ರಾಯನ ಸುತ್ತ ಬ್ಯೂಟಿಗಳದ್ದೇ ಕಾರುಬಾರು – ಟಾಕ್ಸಿಕ್ ಸಿನಿಮಾದ ಲೇಡಿಸ್ & ಲೇಡಿಸ್ ಟೀಸರ್ ಔಟ್!

ಸಿನಿ ಲೋಕದಲ್ಲಿ ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಗಾಗಿ ಎಲ್ರೂ ಕಾಯ್ತಿದ್ದಾರೆ. ಕಳೆದ ಮಾರ್ಚ್ ನಲ್ಲೇ ರಿಲೀಸ್ ಆಗ್ಬೇಕಿದ್ದ ಮೂವಿ ಕೆಲ ಕಾರಣಗಳಿಂದ ಪೋಸ್ಟ್ ಪೋನ್ ಆಗಿತ್ತು. ಆದ್ರೆ ಆಗಸ್ಟ್ ನಲ್ಲಿ ಅಧಿಕೃತವಾಗಿ ರಿಲೀಸ್ ಆಗೋದಾಗಿ ಅನೌನ್ಸ್ ಮಾಡಿದ್ದಾರೆ. ಈಗ ಸಿನಿಮಾದ ಮತ್ತೊಂದು ಟೀಸರ್ ರಿವೀಲ್ ಆಗಿದ್ದು ಇಲ್ಲಿ ಮಹಿಳಾ ಗ್ಯಾಂಗ್ ಗೆ ದೊಡ್ಡ ಮಟ್ಟದಲ್ಲೇ ಸ್ಕ್ರೀನ್ ಕೊಟ್ಟಿರೋದು ರಿವೀಲ್ ಆಗಿದೆ.
ಇದನ್ನೂ ಓದಿ : ಕರ್ಣ ಧಾರಾವಾಹಿಯಲ್ಲಿ ನಿತ್ಯ ಪಾತ್ರ ಮುಕ್ತಾಯವಾಯ್ತಾ? – ನಿಧಿ ಮದುವೆಯಾದ ಮೇಲೆ ಗರ್ಭಿಣಿ ನಿತ್ಯಾ ನಾಪತ್ತೆ?
ಕೆಜಿಎಫ್ ಚಿತ್ರಗಳ ಬಳಿಕ ಸ್ಯಾಂಡಲ್‌ವುಡ್ ನಿಂದ ಹಿಡ್ದು ಹಾಲಿವುಡ್ ವರೆಗೂ ಸೌಂಡ್ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ಬಾರೀ ಕುತೂಹಲ ಮೂಡಿಸಿದೆ. ಈಗ ಟಾಕ್ಸಿಕ್ ಚಿತ್ರದ ಲೇಡಿಸ್ ಅಂಡ್ ಲೇಡಿಸ್ ಎನ್ನುವ ಟೀಸರ್ ಔಟ್ ಆಗಿದ್ದು ಹಲ್ ಚಲ್ ಎಬ್ಬಿಸಿದೆ. ಐವರು ನಾಯಕಿಯರನ್ನ ಪರಿಚಯಿಸೋ ಈ ಟೀಸರ್ ಟಾಕ್ಸಿಕ್ ಸಿನಿಮಾ ಬಗೆಗಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ. ಈ ಟೀಸರ್ ಆರಂಭವಾಗೋದೇ ಒಂದು ಖಡಕ್ ವಾರ್ನಿಂಗ್‌ನೊಂದಿಗೆ. ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ, ವಯಸ್ಸಾದವರು ನಿಮ್ಮ ರಿಸ್ಕ್ ನಲ್ಲಿ ನೋಡಿ ಅಂತ ಚಿತ್ರತಂಡ ಮೊದಲೇ ಎಚ್ಚರಿಕೆ ಕೊಟ್ಟಿದೆ ಅಂದ್ರೆ, ಈ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ಕ್ರೈಂ ಸೀನ್ಸ್ ಇದೆ ಅನ್ನೋದು ಗೊತ್ತಾಗುತ್ತೆ.
ಆರಂಭದಲ್ಲಿ ಟಾಕ್ಸಿಕ್ ಚಿತ್ರದಲ್ಲಿ ಮಹಿಳೆಯರಿಗೆ ಹೈಪ್ ಇಲ್ಲ ಅನ್ನೋ ಆರೋಪಗಳು ಕೇಳಿ ಬಂದಿದ್ವು. ಆದ್ರೆ ಇತ್ತೀಚೆಗೆ ನಟ ಯಶ್ ಅವ್ರೇ ಕಾದು ನೋಡಿ ಅನ್ನೋ ಥರದಲ್ಲಿ ಇನ್ಸ್ಟಾ ಪೋಸ್ಟ್ ಹಾಕಿದ್ರು. ಈಗ ಟೀಸರ್ ಔಟ್ ಆದ್ಮೇಲೆ ಮಹಿಳಾಮಣಿಗಳ ದೊಡ್ಡ ದಂಡೇ ಇದೆ. ಬರೋಬ್ಬರಿ ಐದು ಸ್ಟಾರ್ ನಾಯಕಿಯರಿದ್ದು, ಕ್ಯಾರೆಕ್ಟರ್ ಹೆಸರು ರಿವೀಲ್ ಮಾಡಿದ್ದ ಟಾಕ್ಸಿಕ್ ಟೀಂ ಈಗ ಕಿಲ್ಲಿಂಗ್ ಲುಕ್ನ ಟೀಸರ್ನಲ್ಲಿ ಪ್ರದರ್ಶನ ಮಾಡಿದೆ. ಮೊದಲಿಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಇಲ್ಲಿ ‘ಗಂಗಾ’ ಅನ್ನೋ ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅವರ ಆ್ಯಕ್ಷನ್ ಮತ್ತು ಖಡಕ್ ಲುಕ್ ಬೆಂಕಿ ಹಚ್ಚುವಂತಿದೆ.ಇನ್ನು ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ‘ನಾಡಿಯಾ’ ಹೆಸರಿನಲ್ಲಿ ಅಲ್ಟ್ರಾ ಗ್ಲಾಮರಸ್ ಹಾಗೂ ಅಷ್ಟೇ ಮಿಸ್ಟೀರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್ ಕಣ್ಮಣಿ ರುಕ್ಮಿಣಿ ವಸಂತ್ ಇಲ್ಲಿ ಸಾಫ್ಟ್ ಆಗಿ ಕಾಣಿಸಿಲ್ಲ, ಬದಲಿಗೆ ‘ಮೆಲಿಸಾ’ ಅನ್ನೋ ರೆಬೆಲ್ ಲೇಡಿ ರೋಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇವರ ಜೊತೆಗೆ ಹುಮಾ ಖುರೇಷಿ ‘ಎಲಿಜಬೆತ್’ ಅನ್ನೋ ತಂತ್ರಗಾರ್ತಿಯಾಗಿ ಮತ್ತು ತಾರಾ ಸುತಾರಿಯಾ ‘ರೆಬೆಕಾ’ ಅನ್ನೋ ಬಿಂದಾಸ್ ಹಾಗೂ ಡೇಂಜರಸ್ ಲೇಡಿಯಾಗಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ಬೆಡಗಿಯರ ಜೊತೆಗೆ ಇಂಟರ್ನ್ಯಾಷನಲ್ ಲೆವೆಲ್‌ನ ಕೆಲವು ವಿದೇಶಿ ನಟಿಯರು ಕೂಡ ಈ ಕಥೆಯ ಭಾಗವಾಗಿದ್ದಾರೆ. ಟೀಸರ್‌ನ ಕೆಲವು ದೃಶ್ಯಗಳಲ್ಲಿ ಯಶ್ ಈ ನಾಯಕಿಯರ ಜೊತೆ ಚೆಲ್ಲಾಟ ಆಡ್ತಾ ಇದ್ರೆ, ಇನ್ನು ಕೆಲವು ದೃಶ್ಯಗಳಲ್ಲಿ ಅದೇ ನಾಯಕಿಯರು ಯಶ್ ಪ್ರಾಣ ತೆಗೆಯಲು ಹೊಂಚು ಹಾಕ್ತಾ ಇದ್ದಾರೆ. ಟೀಸರ್‌ನ ಕ್ಲೈಮ್ಯಾಕ್ಸ್ ಝಲಕ್ ಅಂತೂ ಅಲ್ಟಿಮೇಟ್ ಆಗಿದೆ. ನೂರಾರು ಮಹಿಳೆಯರು ಒಂದೇ ತರಹದ ಉಡುಪು ಧರಿಸಿ ಯಶ್ ವಿರುದ್ಧ ಯುದ್ಧ ಸಾರಿದ್ದಾರೆ. ಟಾಕ್ಸಿಕ್‌ನ ಈ ಲೇಡೀಸ್ ಅಂಡ್ ಲೇಡೀಸ್ ಟೀಸರ್ ಅಕ್ಷರಶಃ ಕಿಚ್ಚು ಹಚ್ಚಿದೆ. ಈ ಮೂಲಕ ಸಿನಿಮಾದ ನಿರೀಕ್ಷೆ ಮತ್ತಷ್ಟು ಮಗದಷ್ಟು ಹೆಚ್ಚಾಗ್ತಿದ್ದು ಫ್ಯಾನ್ಸ್ ಅಂತೂ ಕುತೂಹಲದಿಂದ ಕಾಯ್ತಿದ್ದಾರೆ. ಹಾಗೇ ಚಿತ್ರಲೋಕದಲ್ಲೂ ಬಾರೀ ನಿರೀಕ್ಷೆ ಮೂಡಿಸಿದೆ.

ನೋಡಿರಿ

