ್‌ಗಾಗಿ ರಾಕಿ ಭಾಯ್ ಹೊಸ ಅವತಾರ! – ಗಡ್ಡ, ಮೀಸೆಗೆ ಕತ್ತರಿ.. ಯಶ್ ಈಗ ಸಖತ್ ಯಂಗ್

ಟಾಕ್ಸಿಕ್.. ಕನ್ನಡದ ಬಹುನಿರೀಕ್ಷಿತ ಸಿನಿಮಾ. ಇದೇ ಮಾರ್ಚ್ 19ಕ್ಕೆ ರಾಕಿ ಭಾಯ್ ಸಿನಿಮಾ ರಿಲೀಸ್‌ಗೆ ಸಿದ್ದವಾಗಿದೆ. ಇದೀಗ ಯಶ್ ಹೊಸ ಗೆಟಪ್ ಗಮನ ಸೆಳೆದಿದೆ. ಟಾಕ್ಸಿಕ್‌ನಲ್ಲಿ ಯಶ್ ಹೊಸ ಅವತಾರ ತಾಳಿದ್ದಾರೆ. ಯಶ್ ಅವರ ಈ ಹೊಸ ಲುಕ್‌ನ ಮೇಕಿಂಗ್ ವಿಡಿಯೋ ಇದೀಗ ರಿಲೀಸ್ ಆಗಿದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸದೆ ಯುವತಿಯರ ಜಾಲಿ ರೈಡ್! – ಯಮರೂಪಿ ಹಂಪ್ಸ್‌ಗೆ ಕಾಲೇಜು ವಿದ್ಯಾರ್ಥಿನಿ ಬಲಿ!
ಕೆಜಿಎಫ್ ಸಿನಿಮಾ ಬಳಿಕ ಯಶ್ ತೆರೆಮೇಲೆ ಕಾಣಿಸಿಕೊಂಡಿಲ್ಲ. ಇದೀಗ ಟಾಕ್ಸಿಕ್ ಮೂಲಕ ತೆರಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಸಿನಿಮಾಗಾಗಿ ರಾಕಿ ಭಾಯ್ ಹೊಸ ಅವತಾರ ತಾಳಿದ್ದು, ಯಶ್ ಲುಕ್‌ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಹೌದು, ಕೆಜಿಎಫ್ ಸಿನಿಮಾ ಶುರುವಾದಾಗಿನಿಂದಲೂ ಯಶ್ ಅವರನ್ನು ನಾವು ಉದ್ದನೆಯ ಗಡ್ಡ ಮತ್ತು ಮೀಸೆಯಲ್ಲೇ ನೋಡಿದ್ದೆವು. ಅಭಿಮಾನಿಗಳು ಕೂಡ ಆ ರಗಡ್ ಲುಕ್‌ಗೆ ಫಿದಾ ಆಗಿದ್ದರು. ಈಗ ‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ತಮ್ಮ ಉದ್ದನೆಯ ಕೂದಲಿಗೆ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತುಂಬಾ ವರ್ಷಗಳ ಬಳಿಕ ಯಶ್ ಸ್ಲಿಮ್ ಹಾಗೂ ಶಾರ್ಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಹೊಸ ಯಶ್ ದರ್ಶನವಾಗಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಿರ್ವಹಿಸುತ್ತಿರುವ ಪಾತ್ರದ ಹೆಸರು ಅಥವಾ ಕೋಡ್ ನೇಮ್ ‘ಟಿಕೆಟ್’ ಎನ್ನಲಾಗಿದೆ. ಮೊನ್ನೆಯಷ್ಟೇ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಯಶ್ ಸಿಗಾರ್ ಸೇದುತ್ತಾ, ಗನ್ ಹಿಡಿದು ಮಾಸ್ ಎಂಟ್ರಿ ಕೊಟ್ಟಿದ್ದರು. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ಮೇಕಿಂಗ್ ವಿಡಿಯೋದಲ್ಲಿ, ಯಶ್ ಅವರ ಮೇಕೋವರ್ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಬಾರ್ಬರ್ ಯಶ್ ಅವರ ಗಡ್ಡ ಮತ್ತು ಕೂದಲನ್ನು ಸ್ಟೈಲಿಶ್ ಆಗಿ ಕತ್ತರಿಸುವ ದೃಶ್ಯಗಳು ವಿಡಿಯೋದಲ್ಲಿವೆ.
ವಿಡಿಯೋದ ಕೊನೆಯಲ್ಲಿ ಯಶ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾ, ‘ಡ್ಯಾಡೀಸ್ ಹೋಮ್’ ಎಂಬ ಡೈಲಾಗ್ ಹೊಡೆದಿದ್ದಾರೆ. ಇದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಟಾಕ್ಸಿಕ್’ ಒಂದು ಪ್ಯಾನ್ ಇಂಡಿಯಾ ಮತ್ತು ಗ್ಲೋಬಲ್ ಮಟ್ಟದ ಸಿನಿಮಾವಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗೋವಾ ಹಾಗೂ ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ ಎನ್ನಲಾಗಿದ್ದು, ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಕಿಯಾರ ಅಡ್ವಾಣಿ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿರುವ ಸಾಧ್ಯತೆಯಿದೆ.

ನೋಡಿರಿ

