ಫಾರಿನ್ ಬ್ಯೂಟಿ ಜೊತೆ ಜೈಸ್ವಾಲ್ ಲವ್! – ಫೋಟೋ ಲೀಕ್.. ಮದುವೆಯೂ ಫಿಕ್ಸ್?
ಯಶಸ್ವಿ ದಿಲ್ ಕದ್ದ ಮ್ಯಾಡಿ ಯಾರು?

ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾದ ಈ ಯಂಗ್ ಬ್ಯಾಟರ್ ಈಗ ಐಪಿಎಲ್ ನಲ್ಲಿ ಅಬ್ಬರಿಸುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡ್ತಿರೋ ಜೈಸ್ವಾಲ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಮೈದಾನದಲ್ಲಿ ಅಬ್ಬರಿಸುತ್ತಿದ್ದಂತೆ ಅವರ ವೈಯಕ್ತಿಕ ವಿಚಾರ ಈಗ ಸದ್ದು ಮಾಡ್ತಿದೆ. ಈ ಯಂಗ್ ಬಾಯ್ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಅದೂ ಕೂಡ ಫಾರಿನ್ ಬ್ಯೂಟಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.. ಮದುವೆ ಮಾತುಕತೆ ಕೂಡ ನಡೆದಿದೆ ಅನ್ನೋ ಸುದ್ದಿ ಕೇಳ್ತಿ ಬರ್ತಿದೆ.
ಇದನ್ನೂ ಓದಿ: ಬೇಸಿಗೆ ರಜೆ ಮಜಾ ಮಾಡಲು ಹೊರಟವರಿಗೆ ಗುಡ್ನ್ಯೂಸ್! – ಮೈಸೂರು-ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರ
ಐಪಿಎಲ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಪರ ಆಡ್ತಿರುವ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡ್ತಿದ್ದು, ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದೀಗ ಜೈಸ್ವಾಲ್ ಐಪಿಎಲ್ನಲ್ಲಿ ವಿಧ್ವಂಸಕ ಪ್ರದರ್ಶನ ನೀಡ್ತಿದ್ದಂತೆ ಅವರ ಲವ್ ಮ್ಯಾಟರ್ ಮತ್ತೆ ಮುನ್ನಲೆಗೆ ಬಂದಿದೆ. ಜೈಸ್ವಾಲ್ ಇಂಗ್ಲೆಂಡ್ ಮೂಲದ ಚೆಲುವೆಯನ್ನು ಪ್ರೀತಿಸುತ್ತಿದ್ದಾರೆ. ಆಕೆಯನ್ನೇ ಮದುವೆಯಾಗುತ್ತಿದ್ದಾರೆ ಎನ್ನಲಾಗ್ತಿದೆ. ಆ ಸುಂದ್ರಿ ಮ್ಯಾಡಿ ಹ್ಯಾಮಿಲ್ಟನ್.. ಮ್ಯಾಡಿ ಇಂಗ್ಲೆಂಡ್ ಮೂಲದವಳು. ಈಕೆ ಇನ್ನೂ ವ್ಯಾಸಾಂಗ ಮಾಡ್ತಿದ್ದಾಳೆ ಇದ್ರ ಜೊತೆಗೆ ನ್ಯೂಟ್ರಿಷಿಯನ್ ಎಂದು ಹೇಳಲಾಗ್ತಿದೆ. ಕಳೆದು ನಾಲ್ಕೈದು ವರ್ಷಗಳಿಂದ ಮ್ಯಾಡಿ ಹಾಗೂ ಜೈಸ್ವಾಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ. ಈ ಹಿಂದೆ ಕೂಡ ಇಂಗ್ಲೆಂಡ್ನಲ್ಲಿ ಇವರಿಬ್ರು ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಇದೀಗ ಮ್ಯಾಡಿ ಶ್ರೀಲಂಕಾದ ಬೀಚ್ನಲ್ಲಿ ಬಿಕಿನಿಯಲ್ಲಿ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಲ್ಲದೇ, ಜೈಸ್ವಾಲ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಇನ್ನು ಜೈಸ್ವಾಲ್ ಹೆಸರು ಮ್ಯಾಡಿ ಜೊತೆ ತಳುಕು ಹಾಕಿಕೊಳ್ಳೋದಿಕ್ಕೂ ಕಾರಣ ಇದೆ. ಮ್ಯಾಡಿ ಹ್ಯಾಮಿಲ್ಟನ್ ಅಣ್ಣ ಮತ್ತು ಜೈಸ್ವಾಲ್ ಕ್ಲೋಸ್ ಫ್ರೆಂಡ್ಸ್. ಹೆನ್ರಿ ಹ್ಯಾಮಿಲ್ಟನ್ ಕೂಡ ಕ್ರಿಕೆಟರ್. ಇಂಗ್ಲೆಂಡ್ನ ಕ್ರಿಕೆಟ್ ಕ್ಲಬ್ವೊಂದರ ಪರ ಆಡ್ತಿರುವ ಹೆನ್ರಿ 2018ರಿಂದಲೂ ಜೈಸ್ವಾಲ್ ಜೊತೆ ಕ್ಲೋಸ್ ಆಗಿದ್ದಾರೆ. ಹೀಗಾಗಿ ಮ್ಯಾಡಿ ಫ್ಯಾಮಿಲಿ ಜೊತೆಯೂ ಜೈಸ್ವಾಲ್ ಆಗಾಗ ಕಾಣಿಸಿಕೊಳ್ತಿರ್ತಾರೆ. ಇನ್ನು ಮ್ಯಾಡಿ ಜೈಸ್ವಾಲ್ ಪಂದ್ಯ ಇದ್ದಾಗಲೆಲ್ಲಾ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ತಿರ್ತಾರೆ. ಗ್ಯಾಲರಿಯಲ್ಲಿ ಕೂತು ಚಿಯರಪ್ ಮಾಡ್ತಿರ್ತಾರೆ. ಕಳೆದ ವರ್ಷ ಐಪಿಎಲ್ ಟೈಮ್ ನಲ್ಲೂ ಮ್ಯಾಡಿ ಜೈಸ್ವಾಲ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಜೈಸ್ವಾಲ್ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಆ ಫೋಟೋದಲ್ಲಿ ಜೈಸ್ವಾಲ್, ಮ್ಯಾಡಿ ಹ್ಯಾಮಿಲ್ಟನ್ ಹಾಗೂ ಹೆನ್ರಿ ಹ್ಯಾಮಿಲ್ಟನ್ ಇದ್ರು. ಈ ಫೋಟೋ ಶೇರ್ ಮಾಡಿರುವ ಜೈಸ್ವಾಲ್, ಸಮಯ ಕಳೆದು ಹೋಗಬಹುದು. ಬಂಧನಗಳು ಮರೆಯಲಾಗುವುದಿಲ್ಲ. ನಾವು ಕೃತಜ್ಞರಾಗಿರಬೇಕು ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಜೈಸ್ವಾಲ್ ಹೃದಯ ಗೆದ್ದ ಚೋರಿ ಈಕೆಯೇ ಅಂತಾ ಫ್ಯಾನ್ಸ್ ಹೇಳ್ತಿದ್ದಾರೆ. ಆದ್ರೆ ಜೈಸ್ವಾಲ್ ಮ್ಯಾಡಿ ಜೊತೆ ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಅನ್ನೋದು ಇನ್ನೂ ಗೊತ್ತಿಲ್ಲ. ಇತ್ತೀಚೆಗೆ ಪಾಡ್ಕಾಸ್ಟ್ವೊಂದರಲ್ಲಿ ಜೈಸ್ವಾಲ್ ಯಾರೊಂದಿಗೂ ನಾನು ಕಮಿಟ್ ಆಗಿಲ್ಲ ಅಂತ ಹೇಳಿದ್ರು. ಆದ್ರೆ ಇದು ನಿಜನಾ? ಅಥವಾ ವೈಯಕ್ತಿಕ ವಿಚಾರ ಪಬ್ಲಿಕ್ ಮ್ಯಾಟರ್ ಆಗೋದು ಬೇಡ ಅಂತ ಹೀಗೆ ಹೇಳಿದ್ರಾ ಅನ್ನೋದು ಗೊತ್ತಿಲ್ಲ. ಒಟ್ಟಾರೆ ಜೈಸ್ವಾಲ್ ಜೊತೆ ಮ್ಯಾಡಿ ಹೆಸರು ಜೋರಾಗಿ ಸದ್ದು ಮಾಡ್ತಿರೋದಂತೂ ಸತ್ಯ. ಸೋ ಮುಂದಿನ ದಿನಗಳಲ್ಲಿ ಈ ಚರ್ಚೆ ಯಾವ ತಿರುವು ಪಡೆದುಕೊಳ್ಳುತ್ತೆ ಅಂತ ಕಾದುನೋಡ್ಬೇಕು.

ನೋಡಿರಿ

