ಭಾರತಕ್ಕೆ ಮಾಸ್ಟರ್ ‘ಸ್ಟೋಕ್ಸ್’ – ಖಾತೆ ತೆರೆಯದೇ ಜೈಸ್ವಾಲ್, ಸಾಯಿ ಔಟ್
 4ನೇ ದಿನವೇ ಸೋಲಿನತ್ತ ಟೀಂ ಇಂಡಿಯಾ

ಭಾರತಕ್ಕೆ ಮಾಸ್ಟರ್ ‘ಸ್ಟೋಕ್ಸ್’ – ಖಾತೆ ತೆರೆಯದೇ ಜೈಸ್ವಾಲ್, ಸಾಯಿ ಔಟ್ 4ನೇ ದಿನವೇ ಸೋಲಿನತ್ತ ಟೀಂ ಇಂಡಿಯಾ

ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರೋ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರು ಆಲ್​ರೌಂಡ್ ಪ್ರದರ್ಶನದ ಮೂಲಕ ಕಂಪ್ಲೀಟ್ ಡಾಮಿನೇಟ್ ಮಾಡಿದ್ದಾರೆ. ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ ಅರ್ಧಶತಕ ಬಾರಿಸಿದ್ದು ಬಿಟ್ರೆ ಉಳಿದವರಿರಿಂದ ಬಿಗ್ ಇನ್ನಿಂಗ್ಸ್ ಬರಲಿಲ್ಲ. ಇಂಗ್ಲೆಂಡ್ ಬ್ಯಾಟರ್ಸ್ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದ್ರು. ಅದ್ರಲ್ಲೂ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಅಂತೂ ಬೇರೆ ಲೆವೆಲ್​ನಲ್ಲಿ ಬ್ಯಾಟ್ ಬೀಸಿದ್ರು. ಮೊದಲ ಇನ್ನಿಂಗ್ಸ್​ನಲ್ಲೇ ಆಂಗ್ಲರು 650+ ರನ್ಸ್ ಕಲೆ ಹಾಕಿದ್ರು. ಸೋ ಭಾರತಕ್ಕೆ ಪಂದ್ಯ ಸೋಲೋದು ಅಥವಾ ಡ್ರಾ ಮಾಡಿಕೊಳ್ಳೋಕೆ ಅಷ್ಟೇ ಸಾಧ್ಯ.

ಇದನ್ನೂ ಓದಿ : ಗೆಲ್ಲೋ ಪಂದ್ಯ ಕೈಚೆಲ್ಲಿದ ಗಿಲ್ – 30 ರನ್ಸ್ ಗಾಗಿ ಬೌಲರ್ಸ್ ಗೆ ಬೆಂಚ್

ಜೋರೂಟ್ ಹಾಗೇ ಬೆನ್ ಸ್ಟೋಕ್ ಸೆಂಚುರಿ ಮತ್ತು ಕ್ರೌಲಿ, ಡಕೆಟ್, ಪೋಪ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಪಸ್ಟ್ ಇನ್ನಿಂಗ್ಸ್​ನಲ್ಲೇ 669 ರನ್ಸ್ ಕಲೆ ಹಾಕಿದೆ. ಹೀಗಾಗಿ ಭಾರತ ಈ ಪಂದ್ಯವನ್ನ ಗೆಲ್ಲುತ್ತೆ ಅನ್ಕೊಳ್ಳೋದು ಕಷ್ಟ ಸಾಧ್ಯ. ಸೋ ಟೀಮ್ ಇಂಡಿಯಾ ಮುಂದಿರುವುದು ಡ್ರಾ ಆಯ್ಕೆ ಮಾತ್ರ. ಯಾಕಂದ್ರೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ರೂ ಟೀಮ್ ಇಂಡಿಯಾ ಬ್ಯಾಟರ್​ಗಳಿಂದ 200 ರಿಂದ 300 ರನ್​ಗಳಿಸಲಷ್ಟೇ ಸಾಧ್ಯವಾಗುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಐದನೇ ದಿನದಾಟದಲ್ಲೂ ಬ್ಯಾಟಿಂಗ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತೆ. ಇಲ್ಲ ನಾವು ಆಂಗ್ಲರು ನೀಡಿರೋ 300+ ರನ್ಸ್ ಮುನ್ನಡೆಯನ್ನೂ ಮೀರಿ ಬಿಗ್ ಟಾರ್ಗೆಟ್ ನೀಡ್ತೀವಿ ಅಂತಾ ಅಟ್ಯಾಕಿಂಗ್ ಮೋಡ್​ನಲ್ಲಿ ಬ್ಯಾಟ್ ಬೀಸಿದ್ರೂ ಮತ್ತೆ ದೊಡ್ಡ ಮೊತ್ತದ ಟಾರ್ಗೆಟ್ ಸೆಟ್ ಮಾಡೋದು ಕಷ್ಟ. ಅಂದ್ರೆ ಟೀಂ ಇಂಡಿಯಾ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 500+ ರನ್ಸ್ ಸ್ಕೋರ್ ಮಾಡ್ಬೇಕಾಗುತ್ತೆ. ಆದ್ರೆ ಆಲ್ರೆಡಿ ಉತ್ತಮ ಲೀಡ್ ಸಾಧಿಸಿರೋದ್ರಿಂದ ಇಂಗ್ಲೆಂಡ್ ತಂಡಕ್ಕೆ ಅಡ್ವಾಂಟೇಜಸ್ ಜಾಸ್ತಿ ಇದೆ. ಹೀಗಾಗಿ ಭಾರತ ತಂಡ ಈ ಪಂದ್ಯವನ್ನು ಡ್ರಾನತ್ತ ಮುನ್ನಡೆಸಿದ್ರೆ ಮಾತ್ರ ಸರಣಿಯಲ್ಲಿ ಉಳಿಬೋದು. ಯಾಕಂದ್ರೆ ಇತಿಹಾಸ ಕೆದಕಿ ನೋಡಿದ್ರೂ ಭಾರತ 150+ ರನ್ಸ್ ಹಿನ್ನಡೆ ಸಾಧಿಸಿ ಗೆದ್ದಿರೋದೇ 2 ಸಲ .

ಭಾರತ ತಂಡವು ಟೆಸ್ಟ್ ಕ್ರಿಕೆಟ್​ನ ಇತಿಹಾಸದಲ್ಲಿ ಮೊದಲ ಇನಿಂಗ್ಸ್​ನಲ್ಲಿ​ 127 ಬಾರಿ 150+ ರನ್​ಗಳ ಹಿನ್ನಡೆ ಅನುಭವಿಸಿದೆ. ಈ ವೇಳೆ ಟೀಮ್ ಇಂಡಿಯಾ 93 ಬಾರಿ ಸೋಲನುಭವಿಸಿದೆ. ಇನ್ನು 32 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹಾಗೆಯೇ ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಅಂದರೆ 150+ ರನ್​ಗಳ ಹಿನ್ನಡೆ ಅನುಭವಿಸಿ ಟೀಮ್ ಇಂಡಿಯಾ ಸೋತಿದ್ದೇ ಹೆಚ್ಚು. ಈಗಾಗಲೇ ಇಂಗ್ಲೆಂಡ್ ತಂಡ 300+ ರನ್​ಗಳ ಮುನ್ನಡೆ ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆ ಇಲ್ಲ. ಇದೇ ಕಾರಣದಿಂದಾಗಿ ಭಾರತ ತಂಡವು ಗೆಲ್ಲುವ ಪ್ರಯತ್ನಕ್ಕಿಂತ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯತ್ನಿಸಬೇಕಿದೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸಬಹುದು. ಹಾಗೇನಾದ್ರೂ ಈ ಪಂದ್ಯ ಕೈಚೆಲ್ಲಿದ್ರೆ ಪಂದ್ಯದ ಜೊತೆ ಸರಣಿಯನ್ನೂ ಕಳ್ಕೊಳ್ಬೇಕು.

ಈ ಪಂದ್ಯದಲ್ಲಿ ಇನ್ನೊಂದು ವಿಶೇಷ ಅಂದ್ರೆ 250+ ಲೀಡ್ ಹಾಗೇ ಬೆನ್ ಸ್ಟೋಕ್ಸ್ ಸೆಂಚುರಿ ಆದ್ಮೇಲೆ ಇಂಗ್ಲೆಂಡ್ ತಂಡ ಬಾಝ್ ಬಾಲ್ ಸ್ಟೈಲಲ್ಲಿ ಅಟ್ಯಾಕಿಂಗ್ ಬ್ಯಾಟಿಂಗ್​ ಮೋಡ್​​ನಲ್ಲಿತ್ತು. ಬೆನ್ ಸ್ಟೋಕ್ಸ್ ಹಾಗೇ ಕಾರ್ಸ್ ಸಿಕ್ಸ್, ಫೋರ್ಸ್ ಮೂಲಕವೇ ಡೀಲ್ ಮಾಡ್ತಿದ್ರು. ಅವ್ರ ಆಟಕ್ಕೆ ಭಾರತದ ಫೀಲ್ಡರ್ಸ್ ಸೈಲೆಂಟ್ ಆಗಿದ್ರು. ಇಂಗ್ಲೆಂಡ್ ತಂಡ 311 ರನ್ ಗಳನ್ನ ನೀಡಿದ್ರೂ ಕೂಡ ಟೀಂ ಇಂಡಿಯಾ ಬ್ಯಾಟರ್ಸ್ ಚೇಸ್ ಮಾಡೋ ಕಾನ್ಫಿಡೆನ್ಸ್ ನಲ್ಲೇ ಇರ್ಲಿಲ್ಲ. ಭಾರತದ ಪರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೇ ಔಟ್ ಆದ್ರು. ನಾಲ್ಕು ಬಾಲ್ ಗಳನ್ನ ಫೇಸ್ ಮಾಡಿ ಕ್ಯಾಚ್ ಔಟ್ ಆದ್ರು. ಇನ್ನು ಅದೇ ಓವರ್​ನಲ್ಲೇ ಸಾಯಿ ಸುದರ್ಶನ್ ಗೋಲ್ಡನ್ ಡಕ್ ಆದ್ರು. ಟೀಂ ಇಂಡಿಯಾ ಖಾತೆ ತೆರೆಯದೇ 2 ವಿಕೆಟ್​ಗಳನ್ನ ಕಳ್ಕೊಳ್ತು. ಅಲ್ಲಿಗೆ ಆಲ್ಮೋಸ್ಟ್ ಪಂದ್ಯ ಕೈಜಾರಿದಂತೆಯೇ ಆಗಿದೆ.

Shantha Kumari