ಮುಂಬೈನಲ್ಲೂ ಯಶ್, ರಾಧಿಕಾ ಹವಾ! – ಸ್ಯಾಂಡಲ್ ವುಡ್ ಜೋಡಿ ಮುಂಬೈಗೆ ಹೋಗಿದ್ಯಾಕೆ?

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲಲಿ ಒಂದು ಅಂತಲೇ ಹೇಳಬಹುದು. ಈ ಜೋಡಿ ಏನು ಮಾಡಿದರು ಸುದ್ದಿಯಾಗುತ್ತೆ.. ಇದೀಗ ಈ ಮುದ್ದಾದ ಜೋಡಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇವ್ರ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಮುಂಬೈನಲ್ಲಿ ರೋಹಿತ್ ಗೆ ಪದೇಪದೆ ಅವಮಾನ – ಫೀಲ್ಡಿಂಗ್ ವೇಳೆ ಬೆಂಚ್ ಕಾಯಿಸಿದ ಫ್ರಾಂಚೈಸಿ
ರಾಕಿಂಗ್ ಸ್ಟಾರ್ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜೊತೆ ಮುಂಬೈಗೆ ಆಗಮಿಸಿದ್ದಾರೆ. ಬ್ರೇಕ್‌ನ ಬಳಿಕ ಮತ್ತೆ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗೆ ಯಶ್ ವಾಪಸ್ ಆಗಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ರಾಕಿ ಭಾಯ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಯಶ್ ಹೊರಬರುತ್ತಿದ್ದಂತೆ ರಾಕಿ ಭಾಯ್ ಎಂದು ಪಾಪರಾಜಿಗಳು ಕೂಗಲು ಶುರು ಮಾಡಿದ್ದಾರೆ. ಹಾಗಾಗಿ ಪಾಪರಾಜಿಗಳ ಕ್ಯಾಮೆರಾಗೆ ಸ್ಟೈಲೀಶ್ ಆಗಿ ಲುಕ್ ಕೊಟ್ಟು ಕೈಬಿಸಿ ಯಶ್ ತೆರಳಿದ್ದಾರೆ. ಈ ವೇಳೆ, ರಾಧಿಕಾ ಕೈಹಿಡಿದು ಬಂದ ಯಶ್ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಬೆಸ್ಟ್ ಜೋಡಿ ಎಂದೆಲ್ಲಾ ನೆಟ್ಟಿಗರು ಕೊಂಡಾಡಿದ್ದಾರೆ.
ಇನ್ನೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಬೆಂಗಳೂರು ಹಾಗೂ ಮುಂಬೈನಲ್ಲಿ ನಡೆಯುತ್ತಿದೆ. ಇದರ ನಡುವೆ ಮುಂದಿನ ವರ್ಷ ಮಾ.19ರಂದು ‘ಟಾಕ್ಸಿಕ್’ ರಿಲೀಸ್ ಮಾಡೋದಾಗಿ ಯಶ್ ಈಗಾಗಲೇ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ.