‘ಟಾಕ್ಸಿಕ್’ಗೆ ಖಂಡ್ರೆ ಕಂಟಕ – ನಿಲ್ಲುತ್ತಾ ಯಶ್ ಸಿನಿಮಾ?
ರಾಕಿಂಗ್ ಸಿನಿಮಾಕ್ಕೆ ‘ಕೊಡಲಿ’
ಒಂದ್ಕಡೆ ದರ್ಶನ್ ಜೈಲಿನಿಂದ ಮಂಧ್ಯಂತರ ಜಾಮೀನಿನ ಮೇಲೆ ಹೊರ ಬಂದಿದ್ರೆ, ಇತ್ತ ಯಶ್ ಟಾಕ್ಸಿಕ್ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ. ಟಾಕ್ಸಿಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಶಾಕಿಂಗ್‌ಸಂಗತಿಯೊಂದು ಹೊರಬಿದ್ದಿದೆ. ಟಾಕ್ಸಿಕ್ ಚಿತ್ರದ ಸೆಟ್ ಗಾಗಿ ನೂರಾರು ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ. ಹಾಗಿದ್ರೆ ಏನಿದು ಆರೋಪ ಸೆಟ್‌ಲೈಟ್ ಫೋಟೋದಲ್ಲಿ ಇರೋದ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ‘ಏನ್ರೀ ಮೀಡಿಯಾ’ ಅನ್ನಂಗಿಲ್ಲ ದಾಸ – D ಫ್ಯಾನ್ಸ್ ಈಗಲೇ ಖುಷಿಪಡಬೇಡಿ
ಯಶ್ ಟಾಕ್ಸಿಕ್ ಚಿತ್ರ ಸಖತ್ ಸದ್ದು ಮಾಡ್ತಿದೆ. ನಡುವೆ ಶೂಟಿಂಗ್‌ಗಾಗಿ ಸೆಟ್ ಹಾಕಲು HMT ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ ಹೇಳಿದ್ದು, ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮದ ಗುಟ್ಟು ರಟ್ಟಾಗಿದೆ.
ಸ್ಕೀನ್ ಮೇಲೆ ಕಾಣೋ ಈ ಎರಡು ಫೋಟೋಗಳನ್ನ ನೋಡಿ.. ಮೊದಲ ಫೋಟೋದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದೆ.. ಅದೇ ಜಾಗದ ಮತ್ತೊಂದು ಫೋಟೋ ನೋಡಿ. ಆಗ ಜಾಗಲ್ಲಿ ಹಸಿರೇ ಇಲ್ಲ.. ಮರಗಳು ನಾಶವಾಗಿ ಬಯಲಾಗಿ ಹೋಗಿವೆ.. ಇದು ಸ್ಯಾಟೆಲೈಟ್ ತೆಗೆದ ಫೋಟೋಗಳು .. ಇದನ್ನ ಅರಣ್ಯ ಸಚಿವರೇ ಶೇರ್ ಮಾಡಿದ್ದಾರೆ. ಹಾಗಿದ್ರೆ ಇದ್ರಲ್ಲಿ ಟಾಕ್ಸಿಕ್ ಚಿತ್ರದ ಮೇಲೆ ಇರೋ ಆರೋಪಗಳೇನು ಅನ್ನೋದನ್ನ ನೋಡೋಣ ಬನ್ನಿ..
‘ಟಾಕ್ಸಿಕ್’ ತಂಡದ ಮೇಲೆ ಸಚಿವರ ಆರೋಪವೇನು?
ಟಾಕ್ಸಿಕ್ ಚಿತ್ರೀಕರಣದ ಸೆಟ್ ಹಾಕಲು ಅರಣ್ಯಭೂಮಿ ನಾಶ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಆರೋಪ ಮಾಡಿದ್ದಾರೆ. ಸೆಟ್ ಪೂರ್ವದ ಹಾಗೂ ಸೆಟ್ ಬಳಿಕ ಹಾಕಿರುವ ಸ್ಯಾಟಲೈಟ್ ಫೋಟೋ ನಮ್ಮ ಬಳಿ ಇದೆ. ಚಿತ್ರೀಕರಣಕ್ಕಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ. 2023ರಲ್ಲಿ ಅಲ್ಲಿ ಪ್ರದೇಶ ಅರಣ್ಯ ಒಳಗೊಂಡಿತ್ತು . 2024 ರಿಂದ ಟಾಕ್ಸಿಕ್ ಚಿತ್ರೀಕರಣಕ್ಕಾಗಿ ಸೆಟ್ ಕಾರ್ಯ ಪ್ರಾರಂಭವಾದ ಬಳಿಕ ಅರಣ್ಯ ಪ್ರದೇಶ ನಾಶವಾಗಿದೆ. ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವ ಕುರಿತು ಚಿಂತನೆ ನಡೆಸಲಾಗಿದೆ ಎನ್ನುತ್ತಿದ್ದಾರೆ. ಅನ್ನು ಅರಣ್ಯ ಇಲಾಖೆ ಹೀಗೆ ಆರೋಪ ಮಾಡಿದ್ದಕ್ಕೆ ಚಿತ್ರತಂಡ ಕೂಡ ಅದಕ್ಕೆ ರಿಯಾಕ್ಷನ್ ಕೊಟ್ಟಿದೆ..
ಟಾಕ್ಸಿಕ್ ಟೀಮ್ ಹೇಳೋದೇನು?
ಅರಣ್ಯ ಇಲಾಖೆ ಕಾಡನ್ನ ನಾಶ ಮಾಡಿದೆ ಅಂತಾ ಆರೋಪ ಮಾಡಿದ್ರೆ ಅದಕ್ಕೆ ಟಾಕ್ಸಿಕ್ ಚಿತ್ರ ತಂಡ ರಿಯಾಕ್ಟ್ ಮಾಡಿದೆ. ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕೋಕೂ ಮುನ್ನ ತೆಗೆದ ಸ್ಯಾಟಲೈಟ್ ಪಿಕ್ಚರ್ ನಮ್ಮ ಬಳಿಯೂ ಇದೆ. 2022 ರಲ್ಲೇ ದಾಖಲಾದ ಸ್ಯಾಟಲೈಟ್ ಫೋಟೋ ಸಾಕ್ಷ್ಯ ನಮ್ಮ ಹತ್ರವಿದೆ ಎಂದಿದ್ದಾರೆ. ಅಲ್ಲವೇ ನಾವು ಯಾವುದೇ ಪರಿಸರ ನಾಶ ಮಾಡಿಲ್ಲ. ಮೊದಲೇ ಖಾಲಿ ಇದ್ದ ಜಾಗವನ್ನೇ ಬಳಸಿಕೊಂಡು ಸೆಟ್ ನಿರ್ಮಾಣ ಮಾಡಿದ್ದೇವೆ ಎಂದಿದ್ದಾರೆ. ಹಾಗೇ ಸೆಟ್ ಹಾಕೋದಕ್ಕೂ ಮುನ್ನ ಅಲ್ಲಿನ ಚಿತ್ರಣದ ದಾಖಲೆ ಇದೆ ಎಂದು ಹೇಳಿದೆ. ಅರಣ್ಯ ಸಚಿವರೇ ಟಾಕ್ಸಿಕ್ ಚಿತ್ರತಂಡ ಅರಣ್ಯ ನಾಶ ಮಾಡಿದೆ ಅಂತಾ ಆರೋಪ ಮಾಡಿದೆ.. ಆದ್ರೆ ಚಿತ್ರತಂಡ ನಾವೇನು ಮಾಡಿಲ್ಲ ಅಂತಾ ಹೇಳುತ್ತಿದೆ. ಹೀಗಾಗಿ ಈ ಕೇಸ್ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.