ಮಕ್ಕಳಿಗೆ ರಿಯಲ್ ಫಾರೆಸ್ಟ್ ತೋರಿಸಿದ ರಾಕಿಂಗ್ ಸ್ಟಾರ್ – ಪತ್ನಿ ಜೊತೆ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ ಯಶ್

ಮಕ್ಕಳಿಗೆ ರಿಯಲ್ ಫಾರೆಸ್ಟ್ ತೋರಿಸಿದ ರಾಕಿಂಗ್ ಸ್ಟಾರ್ – ಪತ್ನಿ ಜೊತೆ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್, ಮೈಸೂರು ಪ್ರವಾಸದಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆಯೂ ಯಶ್ ಕುಟುಂಬ ಸಮೇತರಾಗಿ ಪ್ರವಾಸ ಕೈಗೊಂಡಿದ್ದಾರೆ. ಕೊರೋನಾದಿಂದಾಗಿ ಮೈಸೂರು ಕಡೆ ಪ್ರವಾಸ ಮಾಡಲು ಯಶ್ ಗೆ ಆಗಿರಲಿಲ್ಲವಂತೆ. ಹಾಗಾಗಿ ಇಬ್ಬರು ಮಕ್ಕಳು, ಪತ್ನಿ ರಾಧಿಕಾ ಪಂಡಿತ್ ಮತ್ತು ಅತ್ತೆ, ಮಾವನ ಜೊತೆ ಮೈಸೂರಿಗೆ ಆಗಮಿಸಿದ್ದರು. ಮಕ್ಕಳಿಗೆ ಲೈವ್ ಆಗಿ ಕಾಡು ಪ್ರಾಣಿಗಳನ್ನು ತೋರಿಸಲು ಕುಟುಂಬ ಸಮೇತ ನಾಗರಹೊಳೆ ಕಾಡಿಗೆ ಬಂದಿದ್ದ ಅವರು, ಸತತ ಮೂರು ದಿನಗಳ ಕಾಲ ಸಫಾರಿ ಮಾಡಿದ್ದಾರೆ. ನಾನಾ ಪ್ರಾಣಿಗಳನ್ನು ಕಣ್ತುಂಬಿಕೊಂಡ ಯಶ್ ಕುಟುಂಬಕ್ಕೆ ಹುಲಿ ಮಾತ್ರ ನೋಡಲು ಸಿಗಲೇ ಇಲ್ವಂತೆ.

ಇದನ್ನೂ ನೋಡಿ: ಅಪ್ಪನ ಜಾಗಕ್ಕೆ ಮಗಳು ವರ್ಗಾವಣೆ , ತಂದೆ ಕೈಯಿಂದಲೇ ಅಧಿಕಾರ ಸ್ವೀಕಾರ – ಮಂಡ್ಯದ ಪೊಲೀಸ್ ಠಾಣೆಯಲ್ಲಿ ಭಾವುಕ ಕ್ಷಣ..!

ಸಫಾರಿ ಅನುಭವವನ್ನು ಹಂಚಿಕೊಂಡಿರುವ ಯಶ್, , ‘ಮಕ್ಕಳು ಸಫಾರಿ ಎಂಜಾಯ್ ಮಾಡಿದ್ರು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆಯನ್ನು ನೋಡಿದ್ದೇವೆ. ಹುಲಿಯೊಂದು ಸಿಗಲಿಲ್ಲ, ಬೇಜಾರಾಯ್ತು. ಇವತ್ತೂ ಸಫಾರಿ ಮಾಡಬೇಕಿತ್ತು, ಮಳೆ ಕಾರಣಕ್ಕೆ ಹೋಗಲಿಲ್ಲ. ಮುಂದೆ ಮತ್ತೆ ಸಫಾರಿ ಮಾಡಿ ನೋಡಿದ್ರಾಯ್ತು ಅಂತ ಬಂದೆವು’ ಎಂದಿದ್ದಾರೆ. ಸಫಾರಿ ಮುಗಿಸಿಕೊಂಡು ಕುಟುಂಬ ಸಮೇತ ನಂಜನಗೂಡಿಗೆ ಯಶ್ ಆಗಮಿಸಿದರು. ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಯಶ್ ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ. ದೇವಸ್ಥಾನಕ್ಕೆ ಬಂದಾಗ ಯಶ್ ಅಭಿಮಾನಿಗಳು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಇನ್ನು ಆರತಿ ತೆಗೆದುಕೊಂಡ ಬಳಿಕ ಅರ್ಚಕರ ತಟ್ಟೆಗೆ ದಕ್ಷಿಣೆ ಹಾಕುವಾಗ ಮಗಳು ಐರಾ, ಎಡಗೈ ಬಳಸಿದಳು. ಆಗ ಮಗಳಿಗೆ ಯಶ್ ಅವರು ಪ್ರೀತಿಯಿಂದ ತಿಳಿಹೇಳಿದರು. ‘ರೈಟ್ ಹ್ಯಾಂಡ್ನಲ್ಲಿ ಹಾಕಬೇಕು ಮಗಳೇ..’ ಎಂದು ಬುದ್ಧಿ ಹೇಳಿದರು.

suddiyaana