ಟೆಸ್ಟ್ ಗಷ್ಟೇ ಸೀಮಿತವಾದ ಜೈಸ್ವಾಲ್ – T-20I, ODI ಕೆರಿಯರ್ ಮುಗಿಸಿದ್ರಾ?
ಗಂಭೀರ್ ಫೇವರಿಸಂ.. ಯಶಸ್ವಿ ಸೈಡ್ ಲೈನ್

ಟೀಂ ಇಂಡಿಯಾ ಟಿ-20ಐ ತಂಡದಲ್ಲಿ ಶುಭ್ಮನ್ ಗಿಲ್ ಅವ್ರ ಫೇಲ್ಯೂರ್ ನೋಡಿದಾಗ ಸುಮಾರ್ ಜನ್ರಿಗೆ ಅನ್ಸಿದ್ದು ಒಂದೇ. ಗಿಲ್ ಬದಲು ಯಶಸ್ವಿ ಜೈಸ್ವಾಲ್ಗೆ ಚಾನ್ಸ್ ಕೊಡ್ಬೇಕಿತ್ತು ಅನ್ನೋದು. ಆದ್ರೆ ಗಿಲ್ ತಂಡದಿಂದ ಹೊರಬಿದ್ರೂ ಜೈಸ್ವಾಲ್ಗೆ ಅವಕಾಶ ಸಿಗ್ಲಿಲ್ಲ. ಇನ್ನು ಏಕದಿನ ಮಾದರಿಯಲ್ಲೂ ಜೈಸ್ವಾಲ್ ಜಸ್ಟ್ ಬ್ಯಾಕಪ್ ಪ್ಲೇಯರ್ ಆಗಿದ್ದಾರೆ.
ಇದನ್ನೂ ಓದಿ : 4 ವರ್ಷದ ಬಾಲಕಿ ಆಟಕ್ಕೆ ಧೋನಿ ಫಿದಾ!- ಮಂದಾನ ಸ್ಟೈಲ್.. ಕ್ರಿಕೆಟ್ ಲೋಕವೇ ಮೆಚ್ಚಿದ ಶ್ರೇಯಾ ಯಾರು?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಫಾರ್ಮೆಟ್ಗೆ ಗುಡ್ಬೈ ಹೇಳಿದ್ಮೇಲೆ ಯಶಸ್ವಿ ಜೈಸ್ವಾಲ್ ಓಪನರ್ ಆಗ್ತಾರೆ ಅನ್ನೋದೇ ಎಲ್ಲರ ನಿರೀಕ್ಷೆ ಆಗಿತ್ತು. ಹಾಗೇ ರೋಕೋ ಬಳಿಕ ಆಲ್ಫಾರ್ಮೆಟ್ ಪ್ಲೇಯರ್ ಆಗೋಕೆ ಎಲ್ಲಾ ಕ್ವಾಲಿಟೀಸ್ ಇದ್ದಂತ ಪ್ಲೇಯರ್ ಆಗಿದ್ರು. ಆದ್ರೆ ಗಂಭೀರ್ ಹೆಡ್ ಕೋಚ್ ಆದ್ಮೇಲೆ ಜೈಸ್ವಾಲ್ ವೈಟ್ ಬಾಲ್ ಪಂದ್ಯಗಳಿಂದ ದೂರವೇ ಉಳಿದು ಬಿಟ್ರು. ಕಳೆದ 2 ವರ್ಷಗಳಲ್ಲಿ ವೈಟ್ ಬಾಲ್ನಲ್ಲಿ ಬಿಗ್ ಟೂರ್ನಿಗಳಿಗೆ ಹೋದಾಗ್ಲೆಲ್ಲಾ ಜೈಸ್ವಾಲ್ಗೆ ಅವಕಾಶ ಸಿಗ್ಲೇ ಇಲ್ಲ. ಇನ್ನು ಚಾಂಪಿಯನ್ಸ್ ಟ್ರೋಫಿಯ 15 ನೇ ಆಟಗಾರರ ಪಟ್ಟಿಯಲ್ಲಿ ಸ್ಥಾನ ನೀಡಿದ್ರು. ಬಟ್ ಹೆಚ್ಚುವರಿ ಸ್ಪಿನ್ನರ್ ಅಗತ್ಯವಿದ್ದ ಕಾರಣಕ್ಕೆ ಮತ್ತೆ ಜೈಸ್ವಾಲ್ರನ್ನ ತಂಡದಿಂದ ಹೊರಗಿಟ್ರು.
ಗಿಲ್ ಹೊರಗಿಟ್ಟ ಮೇಲೆ ಇಶಾನ್ ಕಿಶನ್ ಗೆ ಅವಕಾಶ!
ಟಿ-20 ವಿಶ್ವಕಪ್ ತಂಡದಿಂದ ಶುಭ್ ಮನ್ ಗಿಲ್ರನ್ನ ಕೈಬಿಟ್ಟ ಬಿಸಿಸಿಐ ಬಾಸ್ಗಳು ಆಯ್ಕೆ ಮಾಡಿದ್ದು ಇಶಾನ್ ಕಿಶನ್ರನ್ನ. ಸೋ ಇಲ್ಲೂ ಕೂಡ ಜೈಸ್ವಾಲ್ಗೆ ಅನ್ಯಾಯವಾಗಿದೆ. ಜೈಸ್ವಾಲ್ ಕೊನೆಯ ಬಾರಿಗೆ ಶ್ರೀಲಂಕಾದಲ್ಲಿ 2024 ರ ಜುಲೈನಲ್ಲಿ ಟಿ20ಐ ಪಂದ್ಯ ಆಡಿದ್ದು. ಯಶಸ್ವಿ ಜೈಸ್ವಾಲ್ ಭಾರತದ ಪರ ಕೊನೆಯ ಐದು ಟಿ-20ಐ ಪಂದ್ಯಗಳಲ್ಲಿ 93, 12, 40, 30 ಮತ್ತು 10 ರನ್ ಗಳಿಸಿದ್ದಾರೆ. ಎಲ್ಲವೂ ಆರಂಭಿಕ ಆಟಗಾರನಾಗಿ 200ರ ಸ್ಟ್ರೈಕ್-ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಹಾಗೇ ಐಪಿಎಲ್ನಲ್ಲೂ ಒನ್ ಆಫ್ ದಿ ಸಕ್ಸಸ್ಫುಲ್ ಓಪನರ್ ಆಗಿದ್ದಾರೆ. ಹೀಗಿದ್ರೂ ಜೈಸ್ವಾಲ್ಗೆ ಭಾರತ ತಂಡದಲ್ಲಿ ಅಂದ್ರೆ ಟಿ-20ಐನಲ್ಲಿ ಚಾನ್ಸ್ ಸಿಗ್ತಿಲ್ಲ.
ಏಕದಿನದಲ್ಲೂ ನಿರಾಸೆ.. ಟೆಸ್ಟ್ ಗಷ್ಟೇ ಸೀಮಿತ ಮಾಡಿದ್ರಾ?
ಇನ್ನು ಯಶಸ್ವಿ ಜೈಸ್ವಾಲ್ ಗೆ ಏಕದಿನ ಮಾದರಿಯಲ್ಲೂ ಅವಕಾಶಗಖು ಸಿಗ್ತಿಲ್ಲ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸಿರೀಸ್ಗೂ ಸೆಲೆಕ್ಟ್ ಆಗೋದು ಡೌಟಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಓಪನರ್ ಆಗಿ ಶತಕ ಗಳಿಸಿದ್ದರೂ ಮತ್ತೆ ಭಾರತದ ODI ಪ್ಲೇಯಿಂಗ್ 11ನಲ್ಲಿ ಹೊರಗುಳಿಯಬೇಕಾಗುತ್ತೆ. ಅದಕ್ಕೆ ಕಾರಣ ಕ್ಯಾಪ್ಟನ್ ಶುಬ್ಮನ್ ಗಿಲ್ ಕಂ ಬ್ಯಾಕ್. ಇಂಜುರಿ ಕಾರಣಕ್ಕೆ ಸೌತ್ ಆಫ್ರಿಕಾ ಸಿರೀಸ್ನಿಂದ ಗಿಲ್ ಹೊರ ಬಿದ್ದಿದ್ದಕ್ಕೆ ಜೈಸ್ವಾಲ್ಗೆ ಅವಕಾಶ ಸಿಕ್ಕಿತ್ತು. ಆದ್ರೆ ಈಗ ಗಿಲ್ ವಾಪಸ್ ಬರೋದ್ರಿಂದ ಜೈಸ್ವಾಲ್ ಹೊರಗುಳಿಯಬೇಕಾಗುತ್ತೆ. ಹೀಗೆ ವೈಟ್ಬಾಲ್ ಪಂದ್ಯಗಳಿಂದ ದೂರ ಇಟ್ಟಿರೋ ಬಿಸಿಸಿಐ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಸೀಮಿತ ಮಾಡ್ತಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಜೈಸ್ವಾಲ್ ಓಪನರ್ ಆಗಿ ಕಣಕ್ಕಿಳಿತಿದ್ದಾರೆ. ಬಿಸಿಸಿಐನ ಇದೇ ನಡೆ ಬಗ್ಗೆ ಪ್ರಶ್ನೆ ಮಾಡಿದ್ದ ಮಾಜಿ ಆಟಗಾರ ಆಕಾಶ್ ಚೋಪ್ರಾ ಟಿ-20 ವಿಶ್ವಕಪ್ ತಂಡದಲ್ಲಿ ಜೈಸ್ವಾಲ್ಗೆ ಅವಕಾಶ ನೀಡ್ಬೋದಿತ್ತು ಎಂದಿದ್ರು.
ಇನ್ನು ಯಶಸ್ವಿ ಜೈಸ್ವಾಲ್ ಅವರು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದಿದ್ದ ಭಾರತ ತಂಡದಲ್ಲಿಯೂ ಇದ್ದರು. ಆದರೆ ಪ್ಲೇಯಿಂಗ್ 11ನಲ್ಲಿ ಆಡಲು ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. 2024ರ ಟಿ20 ವಿಶ್ವಕಪ್‌ಗೂ ಮುನ್ನ ಯಶಸ್ವಿ ಜೈಸ್ವಾಲ್ ಟಿ20ಐ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದರು. ಆ ಮೂಲಕ ಭಾರತದ ಪರ ಎಲ್ಲಾ ಸ್ವರೂಪದಲ್ಲಿ ಶತಕ ಸಿಡಿಸಿದ್ದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿದ್ದರು. ಇನ್ನು ಇಲ್ಲಿಯವರೆಗೂ ಯಶಸ್ವಿ ಜೈಸ್ವಾಲ್ ಅವರು 23 ಟಿ20ಐ ಪಂದ್ಯಗಳಿಂದ 36.15ರ ಸರಾಸರಿ ಹಾಗೂ 164.31ರ ಸ್ಟ್ರೈಕ್ ರೇಟ್‌ನಲ್ಲಿ 723 ರನ್‌ಗಳನ್ನು ಕಲೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ಜೈಸ್ವಾಲ್ ಚುಟುಕು ಮಾದರಿಗೆ ಬರ್ತಾರಾ ನೋಡ್ಬೇಕು.

ನೋಡಿರಿ

