ಯಶ್‌ ತಾಯಿ ಬೀದಿ ರಂಪಾಟ! – ಕಾಂಪೌಂಡ್‌ ರಾಮಾಯಣಕ್ಕೆ ಅಧಿಕಾರಿಗಳ ಎಡವಟ್ಟೇ ಕಾರಣ?

ಯಶ್‌ ತಾಯಿ ಬೀದಿ ರಂಪಾಟ! – ಕಾಂಪೌಂಡ್‌ ರಾಮಾಯಣಕ್ಕೆ ಅಧಿಕಾರಿಗಳ ಎಡವಟ್ಟೇ ಕಾರಣ?

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಮನೆ ಕಾಂಪೌಂಡ್‌ ವಿಚಾರ ಭಾರಿ ಸದ್ದು ಮಾಡ್ತಿದೆ. ಬೀದಿಗೆ ಇಳಿದು ಯಶ್‌ ತಾಯಿ ರಂಪಾಟ ಮಾಡುತ್ತಿದ್ದಾರೆ. ಇದೀಗ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜು ನಡುವಿನ ನಿವೇಶನ ಮಾಲೀಕತ್ವದ ಜಟಾಪಟಿಗೆ ಪೊಲೀಸರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಆದರೆ ಈ ವಿವಾದಕ್ಕೆ ಅಧಿಕಾರಿಗಳ ಯಡವಟ್ಟು ಕಾರಣ ಎಂಬುದು ಇಬ್ಬರ ಬಳಿಯಿರುವ ದಾಖಲೆಗಳಿಂದ ಬಹಿರಂಗವಾಗಿದೆ.

ಇದನ್ನೂ ಓದಿ: ಗಿಲ್ಲಿ ಹಣ ಇದ್ದವರನ್ನು ಮಾತ್ರ ಮೀಟ್‌ ಮಾಡೋದಾ? – ಬಿಗ್‌ಬಾಸ್‌ ವಿನ್ನರ್ ನಡೆಗೆ ಫ್ಯಾನ್ಸ್‌ ಗರಂ!

ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್ ಶಾಕ್ ಕೊಟ್ಟಿತ್ತು. ಬೇರೆಯವರ ಜಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾದ ಕಾಂಪೌಂಡ್‌ನ್ನು ಧ್ವಂಸಗೊಳಿಸಲಾಗಿತ್ತು. ಹಾಸನ ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದರು. ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದರು. 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿತ್ತು. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿತ್ತು. ಆದ್ರೆ  ಕೋರ್ಟ್‌ ಆದೇಶ ಇದ್ರೂ ಯಶ್‌ ತಾಯಿ ಮತ್ತೆ ಅದೇ ಜಾಗದಲ್ಲಿ ಕಾಂಪೌಂಡ್ ಕಟ್ಟಲು ಪ್ರಯತ್ನಿಸಿದ್ದಾರೆ. ಇವೆಲ್ಲದ್ರ ಮಧ್ಯೆ ಈ ವಿವಾದಕ್ಕೆ ಅಧಿಕಾರಿಗಳ ಯಡವಟ್ಟು ಕಾರಣ ಎಂಬುದು ಇಬ್ಬರ ಬಳಿಯಿರುವ ದಾಖಲೆಗಳಿಂದ ಬಹಿರಂಗವಾಗಿದೆ.

ಅಧಿಕಾರಿಗಳು ಒಂದೇ ಸೈಟ್‍ಗೆ ಎರಡೆರಡು ದಾಖಲೆ ನೀಡಿ ಗೋಲ್ಮಾಲ್ ಎಸಗಿದ್ದಾರೆ. ಇದ್ರಿಂದಾಗೇ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ. ಪುಷ್ಪಾ ಅವರ ಬಳಿಯಿರುವ ದಾಖಲೆಗಳು ನಿವೇಶನ ಅವರಿಗೆ ಸೇರಿದೆ ಎಂಬುದನ್ನು ತೋರಿಸುತ್ತಿದ್ದರೆ, ದೇವರಾಜು ಅವರ ಬಳಿಯಿರುವ ದಾಖಲೆಗಳು ಲಕ್ಷ್ಮಮ್ಮ ಅವರೇ ಜಾಗದ ಮಾಲೀಕರು ಎಂಬುದನ್ನು ಸಾಬೀತುಪಡಿಸುತ್ತಿದೆ. ಹೀಗಾಗಿ ಕೋರ್ಟ್‍ನಲ್ಲೇ ಇದರ ಅಂತಿಮ ತೀರ್ಪು ಹೊರಬೀಳಬೇಕಿದೆ.

Shwetha M