ಯಶಸ್ವಿ ಜೈಸ್ವಾಲ್ RUN OUT ರಾಡಿ – ಗಿಲ್ ಬೇಕಂತಲೇ ಔಟ್ ಮಾಡ್ಸಿದ್ರಾ?
ಭಾರತದ ಟೆಸ್ಟ್ ನಲ್ಲಿ ಯಶಸ್ವಿ ಪಾಸ್!

ಯಶಸ್ವಿ ಜೈಸ್ವಾಲ್ RUN OUT ರಾಡಿ – ಗಿಲ್ ಬೇಕಂತಲೇ ಔಟ್ ಮಾಡ್ಸಿದ್ರಾ?ಭಾರತದ ಟೆಸ್ಟ್ ನಲ್ಲಿ ಯಶಸ್ವಿ ಪಾಸ್!

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದ ಎರಡನೇ ದಿನದಾಟಕ್ಕೆ ಕೋಟ್ಯಂತರ ಫ್ಯಾನ್ಸ್ ಕಾಯ್ತಿದ್ರು. ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ಕ್ಯೂರಿಯಸ್ ಆಗಿದ್ರು. ಯಾಕಂದ್ರೆ ಎಲ್ಲರ ಕಣ್ಣು ಇದ್ದದ್ದು ಯಶಸ್ವಿ ಜೈಸ್ವಾಲ್ ಮೇಲೆ. ಫಸ್ಟ್ ಡೇ ಬ್ಯಾಟಿಂಗ್ ನಲ್ಲಿ ಡಾಮಿನೇಟ್ ಮಾಡಿದ್ದ ಜೈಸ್ವಾಲ್ ಎರಡನೇ ದಿನದಾಟದಲ್ಲಿ ಚರಿತ್ರೆ ಸೃಷ್ಟಿಸ್ತಾರೆ ಅಂತಾ ವೇಯ್ಟ್ ಮಾಡ್ತಿದ್ರು. ಬಟ್ ಬ್ಯಾಡ್​ಲಕ್ ರನ್ ಔಟ್ ಆದ್ರು. ಆದ್ರೀಗ ಇದೇ ರನ್​ಔಟ್ ರಾಡಿ ಎಬ್ಬಿಸಿದೆ. ಜೈಸ್ವಾಲ್ ಅರ್ಜೆನ್ಸಿಯಿಂದ ಔಟ್ ಆದ್ರು ಅಂತಾ ಕೆಲವ್ರು ಬಟ್ ಇನ್ನೂ ಕೆಲವ್ರು ಗಿಲ್​​ರನ್ನ ಬ್ಲೇಮ್ ಮಾಡ್ತಿದ್ದಾರೆ.

ಇದನ್ನೂ ಓದಿ: ಗಿಲ್, ಜೈಸ್ವಾಲ್ ಭರ್ಜರಿ ಶತಕ – 518 ರನ್‌ಗಳಿಗೆ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೀತಿರೋ ಭಾರತ ವರ್ಸಸ್ ವೆಸ್ಟ್ ಇಂಡೀಸ್ ನಡುವಿನ ಫಸ್ಟ್ ಇನ್ನಿಂಗ್ಸ್​ನಲ್ಲಿ ಭಾರತದ ಬ್ಯಾಟಿಂಗ್​ ಪವರ್​ಗೆ ಕೆರೆಬಿಯನ್ ಬೌಲರ್​ಗಳು ಅಕ್ಷರಶಃ ಬೆಂಡಾಗಿ ಹೋಗಿದ್ದಾರೆ. ಮೊದಲನೇ ದಿನ ವಿಂಡೀಸ್ ಪಡೆಗೆ ಎರಡು ವಿಕೆಟ್ ಅಷ್ಟೇ ತೆಗೆಯೋಕೆ ಸಾಧ್ಯವಾಗಿತ್ತು. ಌಂಡ್ ಸೆಕೆಂಡ್ ಡೇ ಕೂಡ ಬ್ಯಾಟಿಂಗ್​ನಲ್ಲಿ ಭಾರತೀಯರು ಡಾಮಿನೇಷನ್ ಕಂಟಿನ್ಯೂ ಆಗಿದೆ. ಆದ್ರೆ ಸೆಕೆಂಡ್ ಡೇ ಸ್ಟಾರ್ಟಿಂಗ್​ನಲ್ಲೇ ಯಶಸ್ವಿ ಜೈಸ್ವಾಲ್ ರನ್ ಔಟ್ ಆದ್ರು. ಇದೇ ರನ್ ಔಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಡಬಲ್ ಸೆಂಚುರಿ ಹೊಸ್ತಿಲಲ್ಲಿ ಎಡವಿದ ಜೈಸ್ವಾಲ್!

ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್​ನಲ್ಲಿ ಫಸ್ಟ್​ ಬಾಲ್​ನಿಂದ ಹಿಡಿದು ಲಾಸ್ಟ್ ಬಾಲ್​ವರೆಗೂ ಇಡೀ ದಿನ ಸಾಲಿಡ್ ಫಾರ್ಮ್​ನಲ್ಲಿದ್ದ ಯಶಸ್ವಿ ಜೈಸ್ವಾಲ್ ಹೀರೋ ಆಗಿದ್ರು. ಮೊದಲ ದಿನದಾಟದಲ್ಲಿ 173 ರನ್ ಕಲೆ ಎರಡನೇ ದಿನಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದ್ರು. ಅದೂ ಅಲ್ದೇ ಎರಡನೇ ದಿನದಾಟದಲ್ಲಿ ಜೈಸ್ವಾಲ್ ಡಬಲ್ ಸೆಂಚುರಿ ಕಂಪ್ಲೀಟ್ ಮಾಡಿಕೊಳ್ತಾರೆ ಅಂತಾನೇ ಎಲ್ರ ನಿರೀಕ್ಷೆ ಇತ್ತು. ಇದಕ್ಕಾಗಿ ಕೋಟ್ಯಂತರ ಫ್ಯಾನ್ಸ್ ಕೂಡ ಕಾಯ್ತಿದ್ರು. ಆದ್ರೆ ಸೆಷನ್ ಆರಂಭದಲ್ಲೇ ವಿಕೆಟ್ ಕಳ್ಕೊಳ್ಬೇಕಾಯ್ತು. ಅದೂ ಕೂಡ ರನ್ ಔಟ್ ನಿಂದ. ಎರಡನೇ ದಿನದ ಮೊದಲ ಸೆಷನ್​ನಲ್ಲಿ ಜಸ್ಟ್ 2 ರನ್ ಗಳಿಸಿದ್ದ ಜೈಸ್ವಾಲ್, ಜೇಡನ್ ಸೀಲ್ಸ್ ಎಸೆದ 2ನೇ ಎಸೆತದಲ್ಲಿ ಮಿಡ್ ಆಫ್​ನತ್ತ ಬಾರಿಸಿ ರನ್ ಓಡೋಕೆ ಯತ್ನಿಸಿದ್ರು. ಆದ್ರೆ ನಾನ್ ಸ್ಟ್ರೈಕ್​ನಿಂದ ಶುಭ್​ಮನ್ ಗಿಲ್ ರನ್​ ನಿರಾಕರಿಸಿದರೂ ಅದನ್ನು ನೋಟಿಸ್ ಮಾಡದ ಜೈಸ್ವಾಲ್ ಪಿಚ್​ನ ಅರ್ಧಭಾಗ ದಾಟಿದ್ದರು. ಆ ಬಳಿಕ ವಾಪಸ್ ಓಡಿದ್ರೂ ಕೂಡ  ಅಷ್ಟರಲ್ಲಾಗಲೇ ಚೆಂಡು ವಿಕೆಟ್ ಕೀಪರ್ ಕೈ ಸೇರಿದ್ದು ಸ್ಟಂಪ್ಸ್ ಎಗರಿಸಿದ್ರು. ಪರಿಣಾಮ 175 ರನ್​ಗಳಿಸಿ ಯಶಸ್ವಿ ಜೈಸ್ವಾಲ್ ರನೌಟ್ ಆಗಿ ಪೆವಿಲಿಯನ್ ಸೇರಿದ್ರು.

ಜೈಸ್ವಾಲ್ ಔಟ್ ಗೆ ಗಿಲ್ ಕಾರಣ ಅಂತಾ ಕೆಲವರ ಆಕ್ರೋಶ!

ಇನ್ನು ಜೈಸ್ವಾಲ್ ಔಟ್ ಆಗಿದ್ದಕ್ಕೆ ಶುಭ್​ಮನ್ ಗಿಲ್ ಕಾರಣ ಅಂತಾ ಕೆಲವರು ಬ್ಲೇಮ್ ಮಾಡ್ತಿದ್ದಾರೆ. ಜೈಸ್ವಾಲ್ 200 ಕಂಪ್ಲೀಟ್ ಮಾಡಬಾರದು ಅನ್ನೋ ಕಾರಣಕ್ಕೆ ಜೆಲೆಸ್​ನಿಂದಲೇ ರನ್ ಓಡಲಿಲ್ಲ. ಬೇಕಂತಲೇ ರನ್ ಔಟ್ ಆಗೋ ಥರ ಸೀನ್ ಕ್ರಿಯೇಟ್ ಮಾಡಿದ್ರು ಅಂತಾ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ಗಳನ್ನ ಹಾಕ್ತಿದ್ದಾರೆ. ಸಿಂಗಲ್ ರನ್​ ಓಡಲು ಜೈಸ್ವಾಲ್ ಅರ್ಧ ಕ್ರೀಸ್​ ದಾಟಿ ಬಂದ್ರೂ ಶುಭ್​ಮನ್ ಗಿಲ್ ಕ್ರೀಸ್​ನ ಗೆರೆ ಕೂಡ ಬಿಟ್ಟಿರಲಿಲ್ಲ. ಇದರಿಂದಲೇ ಜೈಸ್ವಾಲ್ ರನೌಟ್​ ಆಗ್ಬೇಕಾಯ್ತು ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ನಿಜ ಹೇಳ್ಬೇಕಂದ್ರೆ ಜೈಸ್ವಾಲ್ ಹೊಡೆದ ಬಾಲ್ ತುಂಬಾ ದೂರ ಹೋಗಿರಲಿಲ್ಲ. ಸೋ ಬಾಲ್​ ಕಡೆನೇ ನೋಡ್ತಿದ್ದ ಗಿಲ್​ಗೆ ಜೈಸ್ವಾಲ್ ಆಲ್ರೆಡಿ ಅರ್ಧ ಕ್ರೀಸ್​ಗೆ ಬಂದದ್ದೂ ಗೊತ್ತಾಗ್ಲಿಲ್ಲ. ಬಟ್ ಅರ್ಜೆಂಟ್ ಮಾಡ್ಕೊಂಡಿದ್ದೇ ಜೈಸ್ವಾಲ್. ಆದ್ರೆ ಡಬಲ್ ಸೆಂಚುರಿ ಮಿಸ್ ಆದ್ರೂ ಈ ಇನ್ನಿಂಗ್ಸ್ ನಿಂದ ಸಾಕಷ್ಟು ರೆಕಾರ್ಡ್ಸ್ ಅಂತೂ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಜೈಸ್ವಾಲ್ ವಿಶ್ವ ದಾಖಲೆ!

ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಜೈಸ್ವಾಲ್ ವಿಶ್ವದಾಖಲೆ ಬರೆದಿದ್ದಾರೆ.  ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 23 ವರ್ಷದೊಳಗೆ ಅತೀ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆರಂಭಿಕ ಆಟಗಾರ ಎಂಬ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಕೇವಲ 48 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಹೆಸರಿನಲ್ಲಿತ್ತು. ಟೆಸ್ಟ್ ಕ್ರಿಕೆಟ್​ನಲ್ಲಿ ಇದುವರೆಗೆ ಏಳು ಶತಕಗಳನ್ನು ಗಳಿಸಿರುವ ಜೈಸ್ವಾಲ್, ಅದರಲ್ಲಿ ಐದನ್ನು 150ಕ್ಕೂ ಹೆಚ್ಚು ರನ್‌ಗಳಾಗಿ ಕನ್ವರ್ಟ್ ಮಾಡಿದ್ದಾರೆ. ಹಾಗೇ ಎರಡು ಡಬಲ್ ಸೆಂಚುರಿಗಳನ್ನೂ ಸಿಡಿಸಿದ್ದಾರೆ.

ಕ್ರಿಕೆಟ್​ನಲ್ಲಿ ಪ್ರತೀ ಬಾಲ್, ಪ್ರತೀ ಸೆಕಂಡ್ ಕೂಡ ಗೇಮ್ ಚೇಂಜಿಂಗ್ ಟೈಂ ಆಗಿರುತ್ತೆ. ಸಮ್ ಟೈಮ್ಸ್ ಫ್ರಾಕ್ಷನ್ಸ್ ಆಫ್ ಸೆಕೆಂಡ್ಸ್​ನಲ್ಲಿ ಟ್ವಿಸ್ಟ್ ಸಿಕ್ಕಿಬಿಡುತ್ತೆ. ಜೈಸ್ವಾಲ್ ವಿಚಾರದಲ್ಲೂ ಇದೇ ಆಯ್ತು. ಹೌದು ಜೈಸ್ವಾಲ್ ಕೂಡ ಸೆಕೆಂಡ್ ಫುಲ್ ಕಾನ್ಸಿಡೆನ್ಸ್​ನಲ್ಲೇ ಡಬಲ್ ಸೆಂಚುರಿ ಟಾರ್ಗೆಟ್​ನಲ್ಲೇ ಕ್ರೀಸ್​ಗೆ ಬಂದ್ರು. ಆದ್ರೆ ಅವ್ರದ್ದೇ ಅರ್ಜೆನ್ಸಿಯಿಂದ ರನ್ ಔಟ್ ಆಗ್ಬೇಕಾಯ್ತು. ಬಟ್ ಇನ್ನೂ ಕೆಲವ್ರು ಈ ಆರೋಪವನ್ನ ಗಿಲ್ ಮೇಲೆ ಹೊರಿಸ್ತಿದ್ದಾರೆ.

 

Kishor KV