ರಾವಣಾಸುರನಾಗಿ ತೆರೆಗೆ ಬರಲು ಯಶ್ ರೆಡಿ – ಮೇ ಟು ಅಕ್ಟೋಬರ್ ರಾಕಿಂಗ್ ಸ್ಟಾರ್ ಫುಲ್ ಬ್ಯುಸಿ!

ಬಾಲಿವುಡ್ನಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಜೊತೆ ಯಶ್ ಕೂಡ ಇದ್ದಾರೆ. ಸದ್ಯಕ್ಕಂತೂ ಯಶ್ ಅವರ ಪೂರ್ತಿ ಗಮನ ‘ಟಾಕ್ಸಿಕ್’ ಸಿನಿಮಾದ ಮೇಲಿದೆ. ಇದೀಗ ಯಶ್ ರಾಮಾಯಣ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.
ಇದನ್ನೂ ಓದಿ: ಬರ್ತ್ಡೇ ದಿನವೇ ಮುದ್ದಾದ ಮಗಳಿಗೆ ನಾಮಕರಣ ಮಾಡಿದ ಕೆಎಲ್ ರಾಹುಲ್ – ಕ್ರಿಕೆಟರ್ ಮಗಳ ಹೆಸರೇನು?
ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ನಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದ ಶೂಟ್ನಲ್ಲಿ ಯಶ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ರಾಮಾಯಣ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅವರು ಬಹುತೇಕ ಸಮಯವನ್ನು ಮುಂಬೈನಲ್ಲೇ ಕಳೆಯಲಿದ್ದಾರೆ ಎಂದು ವರದಿ ಆಗಿದೆ.
ರಾಮಾಯಣ ಒಟ್ಟೂ ಎರಡು ಪಾರ್ಟ್ನಲ್ಲಿ ಬರಲಿದೆ. ಮೊದಲ ಪಾರ್ಟ್ ಕೊನೆಯಲ್ಲಿ ಯಶ್ ಅವರ ಆಗಮನ ಆಗಲಿದೆ. ಈಗಾಗಲೇ ಇದರ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ. ಎರಡನೇ ಪಾರ್ಟ್ನಲ್ಲಿ ಯಶ್ ಅವರ ಪಾತ್ರ ಹೆಚ್ಚಿರಲಿದೆ. ಮೇ ತಿಂಗಳಿಂದ ಆರಂಭ ಆಗೋದು ‘ರಾಮಾಯಣ 2’ ಚಿತ್ರದ ಶೂಟ್ ಎಂದು ಹೇಳಲಾಗುತ್ತಿದೆ. ಯಶ್ ಅವರು ಆರು ತಿಂಗಳ ಕಾಲ ಬಾಲಿವುಡ್ನಲ್ಲಿ ಬ್ಯುಸಿ ಇರಲಿದ್ದಾರೆ
ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ವಾಟಿಕ ಪ್ರೋಷನ್ನ ಶೂಟ್ ಕೂಡ ಇದರಲ್ಲೇ ನಡೆಯಲಿದೆ. ರಾವಣನು ಸೀತಾಳ ಬಂಧಿಸಿಟ್ಟ ಜಾಗ ಇದಾಗಿದೆ. ಹೀಗಾಗಿ, ಯಶ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್ನಲ್ಲಿ ಸಾಕಷ್ಟು ದೃಶ್ಯಗಳು ಇದರಲ್ಲಿ ಬರಲಿವೆ.
ತಂಡ ನೀಡಿರುವ ಮಾಹಿತಿ ಪ್ರಕಾರ ಮೊದಲ ಪಾರ್ಟ್ 2026ರ ದೀಪಾವಳಿಗೆ ರಿಲೀಸ್ ಆಗಲಿದೆ. 2027ರ ದೀಪಾವಳಿಗೆ ಎರಡನೇ ಭಾಗದಲ್ಲಿ ಬಿಡುಗಡೆ ಆಗಲಿದೆ.

ನೋಡಿರಿ

